Back

ಇತಿಹಾಸ


ಬಿಶಪ್ ಒಬ್ಬರ ಕನಸು ಹಾಗೂ ಮಹಾರಾಜರ ಧಾರಾಳತೆ, ಇವೆರೆಡರ ಸಮ್ಮಿಲನವು 1946ನೇ ಇಸವಿಯ ಅಕ್ಟೋಬರ್ 6ನೇ ದಿನಾಂಕದಂದು ಸೈಂಟ್ ಫಿಲೋಮನಾಸ್ ಕಾಲೇಜ್ ಎಂಬ ಮಹಾವಿದ್ಯಾಲಯದ ಪ್ರತಿಷ್ಠಾಪನೆ ಯಲ್ಲಿ ಮುಕ್ತಾಯಗೊಂಡಿತು.ಮೈಸೂರಿನ ಪ್ರಪ್ರಥಮ ಬಿಶಪ್, ಹಿಸ್ ಎಕ್ಸೆಲೆನ್ಸಿ ರೈಟ್ ರೆವೆರೆಂಡ್ ರೆನೆ ಫುಗಾ ಅವರು ತರಗತಿಗಳನ್ನು ನಡೆಸಲೆಂದು ತಮ್ಮ ಭವನವನ್ನು ಕಾಲೇಜ್ ಗಾಗಿ ಬಿಟ್ಟುಕೊಟ್ಟರು. ಡಯೊಸಿಸ್ ಕೈಗೊಂಡಿದ್ದ ಉನ್ನತ ಶಿಕ್ಷಣದ ಈ ಪ್ರಥಮ ಪ್ರಯತ್ನವನ್ನು ಮೈಸೂರಿನ ರಾಜ ಮನೆ ತನದವರಾದ ಒಡೆಯರ್ ಅವರು ಉತ್ತೇಜಿಸಿದರು. ಸೈಂಟ್ ಫಿಲೋಮಿನಾಸ್ ಕಾಲೇಜ್, ಮೈಸೂರಿನ ಶ್ರೀಮನ್ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಂದಲೇ ಉದ್ಘಾಟನೆಗೊಂಡಿತು. ಇದು ಆ ಸಂಸ್ಥೆಗೆ ದೊರೆತ ಅಪೂರ್ವ ಗೌರವ ಹಾಗೂ ಸುಯೋಗ.

ಇಲ್ಲಿ ಒಂದೇ ಒಂದು ಮಾತ್ರವಲ್ಲ, ಹಲವಾರು ರೀತಿಗಳಲ್ಲಿ ಇತಿಹಾಸವು ಸ್ಥಾಪಿತಗೊಳ್ಳವುದರಲ್ಲಿದೆ ಎಂದು ಆ ಕಾಲೇಜಿನ ಮೊದಲ ತಂಡದ ವಿದ್ಯಾರ್ಥಿಗಳಾದ 380 ’ಫಿಲೋಮನೈಟ್’ ಗಳಿಗೆ ಆಗಲೇ ಅರಿವಾಗಿತ್ತು. ರಾಜಪ್ರಭುತ್ವದ ಆಡಳಿತದಲ್ಲಿದ್ದ ನಗರದಲ್ಲಿರುವ ಹಾಗೂ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಅಂಗೀಕೃತಗೊಂಡಿರುವ ಮೊಟ್ಟಮೊದಲ ಖಾಸಗಿ ಪ್ರಥಮ ಶ್ರೇಣಿಯ ಮಹಾವಿದ್ಯಾಲಯದೊಳಗೆ ತಾವೆಲ್ಲರೂ ಅಡಿ ಇಡುತ್ತಿದ್ದೇವೆಂದು ಅವರಿಗೆ ತಿಳಿದಿತ್ತು. ಇದಕ್ಕಿಂತಲೂ ಮಖ್ಯವಾದದ್ದೆಂದರೆ, ಈ ಸೈಂಟ್ ಫಿಲೋಮಿನಾಸ್ ಕಾಲೇಜ್ ಹಳೆಯ ಮೈಸೂರು ಪ್ರಾಂತ್ಯಲ್ಲಿ ವಿಜ್ಞಾನಶಾಸ್ತ್ರವನ್ನು ಭೋಧಿಸುವ ಮೊದಲ ಖಾಸಗಿ ಪದವಿ ಕಾಲೇಜಾಗಿತ್ತು

ಸೈಂಟ್ ಫಿಲೋಮಿನಾಸ್ ಕಾಲೇಜ್ ನ ಧ್ಯೇಯ ಸೂತ್ರವನ್ನು ಅದರ ಸ್ಥಾಪನೆಗೆ ಮೊದಲೇ, ಪೂಜ್ಯಪಾದರಾದ ಪೋಪ್ ಅವರಿಂದ ಸ್ವೀಕರಿಸಲಾಗಿತ್ತು. ಪೂಜ್ಯ ತಂದೆ, ಪೋಪ್ ಅವರು, “Caritas vestra magis ac magis abundet in scientia” , ಅಂದರೆ, “ನಿನ್ನ ಪ್ರೀತಿ, ಜ್ಞಾನದ ಮೂಲಕ ಮತ್ತಷ್ಟೂ ಶ್ರೀಮಂತವಾಗಿ ಬೆಳೆಯಲಿ” ಎಂಬ ಸೂತ್ರವಾಕ್ಯವನ್ನು ಆಯ್ಕೆ ಮಾಡಿದ್ದರು.ಸೂತ್ರವಾಕ್ಯದ ಮೊದಲ ಮತ್ತು ಕೊನೆಯ ಪದಗಳಾದ Caritas in Scientia -“ಜ್ಞಾನದಲ್ಲಿ  ಪ್ರೀತಿ” ಫಿಲೋಮಿನಾಸ್ ಕಾಲೇಜಿನ ಧ್ಯೇಯ ಸೂತ್ರವಾಯಿತು.

ಅದರ ಕಿಶೋರಾವಸ್ಥೆಯ ವರುಷಗಳಲ್ಲಿ, ಕಾಲೇಜಿನ ಭವಿಷ್ಯವು ಅತ್ಯಂತ ಸಾಮರ್ಥ್ಯವುಳ್ಳ ಶಿಕ್ಷಕರಿಂದ ರೂಪುಗೊಂಡಿತು. ಇಂತಹ ಶಿಕ್ಷಕರಲ್ಲಿ ಆಧುನಿಕ ಕನ್ನಡ ಕಾವ್ಯದ ಮುನ್ನಡೆಯಲ್ಲಿ ಪ್ರಮುಖರಾಗಿದ್ದ ಪ್ರೊಫೆಸರ್ ಗೋಪಾಲಕೃಷ್ಣ ಅಡಿಗ ಅವರು, ಹಾಗೂ ಐ ಎಸ್ ಆರ್ ಒ ಸಂಸ್ಥೆಯ ಪೂರ್ವ ಅಧ್ಯಕ್ಷರಾಗಿದ್ದ ಪ್ರೊಫೆಸರ್ ಯು.ಆರ್.ರಾವ್ ಅವರು ಮತ್ತು ಹಲವರಿದ್ದರು. ಹಲವಾರು ಉನ್ನತ ಮಾರ್ಗದರ್ಶಕರಾದ ಪ್ರಾಂಶುಪಾಲರು ಹಾಗೂ ಶಿಕ್ಷಕರೂ ಸಹ ಕಾಲೇಜನ ಭವಿಷ್ಯವನ್ನು ರೂಪಿಸುವುದರಲ್ಲಿ ಭಾಗಿಗಳಾಗಿದ್ದರು.

ಈಗ, 72 ವರ್ಷಗಳ ನಂತರ, ವಿದ್ಯಾರ್ಥಿ ಸಂಖ್ಯಾಬಲವು ಪರಿಪರಿಯಾಗಿ ಇಮ್ಮಡಿ, ಮುಮ್ಮಡಿಗೊಂಡಿದೆ. ಹೊಸ ಹೊಸ ಕಟ್ಟಡಗಳು ನಿರ್ಮಾಣಗೊಂಡು ಹಲವಾರು ಮೂಲ ವ್ಯವಸ್ಥೆಗಳ ಹಾಗೂ ವ್ಯಾಸಂಗ ವಿಷಯ ಸರಣಿಗಳ ಸಂಖ್ಯಾಭಿವೃಧ್ಧಿಯಾಗಿದೆ. ಪ್ರತಿ ವರ್ಷ, ಸೈಂಟ್ ಪಿಲೋಮಿನಾಸ್ ಕಾಲೇಜು ಹೊಸದರೊಂದಿಗೆ ಹಳೆಯದನ್ನು ಸಮನ್ವಯ ಗೊಳಿಸುತ್ತಾ ಪ್ರಪಂಚದಲ್ಲಿ ಉಂಟಾಗುತ್ತಿರುವ ತ್ವರಿತ ಬದಲಾವಣೆಗಳಿಗೆ ಹೊಂದಿಕೊಳ್ಳಲು ತನ್ನನ್ನು ತಾನು ಪುನರ್- ಕಲ್ಪಿಸಿಕೊಳ್ಳುತ್ತದೆ. ಹಳೆಯ ವಿಭಾಗಗಳು-ಹೊಸವಿಭಾಗಳು – ಈ ಪ್ರಕ್ರಿಯೆ ಮುಂದುವರಿಯುತ್ತಲೇ ಇದ್ದು ಅದು ಕಾಲೇಜಿನ ಕ್ಷೇತ್ರ ವ್ಯಾಪ್ತಿಯ ವೈವಿಧ್ಯತೆಯನ್ನು ವೃಧ್ದಿಗೊಳಿಸುತ್ತಿದೆ. ಬಯೊ ಟೆಕ್ನಾಲಜಿ, ಬಯೊ ಕೆಮಿಸ್ಟ್ರಿ, ಮೈಕ್ರೊ ಬಯಾಲಜಿ, ಇಲೆಕ್ಟ್ರಾನಿಕ್ಸ್ (ವಿದ್ಯುನ್ಮಾನಶಾಸ್ತ್ರ), ಗಣಕ ಯಂತ್ರ ವಿಜ್ಞಾನ, ಸೋಷಿಯಲ್ ವರ್ಕ್, ಕಮ್ಮ್ಯೂನಿಕೇಶನ್‍ಚಿಟಿಜ ಜರ್ನಲಿಸಮ್, ಹಾಗೂ ಯು ಜಿ ಸಿ ಪ್ರಾಯೋಜಿತ ಕಾರ್ಯಕಾರಿ ಇಂಗ್ಲಿಷ್ ಭಾಷೆಯಲ್ಲಿ ಬೋಧಿಸಲಾಗುವ ವೃತ್ತಿಪರ ಪಠ್ಯವಿಷಯಗಳು, ಈ ಮುಂತಾದ ನವನವೀನ, ಕುತೂಹಲಕರ ಹಾಗೂ ಸಮಕಾಲೀನ ಪಠ್ಯ ವಿಷಯಗಳ ಒಟ್ಟೊಟ್ಟಿಗೆ ಸಾಂಪ್ರದಾಯಿಕ ಪಠ್ಯ ವಿಷಯಗಳೂ ಅಸ್ತಿತ್ವದಲ್ಲಿವೆ. ಇವೆಲ್ಲದರೊಂದಿಗೆ ವ್ಯವಹಾರ ಆಡಳಿತ ಸ್ನಾತಕ ಪದವಿ(ಬ್ಯಾಚೆಲರ್ ಆಫ್ ಬಿಸ್ನೆಸ್ ಅಡ್ಮಿನಿಸ್ಟ್ರೇಶನ್), ಕಂಪ್ಯೂಟರ್ ಅಪ್ಲಿಕೇಶನ್ಸ್ ಸ್ನಾತಕ ಪದವಿ, ಬ್ಯಾಚೆಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿ ಸಿ ಎ), ಬ್ಯಾಚೆಲರ್ ಆಫ್ ಟೂರಿಸಮ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್(ಬಿ ಟಿ ಹೆಚ್ ಎಮ್), ಮತ್ತು ಬಯೊ ಟೆಕ್ನಾಲಜಿ, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಇಲೆಕ್ಟ್ರಿಕ್ ಮತ್ತು ಇಲೆಕ್ಟ್ರಾನಿಕ್ ಎಕ್ವಿಪ್ ಮೆಂಟ್ ಮೈಂಟೆನೆನ್ಸ್, ಮತ್ತು ಕಂಪ್ಯೂಟರ್ ನೆಟ್ ವರ್ಕಿಂಗ್ ಈ ಮುಂತಾದ ಯು ಜಿ ಸಿ ವತಿಯಿಂದ ಪೂರಕ ಪಡಿಸಲ್ಪಟ್ಟಿರುವ ಪಠ್ಯ ವಿಷಯಗಳೂ ಸೇರ್ಪಟ್ಟಿವೆ.

ಸ್ನಾತಕ ಪದವಿ ಮಟ್ಟದಲ್ಲಿ ಸೈಂಟ್ ಫಿಲೋಮಿನಾಸ್ ಕಾಲೇಜು,ಬಿ.ಎ., ಬಿ.ಎಸ್ಸಿ., ಬಿ.ಕಾಮ್.,ಬಿಬಿಎ, ಬಿಎಸ್ ಡಬ್ಲ್ಯೂ, ಬಿಸಿಎ, ಬಿಟಿಹೆಚ್ ಎಮ್ ಹಾಗೂ ಹೆಲ್ತ್ ಕೇರ್ ಟೆಕ್ನಾಲಜಿ, ಮೀಡಿಯ ಮತ್ತು ಎಂಟರ್ಟೈನ್ ಮೆಂಟ್ ಇವೆರೆಡರ ಔದ್ಯೋಗಿಕ ಪಠ್ಯಕ್ರಮ ಸ್ನಾತಕ ಪದವಿ/ಬ್ಯಾಚೆಲರ್ ಆಫ್ವೋಕೇಷನಲ್ (ಔದ್ಯೋಗಿಕ)ಪದವಿ ಗಳನ್ನು ನೀಡುತ್ತದೆ. ಈ ಪದವಿಗಳಷ್ಟೇ ಅಲ್ಲದೆ, ರಸಾಯನಶಾಸ್ತ್ರ(ಕೆಮಿಸ್ಟ್ರಿ), ಭೌತ ಶಾಸ್ತ್ರ/ಫಿಸಿಕ್ಸ್,ಗಣಕ ವಿಜ್ಞಾನ/ಕಂಪ್ಯುಟರ್ ಸೈನ್ಸ್,ಸಾಮಾಜಿಕ ಕೆಲಸ/ಸೋಶಿಯಲ್ ವರ್ಕ್, ವಾಣಿಜ್ಯ/ಕಾಮರ್ಸ್, ಇಂಗ್ಲಿಷ್, ಸಂವಹನ ಮತ್ತು ಪತ್ರಿಕೋದ್ಯಮ/ಕಮ್ಯುನಿಕೇಶನ್ ಮತ್ತು ಜರ್ನಲಿಸಂ,ಅರ್ಥ ಶಾಸ್ತ್ರ/ಎಕನಾಮಿಕ್ಸ್, ಸಮಾಜ ಶಾಸ್ತ್ರ/ಸೋಶಿಯಾಲಜಿ, ಗಣಿತ ಶಾಸ್ತ್ರ/ಮ್ಯಾಥೆಮ್ಯಾಟಿಕ್ಸ್, ಕ್ರಿಶ್ಚಿಯನ್ ದರ್ಮ/ಕ್ರಿಸ್ಟಿಯಾನಿಟಿ ಮತ್ತು ಹೋಲಿಸ್ಟಿಕ್ ಸ್ಪಿರಿಚ್ಯುಆಲಟಿ, ಈ ಪಠ್ಯವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನೂ ಇಲ್ಲಿ ನೀಡಲಾಗುತ್ತದೆ. ಅತ್ಯುನ್ನತ ಮಟ್ಟದ ಮೂಲ ವ್ಯವಸ್ಥೆಗಳಿಂದ ಕೂಡಿರುವ ಈ ಕಾಲೇಜಿನ ಗ್ರಂಥಾಲಯವು ಮುದ್ರಿತ ಪುಸ್ತಕಗಳ ಜೊತೆಗೆ ಡಿಜಿಟಲ್ ವ್ಯವಸ್ಥೆಯನ್ನುಹೊಂದಿರುತ್ತದೆ. ಬಹುತೇಕ ತರಗತಿಗಳಲ್ಲಿ ಎಲ್ ಸಿ ಡಿ ಪ್ರೊಜೆಕ್ಟರ್ ನ್ನು ಜೋಡಿಸಲಾಗಿರುತ್ತದೆ. ಕಾಲೇಜಿನ ಸಮಗ್ರ ಕ್ಷೇತ್ರಾವರಣವು ಒ ಎಫ್ ಸಿ ಜಾಲ ಜೋಡಣೆಯಿಂದ ಆವೃತ್ತವಾಗಿರುತ್ತದೆ. ವಿಶಾಲವಾದ ಆಟದ ಮೈದಾನಗಳು ಹಾಗೂ ಹೊಸದಾಗಿ ನಿರ್ಮಾಣಗೊಂಡಿರುವ ’ಒಳಾಂಗಣ ಕ್ರೀಡಾಂಗಣವನ್ನೂ ಈ ಕಾಲೇಜ್ ಹೊಂದಿರುತ್ತದೆ.

ಭಾರತ ದೇಶದ 19 ರಾಜ್ಯಗಳ ಹಾಗೂ ಪ್ರಪಂಚದ 32 ರಾಷ್ಟ್ರಗಳ ವಿದ್ಯಾರ್ಥಿ ಸಮುದಾಯವನ್ನು ಹೊಂದಿರುವ ಸೈಂಟ್ ಫಿಲೋಮಿನಾಸ್ ಕಾಲೇಜು ನಿಜಕ್ಕೂ ಒಂದು “ಜಾಗತಿಕ ಗ್ರಾಮ”.ಈ ಕಾಲೇಜಿನ ಕ್ಷೇತ್ರಾವರಣದಲ್ಲಿ ಬಹು ವೈವಿದ್ಯತೆಯುಳ್ಳ ಸಾಂಸ್ಕೃತಿಕ, ಧಾರ್ಮಿಕ ಮತ್ತು ಜನಾಂಗೀಯ ವೈವಿದ್ಯತೆ ಇದ್ದರೂ ಸಹ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ಸದಸ್ಯರು ಇಲ್ಲಿ ಸಾಮರಸ್ಯ ಭಾವನೆಯಿಂದ ಒಟ್ಟಾಗಿ ಇರುತ್ತಾರೆ

ಸಂತ ಫಿಲೋಮಿನಾಸ್ ಕಾಲೇಜು 2011 ನೇ ಇಸವಿಯಲ್ಲಿ ಸ್ವಯಮಾಧಿಕಾರ(ಸ್ವಾಯತ್ತತೆ) ಹೊಂದಿದ ಕಾಲೇಜ್ ಆಗಿ ಪರಿವರ್ತನೆಗೊಂಡಿತು. ಯು ಜಿ ಸಿ ಯಿಂದ ಈ ಸಂಸ್ಥೆಯು 2015 ಇಸವಿ ಏಪ್ರಿಲ್ ತಿಂಗಳ ಮೊದಲನೇ ತಾರೀಖಿನಿಂದ ‘ಕಾಲೇಜ್ ಆಫ್ ಎಕ್ಸೆಲೆನ್ಸ್’() ಎಂದು ಘೋಷಿಸಲ್ಪಟ್ಟಿತು. ಈ ಮಾನ್ಯತೆಯನ್ನು ಪಡೆದ ಭಾರತದ 14 ಹಾಗೂ ಕರ್ನಾಟಕ ರಾಜ್ಯದ 3 ಕಾಲೇಜ್ ಗಳಲ್ಲಿ ಸಂತ ಫಿಲೋಮಿನಾಸ್ ಕಾಲೇಜು ಒಂದಾಗಿರುವುದು ಈ ಸಂಸ್ಥೆ ಗೆ ಸಂದ ವಿಶೇಷ ಗೌರವ ಆಗಿರುತ್ತದೆ. ಉನ್ನತ ವಿದ್ಯಾಭ್ಯಾಸದ ಸಂಸ್ಥೆಗಳ ಕಾರ್ಯವನ್ನು ಮೌಲ್ಯಿಕರಿಸಿ ಮಾನ್ಯತೆ ನೀಡುವ ದೇಶದ ಉನ್ನತ ಸಂಸ್ಥೆ ಯಾದ ನ್ಯಾಕ್ ಈ ಕಾಲೇಜಿಗೆ ಮೊದಲ ಆವರ್ತದಲ್ಲಿ ಎ+(A+) ಮಾನ್ಯತೆಯನ್ನು
ಹಾಗೂ ಎರಡನೇ ಆವರ್ತದಲ್ಲಿ4.0 ಅಂಕಗಳ ಮಾಪನದಲ್ಲಿ 3.58 ಸಿ ಜ ಪಿ ಎ ನೀಡಿ ಧೃಢೀಕರಿಸಿರುತ್ತದೆ.

ಸೈಂಟ್ ಫಿಲೋಮಿನಾಸ್ ಕಾಲೇಜ್ ತನ್ನ ಇತಿಹಾಸದಲ್ಲಿ ತಾನು ನಡೆದು ಬಂದ ಪಥದಲ್ಲಿ ಹಲವಾರು ವಿಶಿಷ್ಟ ಸೂಚಕಗಳನ್ನು ಸ್ಥಾಪಿಸುತ್ತಾ ಅತಿ ವೇಗದ ಗತಿಯಲ್ಲಿ ಎಲ್ಲಾ ಮಹತ್ವಪೂರ್ಣ ಘಟ್ಟಗಳನ್ನು ದಾಟಿ ಮುಂದುವರಿಯುತ್ತಿದ್ದು, ಶೀಘ್ರದಲ್ಲೇ ತಾನೊಂದು ವಿಶ್ವವಿದ್ಯಾಲಯ ಆಗುವತ್ತ ತನ್ನನ್ನು ಸಜ್ಜುಗೊಳಿಸಿಕೊಳ್ಳುತ್ತಿದೆ.
————————————————————————————
ಎಮ್ ಡಿ ಇ ಎಸ್

ಮೈಸೂರು ಪ್ರಾಂತ್ಯದ ಕ್ಯಾಥೊಲಿಕ್ ಡಯೊಸಿಸನ್ ಆರಂಭಿಸಿದ ಹಲವಾರು ಸಂಸ್ಥೆಗಳನ್ನು ನಡೆಸಲು, ನಿರ್ವಹಿಸಲು ಮತ್ತು ಸುಸಂಘಟಿತವಾಗಿಸಲು ನಿಯೋಜನೆಗೊಂಡ ಮೈಸೂರು ಡಯೊಸಿಸನ್ ಎಜ್ಯುಕೇಶನಲ್ ಸೊಸೈಟಿ ಒಂದು ನೋಂದಾಯಿತ ಸಂಸ್ಥೆಯಾಗಿರುತ್ತದೆ

ಕರ್ನಾಟಕದ ಕುಗ್ರಾಮಗಳಿಂದ ಇಡಿದು ಎಲ್ಲಾ ಮೂಲೆಗಳಲ್ಲೂ ಶೈಕ್ಶಣಿಕ ಇಲಾಖೆಗಳ ಮೂಲ ಉದ್ದೇಶಗಳನ್ನು ಪ್ರಚಾರ ಮಾಡುತ್ತಿರುವ ಅನೇಕ ಪ್ರಸಿದ್ಧ ಕ್ಯಾಥೊಲಿಕ್ ಎಜ್ಯುಕೇಶನಲ್ ಸೊಸೈಟಿ ಗಳಲ್ಲಿ ಇದೂ ಒಂದಾಗಿರುತ್ತದೆ. 1966 ನೇ ಇಸವಿಯ ಮೊದಲೇ ಅಂದರೆ ಮೈಸೂರಿನ ಡಯೊಸಿಸನ್ ಎಜ್ಯುಕೇಶನಲ್ ಸೊಸೈಟಿಯು ನೊಂದಾಯಿತಗೊಳ್ಳುವ ಮೊದಲೇ ಅನೇಕ ಸಂಸ್ಥೆಗಳು ನಮ್ಮ ಈ ಡಯೋಸಿಸ್ ನಿಂದ ಆರಂಭವಾಗಿ ಅದರ ನೇರ ಆಡಳಿತಕ್ಕೆ ಒಳಪಟ್ಟಿದ್ದವು.

ಪ್ರಸಕ್ತವಾಗಿ, ಎಮ್ ಡಿ ಇ ಎಸ್ ಕರ್ನಾಟಕದ 4 ತಾಲ್ಲೂಕುಗಳಾದ ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ, ಇವುಗಳಲ್ಲಿ ಶಿಶುವಿಹಾರಗಳಿಂದ ಮೊದಲ್ಗೊಂಡು ಸ್ನಾತಕೋತ್ತರ ಪದವಿಗಳ ಮಟ್ಟದವರೆಗೂ ಶಿಕ್ಷಣ ನೀಡುವ 150 ಸಂಸ್ಥೆಗಳ ಆಡಳಿತವನ್ನು ನಿರ್ವಹಿಸುತ್ತಿದೆ. ಕೇವಲ ಇನ್ನೆರಡು ವರ್ಷಗಳಲ್ಲಿ ಅಮೃತ ಮಹೋತ್ಸವದ ಸಂಭ್ರಮವನ್ನು ಕಾಣಲಿರುವ ಸೈಂಟ್ ಫಿಲೋಮಿನಾಸ್ ಕಾಲೇಜ್ ಈ ಶುಭಘಳಿಗೆಯಲ್ಲಿ ಎಮ್ ಡಿ ಇ ಎಸ್ ಸಂಸ್ಥೆಯು ನಗರಗಳಲ್ಲಿ ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲಿಯು ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಬದುಕನ್ನುರೂಪಿಸಿದ ನಿಷ್ಠಾವಂತ ಸೇವೆಯನ್ನು ಶ್ಲಾಘಿಸುತ್ತದೆ
ನಮ್ಮ ಹಳೆಯ ವಿದ್ಯಾರ್ಥಿಗಳು ಹಲವಾರು ಎಲ್ಲೆಗಳನ್ನು ಹಾಗೂ ಗಡಿಗಳನ್ನು ದಾಟಿ, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಅಳಿಸಲಾಗದಂತಹ ಗುರುತನ್ನು ಮಾಡಿಸಿರುತ್ತಾರೆ.
2016 ರಲ್ಲಿ ಹೊಸದಾಗಿ ತೆರೆದ ಈ ಶಿಕ್ಷಣ ಸಂಸ್ಥೆಗಳು ನಮಗೆ ಅತ್ಯಂತ ಹೆಮ್ಮೆ ಹಾಗೂ ತೃಪ್ತಿ ತರುವ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳು ಇಂತಿವೆ – ಸೈಂಟ್ ಜೋಸೆಫ್ಸ್ ಕಾಲೇಜ್ ಫಾರ್ ವಿಮೆನ್(ಕಾಮರ್ಸ್ ಮತ್ತು ಆರ್ಟ್ಸ್), ಸಾತಗಳ್ಳಿ; ಸೈಂಟ್ ಜೋಸೆಫ್ಸ್ ಈವ್ನಿಂಗ್ ಕಾಲೇಜ್, ಜಯಲಕ್ಷ್ಮಿಪುರಮ್ ಹಾಗೂ ಇನ್ನೂ ಹಲವಾರು ಸಂಸ್ಥೆಗಳನ್ನು ಆರಂಭಿಸಿರುವುದು ನಮಗೆ
ಹೆಮ್ಮೆಯ ವಿಷಯವಾಗಿದೆ

ನಿಯಮಗಳು ಮತ್ತು ಕಟ್ಟಳೆಗಳು
ಹಲವಾರು ವ್ಯಕ್ತಿಗಳು ಒಗ್ಗೂಡಿ ವಾಸಿಸುವಾಗ, ಅದೂ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಲ್ಲಿ, ಅಲ್ಲಿ ಶಿಸ್ತುಕ್ರಮವಿರುವುದು ಅತ್ಯವಶ್ಯ. ಈ ಶಿಸ್ತುಕ್ರಮವು ರಚನಾತ್ಮಕವೇ ಹೊರತು ದಮನಕಾರಿ ಅಲ್ಲ. ಈ ರಚನಾತ್ಮಕ ಶಿಸ್ತುಕ್ರಮವು ಒಳ್ಳೆಯ ಕ್ರಮಬಧ್ಧ ಹಾಗೂ ಯಶಸ್ವೀ ಜೀವನಕ್ಕೆ ಬೇಕಾಗಿರುವ ಸ್ವಯಂ-ಶಿಸ್ತನ್ನು ಕಾರ್ಯತಃ ಅಭ್ಯಾಸ ಮಾಡಿಕೊಳ್ಳುತ್ತ ತಮ್ಮಲ್ಲಿ ಅದನ್ನು ಅಭಿವೃಧ್ಧಿ ಪಡಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿಸುತ್ತದೆ. ಸೈಂಟ್ ಫಿಲೋಮಿನಾಸ್ ಕಾಲೇಜಿನ ಪ್ರತಿ ಒಬ್ಬ ವಿದ್ಯಾರ್ಥಿಯ ಅನುಕೂಲಕ್ಕಾಗಿ ತನ್ನ ಎಲ್ಲಾ ವಿದ್ಯಾರ್ಥಿಗಳು ನಿಯಮ ಮತ್ತು ಕಟ್ಟಳೆಗಳನ್ನು ಪಾಲಿಸಬೇಕೆಂದು ಇಚ್ಛಿಸುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿಯು ಕಾಲೇಜಿನ ಆವರಣದೊಳಗೆ ಇರುವಾಗ ತನ್ನ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿರ ಬೇಕು ಮತ್ತು ಕಾಲೇಜಿನ ಯಾವುದೇ ಸಿಬ್ಬಂದಿ ಸದಸ್ಯರು / ಅಧಿಕಾರಿಯು ಗುರುತು ಚೀಟಿಯನ್ನು ಪರಿಶೀಲಿಸಲು ಕೋರಿದಾಗ ಅದನ್ನು ತೋರಿಸಬೇಕು.

ತರಗತಿಗಳಿಗೆ ನಿಯಮಿತವಾಗಿ ಹಾಜರಾಗುವುದು ಕಡ್ಡಾಯವಾಗಿರುತ್ತದೆ.ವಿಶ್ವವಿದ್ಯಾಲಯದ ಕಟ್ಟಳೆಗಳ ಅನುಸಾರವಾಗಿ ಶೇಕಡ 75 ಹಾಜರಾತಿ ಹೊಂದಿರಲೇಬೇಕು. ಹಾಗಿಲ್ಲದಿದ್ದಲ್ಲಿ, ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾಗುವಂತಿಲ್ಲ. ನಿಗದಿತ ಪಡಿಸಿರುವಷ್ಟು ಹಾಜರಾತಿ ಇಲ್ಲದೆ ಇದ್ದ ಪಕ್ಷದಲ್ಲಿ, ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಿ ನಷ್ಟವಾಗಿದ್ದ ಹಾಜರಾತಿಯನ್ನು ಸರಿಪಡಿಸುವ ಅವಕಾಶ ಇರುವುದಿಲ್ಲ.

ವಿದ್ಯಾರ್ಥಿಗಳು 75% ಹಾಜರಾತಿ ಹೊಂದದೆ ಇದ್ದಲ್ಲಿ ಅವರು ಯಾವುದೇ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವುದಿಲ್ಲ. ಹಾಗೇನಾದರೂ, ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆದಿದ್ದು, ಆದರೆ, ವರ್ಷದ ಕೊನೆಯಲ್ಲಿ ನಿಗದಿತ ಹಾಜರಾತಿ ಹೊಂದದೆ ಹೋದಲ್ಲಿ ವಿದ್ಯಾರ್ಥಿವೇತನವನ್ನು ಕಾಲೇಜಿಗೆ ಹಿಂದಿರುಗಿಸತಕ್ಕದ್ದು.

ಕಾಲೇಜಿನ ಕೆಲಸದ ವೇಳೆ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಇರುತ್ತದೆ. ತರಗತಿಗಳ ಆರಂಭಕ್ಕೆ 5 ನಿಮಿಷಗಳ ಮುಂಚೆ ಮೊದಲನೆ ಕರೆಗಂಟೆಯನ್ನು ನೀಡಲಾಗುತ್ತದೆ. ಅದನ್ನು ಕೇಳುತ್ತಿದ್ದಂತೆ ವಿದ್ಯಾರ್ಥಿಗಳು ತ್ವರಿತವಾಗಿ ಚಲಿಸಿ ಎರಡನೆ ಕರೆಗಂಟೆ ನೀಡುವ ಮೊದಲೇ ಅವರವರ ತರಗತಿಗಳೊಳಗೆ ಹೋಗಿ ಉಪಸ್ಠಿತರಾಗತಕ್ಕದ್ದು. ಶಿಕ್ಷಕರ ಅನುಮತಿ ಇಲ್ಲದೆ ವಿದ್ಯಾರ್ಥಿಗಳು ತರಗತಿಗಳಿಂದ ಹೊರ ತೆರಳುವಂತಿಲ್ಲ.

ವಿದ್ಯಾರ್ಥಿಗಳು ಕಾಲನಿಷ್ಠೆಯುಳ್ಳವರಾಗಿರ ತಕ್ಕದ್ದು. ಹೊತ್ತು ಮೀರಿ ಬಂದ ವಿದ್ಯಾರ್ಥಿಗಳು ಪ್ರಾಂಶುಪಾಲರ ಅಪ್ಪಣೆ ಚೀಟಿ ಇಲ್ಲದೆ ತರಗತಿಯೊಳಗೆ ಪ್ರವೇಶಿಸುವಂತಿಲ್ಲ. ಹಾಗಾಗಿ, ಯಾವುದೇ ವಿದ್ಯಾರ್ಥಿ/ವಿದ್ಯಾರ್ಥಿನಿ ನಿಯಮಿತವಾಗಿ ತರಗತಿಗಳಿಗೆ ಹೊತ್ತುಮೀರಿ ಬರುತ್ತಿದ್ದರೆ, ಅವನು / ಅವಳಿಗೆ ಮುಂದಿನ ತರಗತಿಗಳಿಗೆ ಹಾಜರಾಗಲು ಅಪ್ಪಣೆ ಇರುವುದಿಲ್ಲ.

ತರಗತಿಯಲ್ಲಿ ಪಾಠ ಹೇಳುವ ನಿರ್ದಿಷ್ಟ ಶಿಕ್ಷಕ/ಶಿಕ್ಷಕಿ ರಜೆಯಲ್ಲಿದ್ದರೆ, ವಿದ್ಯಾರ್ಥಿಗಳು ಕಾಲೇಜಿನ ಗ್ರಂಥಾಲಯಕ್ಕೆ ಹೋಗತಕ್ಕದ್ದು. ತರಗತಿ ನಡೆಯಬೇಕಾದ ಸಮಯದಲ್ಲಿ ಅಥವಾ ಇನ್ಯಾವುದೇ ಸಮಯ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಕಲಿಕಾಕೋಣೆಗಳ ಹತ್ತಿರದ ಪಡಸಾಲೆಗಳಲ್ಲಿ ಗುಂಪುಗೂಡುವಂತಿಲ್ಲ.

ಪಡಸಾಲೆಗಳು, ಸಭಾಂಗಣದ ಮೆಟ್ಟಿಲುಗಳು, ಗ್ರಂಥಾಲಯದ ಮಹಡಿ ಮೆಟ್ಟಿಲುಗಳು, ಅನಾವೃತರಂಗ ಮಂದಿರ, ತಿಂಡಿಕಟ್ಟೆಯ/ಕ್ಯಾಂಟೀನ್ ನ ಸುತ್ತಮುತ್ತಲಿನ ಜಾಗಗಳಲ್ಲಿ ಮತ್ತು ಗ್ರಂಥಾಲಯದ ವಿಭಾಗ, – ಈ ಸ್ಥಳಗಳನ್ನೆಲ್ಲಾ ನಿಶ್ಶಬ್ದ ವಲಯಗಳೆಂದು ಪರಿಗಣಿಸಲಾಗಿದ್ದು, ವಿದ್ಯಾರ್ಥಿಗಳು ಈ ನಿಶ್ಶಬ್ದ ವಲಯಗಳಲ್ಲಿ ಒಟ್ಟಾಗಿ ಸೇರಲು ಅಪ್ಪಣೆ ಇರುವುದಿಲ್ಲ.

ಅನುಚಿತ ನಡವಳಿಕೆ, ಅಸಭ್ಯ ವರ್ತನೆ, ಅವಿಧೇಯತೆ, ರೂಢಿಗತ ಸೋಮಾರಿತನ; ಹಿಂಸಾಚಾರ, ಗುಂಪು ಕಟ್ಟುವುದು,ತರಗತಿಗಳಲ್ಲಿ ಘರ್ಷಣೆ ಹುಟ್ಟಿಸುವುದು, ಕೆಲಸ ಕಾರ್ಯಗಳಲ್ಲಿ ಅನಿಯತವಾಗಿರುವುದು, ಅನುಚಿತ ಭಾಷೆ ಹಾಗೂ ಆಚರಣೆ, ಮಾತು ಹಾಗೂ ವರ್ತನೆಯಲ್ಲಿ ಅಶ್ಲೀಲತೆ – ಇವೆಲ್ಲದರ ಮೂಲಕ ಅಶಿಸ್ತನ್ನು ಎತ್ತಿಕಟ್ಟುವುದು ಅಥವಾ ಪ್ರಚೋದಿಸುವುದು; ಆಯುಧ ಮತ್ತು ಪಟಾಕಿ ತರುವುದು ಅಥವಾ ವಶದಲ್ಲಿಟ್ಟುಕೊಳ್ಳುವುದು; – ಇವೆಲ್ಲವನ್ನೂ ಕಾಲೇಜು ಗಂಭೀರವಾಗಿ ಪರಿಗಣಿಸುವುದರಿಂದ ವಿದ್ಯಾರ್ಥಿಗಳಿಗೆ ದಂಡ ವಿಧಿಸುವುದರ ಮೂಲಕ ಅಥವಾ ವಜಾ ಮಾಡುವುದರ ಮೂಲಕ ಶಿಕ್ಷೆ ನೀಡಬಹುದಾಗಿದೆ
ಕಾಲೇಜು ಮದ್ಯಪಾನ, ಧೂಮಪಾನ ಮತ್ತು ಮಾದಕ ವಸ್ತು ಮುಕ್ತ ಕ್ಷೇತ್ರಾವರಣವೆಂದು ಘೋಷಿಸಲ್ಪಟ್ಟಿದ್ದು, ಇದನ್ನು ಉಲ್ಲಂಘಿಸಿದವರನ್ನು ಕಾಲೇಜಿನಿಂದ ಅಮಾನತ್ತು ಗೊಳಿಸಲಾಗುತ್ತದೆ.

ಕಾಲೇಜ್ ಗೆ ಸಂಬಂಧ ಪಟ್ಟ ಸ್ವತ್ತನ್ನು, ಪೀಠೋಪಕರಣಗಳನ್ನು, ಪ್ರಯೋಗಾಲಯಗಳಿಗೆ ಸಂಬಂಧಪಟ್ಟ ಸಲಕರಣೆಗಳನ್ನು ನಾಶಗೊಳಿಸುವುದು, ಕಾಲೇಜಿನ ಗೋಡೆಗಳ ರೂಪಗೆಡಿಸುವುದು ಇವೆಲ್ಲವೂ ಗಂಭೀರವಾದ ಕಾನೂನುಬಾಹಿರ ಚಟುವಟಿಕೆಗಳೆಂದು ಪರಿಗಣಿಸಲಾಗಿರುತ್ತದೆ. ತರಗತಿಯ ಕೋಣೆಗಳನ್ನು ಶುಧ್ಧವಾಗಿ ಹಾಗೂ ಓರಣವಾಗಿ ಇಡತಕ್ಕದ್ದು. ಬೆಂಚ್ ಗಳ ಮತ್ತು ಡೆಸ್ಕ್ ಗಳ ಮೇಲೆ ಬರೆಯುವುದನ್ನು ಅಥವಾ ಚಿತ್ರಗಳನ್ನು ಬಿಡಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿರುತ್ತದೆ.
ಕಾಲೇಜಿನ ಹೊರಗೆ ಅನುಚಿತ ವರ್ತನೆ ತೋರ್ಪಡಿಸಿದಲ್ಲಿ ಅದು ಕಾಲೇಜಿನ ಖ್ಯಾತಿಯ ಮೇಲೆ ದುಷ್ಪರಿಣಾಮ ಬೀರುತ್ತದಲ್ಲದೆ ವಿದ್ಯಾರ್ಥಿಗಳ ಮೇಲೂ ಪ್ರಭಾವ ಬೀರುತ್ತದೆ.ಇಂತಹ ಘಟನೆಗಳು ಸಂಭವಿಸಿದ್ದೇ ಆದರೆ, ಸೂಕ್ತ ಕ್ರಮ ತೆಗೆದುಕೊಳ್ಳುವ ಮತ್ತು ವಿದ್ಯಾರ್ಥಿ ಸಮುದಾಯದ ಹಿತಾರ್ಥಕ್ಕಾಗಿ ಅವಶ್ಯವಾದ ನಿಯಮಗಳನ್ನು ರಚಿಸಿ ಜಾರಿಗೆ ತರುವ ಹಕ್ಕನ್ನು ಕಾಲೇಜ್ ಕಾದಿರಿಸಿಕೊಂಡಿರುತ್ತದೆ.

ಕಾಲೇಜಿನ ಶಿಷ್ಟ ಸಂಪ್ರದಾಯಕ್ಕೆ ಅನುಗುಣವಾದ ನಡತೆಯನ್ನು ವಿದ್ಯಾರ್ಥಿಗಳಿಂದ ನಿರೀಕ್ಷಿಸಲಾಗುತ್ತದೆ. ಆ ಕಾರಣ, ವಿದ್ಯಾರ್ಥಿಗಳು ಧರಿಸುವ ಉಡುಪುಗಳು ಶುಭ್ರ ಹಾಗೂ ಸಭ್ಯವಾಗಿರತಕ್ಕದ್ದು.

ತರಗತಿಗಳ ಕಲಿಕಾ ಸಮಯದಲ್ಲಿ ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಸಮ್ಮತಿ ಇರುವುದಿಲ್ಲ. ವಿನೋದ ವಿಹಾರ, ಪ್ರವಾಸಗಳನ್ನು ಸಂಘಟಿಸುವಂತಿಲ್ಲ ಅಥವಾ ಪ್ರಾಂಶುಪಾಲರ ಇಲ್ಲವೆ ಕಾಲೇಜಿನ ವ್ಯವಸ್ಥಾಪಕ ಮಂಡಳಿಯ ಸುಸ್ಪಷ್ಟ ಅನುಮತಿ ಇಲ್ಲದೆ ಯಾವುದೇ ರೀತಿಯ ಚಂದಾ —ಪಾವತಿ ಮಾಡುವಂತಿಲ್ಲ.

ಪ್ರಾಂಶುಪಾಲರ ಮುಂಚಿತ ಅನುಮತಿ ಇಲ್ಲದೆ ವಿದ್ಯಾರ್ಥಿಗಳು ತಮ್ಮ ಹೊರಗಿನ ಗೆಳೆಯ-ಗೆಳತಿಯರನ್ನು ಕಾಲೇಜಿನ ಕ್ಷೇತ್ರಾವರಣದೊಳಗೆ ಕರೆ ತರುವಂತಿಲ್ಲ. ಕಾಲೇಜಿನ ವಿದ್ಯಾರ್ಥಿಯಾಗಿರದ ಯಾವುದೇ ವ್ಯಕ್ತಿಯು ಕಾಲೇಜಿನೊಳಗೆ ಇರುವುದನ್ನು ಕಂಡ ಕೂಡಲೇ ಕಾಲೇಜಿನ ನಿಯಮದ ಪ್ರಕಾರ ಆ ವ್ಯಕ್ತಿಯನ್ನು ಪೋಲಿಸರ ವಶಕ್ಕೆ ಹಸ್ತಾಂತರಿಸಲಾಗುತ್ತದೆ.
ಕುಚೇಷ್ಟೆ, ಒರಟು ಹಾಸ್ಯ, ಪುಂಡಾಟ ಇವು ವಿಚಾರಣಾರ್ಹಅಪರಾಧ–. ವಿದ್ಯಾರ್ಥಿಗಳು ಯಾವುದೇ ರೀತಿಯ ಹಾಗೂ ಎಷ್ಟೇ ಕ್ಷುಲ್ಲಕವಾದ ಕುಚೇಷ್ಟೆ/ಪುಂಡಾಟ ಗಳಲ್ಲಿ ತೊಡಗಿದ್ದೇ ಆದರೆ, ಒಡನೆಯೆ ಆ ವಿದ್ಯಾರ್ಥಿ ಅಥವಾ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ವಜಾ ಮಾಡಿ ವಿಚಾರಣೆಗೆ ಗುರಿಪಡಿಸಲಾಗುತ್ತದೆ. ವಿಚಾರಣೆಯ ನಂತರ ಆ ವಿದ್ಯಾರ್ಥಿ / ವಿದ್ಯಾರ್ಥಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ಅವರನ್ನು ಕಾಲೇಜಿನಿಂದ ಅಮಾನತ್ತು ಮಾಡಲಾಗುತ್ತದೆ.

ಯು ಜಿ ಸಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಅಧಿಸೂಚನೆಯ ಪ್ರಕಾರ ಕಾಲೇಜಿನ ಕ್ಷೇತ್ರಾವರಣದ ಒಳಗೆ ಮೊಬೈಲ್ ಫೋನ್ ಗಳ ಬಳಕೆಯನ್ನು ನಿರ್ಬಂಧಿಸಲಾಗಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಅನೇಕ ಪೋಷಕರು ತಾವು ಕಾಲೇಜಿನಿಂದ ಬಹಳ ದೂರದಲ್ಲಿ ವಾಸಿಸುವುದರಿಂದ ತಮ್ಮ ಮಕ್ಕಳ ಕ್ಷೇಮದ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಮಕ್ಕಳೊಂದಿಗೆ ಫೋನ್ ಮೂಲಕ ಮಾತಾಡಬೇಕೆಂದು ವಾದಿಸುತ್ತಾರೆ ಪೋಷಕರ ಆತಂಕವನ್ನು ನಾವು ಗ್ರಹಿಸಬಲ್ಲೆವಾದರೂ ಮೊಬೈಲ್ ಬಳಕೆಗಳ ಬಗ್ಗೆ ಆಗಾಗ್ಗೆ ಹೊರಡಿಸುವ ಸುತ್ತೋಲೆಗಳ ಆದೇಶಗಳಿಗೆ ನಾವು ಬಧ್ಧರಾಗಿದ್ದೇವೆ. ದಯವಿಟ್ಟು ಈ ಬಗ್ಗೆ ಮತ್ತೊಂದು ವಿಷಯವನ್ನು ಗಮನಿಸಿ – ಫೋನ್ ಬಳಕೆ ಮಾಡುವ ವಿದ್ಯಾರ್ಥಿಗಳು ಅಭ್ಯಾಸಬಲದ ಕಾರಣ ಪರೀಕ್ಷೆ ಕೊಠಡಿಗಳಿಗೂ ಫೋನ್ ನ್ನು ಕೊಂಡೊಯ್ಯುವ ಸಂಭವವಿದ್ದು, ಹಾಗೊಮ್ಮೆ ಆದಲ್ಲಿ, ಆ ವಿದ್ಯಾರ್ಥಿಯ ಪರೀಕ್ಷೆಯನ್ನು ರದ್ದು ಪಡಿಸಲಾಗುತ್ತದೆ. ಕಾಲೇಜಿನ ಕಛೇರಿಗೆ, ರೆಕ್ಟರ್ ಅವರಿಗೆ, ಪ್ರಾಂಶುಪಾಲರಿಗೆ ಮತ್ತು ಹಾಸ್ಟೆಲ್ ವಾರ್ಡನ್ ಅವರಿಗೆ ನೀವು ಮಾಡುವ ತುರ್ತು ಕರೆಗಳನ್ನು ದಾಖಲಿಸಿ, ಆ ತುರ್ತು ಮಾಹಿತಿಯನ್ನುವಿದ್ಯಾರ್ಥಿಗಳಿಗೆ ಮುಟ್ಟಿಸುವೆವು ಎಂದು ನಾವು ಈ ಮೂಲಕ ಖಾತ್ರಿ ಪಡಿಸುತ್ತೇವೆ. ಹಾಗೂ, ಯಾವುದೇ ವಿದ್ಯಾರ್ಥಿಯು ಫೋನ್ ಬಳಸುತ್ತಿರುವುದನ್ನು ಗಮನಿಸಿದಲ್ಲಿ, ಆ ವಿದ್ಯಾರ್ಥಿಯಿಂದ ಫೋನನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಅದನ್ನು ಹಿಂದಿರುಗಿಸಲಾಗುವುದಿಲ್ಲ.

ಮೂಲ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿರುತ್ತದೆ. ಕಾಲೇಜಿಗೆ ಪ್ರವೇಶ ದೊರಕಿದೊಡನೆ, ನಮ್ಮ ಕಾಲೇಜನ್ನು ಇತರ ಕಾಲೇಜುಗಳೊಂದಿಗೆ ಹೋಲಿಸಿ ಹೆಚ್ಚು ಸೌಕರ್ಯಗಳಿಗಾಗಿ ಒತ್ತಾಯಿಸ ಬೇಡಿ.

ನಾವು ಎಲ್ಲಾ ಮತಗಳನ್ನು ಹಾಗೂ ಧರ್ಮಗಳನ್ನು ಗೌರವಿಸುತ್ತೇವೆ. ಆದರೆ ಮತದ/ಧರ್ಮದ ಆಧಾರದ ಮೇಲೆ ಯಾವುದೇ ವಿಶೇಷ ಸೌಲಭ್ಯಗಳನ್ನು ಒದಗಿಸುವುದಿಲ್ಲ.

ಯಾವುದೇ ವಿದ್ಯಾರ್ಥಿಯು ಯಾವುದೇ ಕಾರಣಕ್ಕಾಗಿ ಕಾಲೇಜನ್ನು ಬಿಡಲು ಇಚ್ಛಿಸಿದಲ್ಲಿ ಆ ವಿದ್ಯಾರ್ಥಿಯು ಇನ್ನೂ ಉಳಿದಿರುವ ಸೆಮಿಸ್ಟರ್ ಗಳ ಶುಲ್ಕವನ್ನು ಹಾಗೂ ಕಾಲೇಜಿಗೆ ಇನ್ನೇನಾದರೂ ಸಲ್ಲಿಸತಕ್ಕ ಹಣದ ಬಾಕಿ ಇದ್ದಲ್ಲಿ, ಶುಲ್ಕದೊಂದಿಗೆ ಅದನ್ನೂ ಪಾವತಿಸಿದ ನಂತರ ವರ್ಗಾವಣೆ ಅರ್ಹತಾ ಪತ್ರವನ್ನು ನೀಡಲಾಗುವುದು.

ತಂದೆತಾಯಂದಿರು ಮತ್ತು ಪಾಲಕರು ಕಾಲೇಜಿಗೆ ನಿಯಮಿತವಾಗಿ ಭೇಟಿ ನೀಡಿ ತಮ್ಮ ಮಕ್ಕಳ ಆಂತರಿಕ ಮೌಲ್ಯ ನಿರ್ಣಯ ಮತ್ತು ಹಾಜರಾತಿಯ ಬಗ್ಗೆ ವಿಚಾರಿಸ ಬೇಕೆಂದು ಕೇಳಿಕೊಳ್ಳುತ್ತೇವೆ.

ವಿದ್ಯಾರ್ಥಿಗಳು ತಮ್ಮ ವಾಹನಗಳನ್ನು ನಿಗದಿ ಪಡಿಸಿರುವ ಸ್ಥಳದಲ್ಲಿ ಮಾತ್ರ ಇರಿಸತಕ್ಕದ್ದು.
ತಂದೆತಾಯಿಗಳೊಂದಿಗೆ ವಾಸಿಸದ ಅಥವಾ ಹಾಸ್ಟೆಲ್ ನಲ್ಲಿ ವಾಸಿಸದ ವಿದ್ಯಾರ್ಥಿಗಳು ಅವರ ಪ್ರಸಕ್ತ ವಾಸಸ್ಥಳಗಳ ವಿವರಣೆಯನ್ನು ಪ್ರಾಂಶುಪಾಲರಿಗೆ ತಿಳಿಸತಕ್ಕದ್ದು.

ಸರಕಾರದ ಕಾನೂನುಬಧ್ಧ ಆಡಳಿತ ವ್ಯವಸ್ಥೆಗೆ ವಿರುಧ್ಧವಾಗಿ ಚಳವಳಿಗಳಲ್ಲಿ ಭಾಗವಹಿಸಲು ಯಾವ ವಿದ್ಯಾರ್ಥಿಗೂ ಅನುಮತಿ ಇರುವುದಿಲ್ಲ. ಕಾಲೇಜಿನ ಕ್ಷೇತ್ರಾವರಣದ ಹೊರಗೆ ಅನುಮತಿ ಇಲ್ಲದೆ ಯಾವುದೇ ಸಂಘ ಅಥವಾ ಸಂಸ್ಥೆಗಳಲ್ಲಿ ಸದಸ್ಯತ್ವವನ್ನು ಪಡೆದಿರುವುದು ಹಾಗೂ ಸಾರ್ವಜನಿಕ ಆಂದೋಲನಗಳಲ್ಲಿ ಭಾಗವಹಿಸುವುದು ಅಪೇಕ್ಷಾರ್ಹವಲ್ಲ. ಯಾವುದೇ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಲು ವಿದ್ಯಾರ್ಥಿಗಳಿಗೆ ಅನುಮತಿ ಇರುವುದಿಲ್ಲ.

ಸೆಮಿಸ್ಟರ್ ತರಗತಿಗಳನ್ನು ತೆರೆದ 2 ವಾರದೊಳಗೆ ಕಾಲೇಜು ಶುಲ್ಕಗಳನ್ನು ಪಾವತಿಸತಕ್ಕದ್ದು. ಅದರ ನಂತರ, 500 ರೂಪಾಯಿ ವಿಳಂಬ ಶುಲ್ಕವನ್ನು ಪಾವತಿಸತಕ್ಕದ್ದು. ಸೆಮಿಸ್ಟರ್ ತೆರೆದು 4 ವಾರದೊಳಗೆ ಶುಲ್ಕಗಳನ್ನು ಪಾವತಿಸದಿದ್ದಲ್ಲಿ ದಾಖಲೆ ಪುಸ್ತಕದಲ್ಲಿರುವ ಆ ವಿದ್ಯಾರ್ಥಿಯ ಹೆಸರನ್ನು ತೆಗೆದು ಹಾಕಲಾಗುತ್ತದೆ.

ಒಮ್ಮೆ ಪಾವತಿಸಿದ ಶಿಕ್ಷಣ ಶುಲ್ಕ ಹಾಗೂ ಇನ್ನಿತರ ಶುಲ್ಕಗಳನ್ನು ಮರುಪಾವತಿ ಮಾಡಲಾಗುವುದಿಲ್ಲ.
ಒಂದು ಅಥವಾ ಒಂದಕ್ಕೂ ಹೆಚ್ಚಿನ ವಿಷಯಗಳಲ್ಲಿ ವಿದ್ಯಾರ್ಥಿಯ ಹಾಜರಾತಿಯಲ್ಲಿ ಕೊರೆ ಇದ್ದಲ್ಲಿ ಆ ವಿದ್ಯಾರ್ಥಿಯು ಅದೇ ಸೆಮಿಸ್ಟರ್ ನ್ನು ಸಂಪೂರ್ಣವಾಗಿ ಪುನರಾವರ್ತಿಸ ಬೇಕಾಗಿರುತ್ತದೆ. ಈ ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್ ಗೆ ಪ್ರವೇಶ ಪಡೆಯುವ ಅನುಮತಿಯನ್ನು ಹೊಂದಿರುವುದಿಲ್ಲ.
ಶಾಶ್ವತ ನಿವಾಸ ವಿಳಾಸದ ಬದಲಾವಣೆಯನ್ನು ಕಾಲೇಜಿನ ಕಛೇರಿಗೆ ಜರೂರಾಗಿ ತಿಳಿಸತಕ್ಕದ್ದು.

3ನೇ ಮತ್ತು 5ನೇ ಸೆಮಿಸ್ಟರ್ ಮಟ್ಟದಲ್ಲಿ ಹಿಂದಿನ ಎಲ್ಲಾ ಸೆಮಿಸ್ಟರ್ ಗಳ ಎಲ್ಲಾ ವಿಷಯಗಳಲ್ಲಿ ತೇರ್ಗಡೆ ಹೊಂದಿದ್ದರೆ ಮಾತ್ರ ಇತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪ್ರವೇಶಾತಿ ವರ್ಗಾವಣೆಗೆ ಅನುಮತಿ ಇರುತ್ತದೆ. ಅವರ ವರ್ಗವನ್ನು ಪ್ರಕಟಿಸದೆ ಅವರಿಗೆ ಅಂತಿಮ ಅಂಕಿ ಚೀಟಿಯನ್ನು ನೀಡಲಾಗುವುದು. ಈ ವಿದ್ಯಾರ್ಥಿಗಳು ಶ್ರೇಣೀಕರಣಕ್ಕೆ ಅರ್ಹರಾಗಿರುವುದಿಲ್ಲ. ಈ ವಿದ್ಯಾರ್ಥಿಗಳು ಸ್ನಾತಕ ಪದವಿಗೆ ಅನ್ವಯವಾಗುವ 6 ವರ್ಷಗಳು ಹಾಗೂ 4 ವರ್ಷಗಳ ಗರಿಷ್ಠ ಕಾಲಾವಧಿಯಲ್ಲಿ ತಮ್ಮ ಪಠ್ಯ ವಿಷಯಗಳನ್ನು ಕಲಿತು ಪೂರೈಸಿರ ಬೇಕು.

1. ಮೊದಲನೆ ಸೆಮಿಸ್ಟರ್ ಆರಂಭದ ದಿನಾಂಕದಿಂದ 4 ವಾರಗಳೊಳಗೆ ಕಾಲೇಜು ನಿಗದಿ ಪಡಿಸಿರುವ ಶುಲ್ಕವನ್ನು ಪಾವತಿಸಿದ ನಂತರ, ಭಾಷೆ / ವಿಷಯ-ನ್ನು ಬದಲಾಯಿಸಬಹುದಾದ ಐಚ್ಛಿಕ ಸ್ವಾತಂತ್ರ್ಯವನ್ನು ಒಮ್ಮೆ ಮಾತ್ರ ವಿದ್ಯಾರ್ಥಿಯು ಉಪಯೋಗಿಸ ಬಹುದು. ಯಾವುದೇ ವಿದ್ಯಾರ್ಥಿಯು ಎರಡನೆಯ ಸೆಮಿಸ್ಟರ್ ನ ಅವಧಿಯಲ್ಲಿ ದ್ವಿತೀಯ ಭಾಷೆಯನ್ನು ಬದಲಾಯಿಸಲು ಇಚ್ಛಿಸಿದಲ್ಲಿ, ಆ ವಿದ್ಯಾರ್ಥಿಯು ಅದೇ ವಿಷಯದಲ್ಲಿ ಮೊದಲನೆ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗ ಬೇಕು ಹಾಗೂ ಕಾಲೇಜು ನಿಗದಿ ಪಡಿಸಿರುವ ಶುಲ್ಕವನ್ನು ಪಾವತಿಸಿದ ನಂತರ ಬದಲಾಯಿಸ ಬಹುದು. ಆ ವಿಷಯದ ಆಂತರಿಕ ಮೌಲ್ಯೀಕರಣ (ಇಂಟರ್ನಲ್ ಅಸ್ಸೆಸ್ಮೆಂಟ್)’ ಅಂಕಿಗಳನ್ನು ಕೊನೆಯ ಸೆಮಿಸ್ಟರ್ ನಲ್ಲಿ ಪಡೆದಿರುವ ಅಂಕಿಗಳ ಆಧಾರದ ಮೇಲೆ ಲೆಕ್ಕ ಮಾಡಲಾಗುತ್ತದೆ. ವಿಷಯ ಬದಲಾವಣೆಗೆ ಅನುಮತಿ ನೀಡುವಾಗ, ವಿದ್ಯಾರ್ಥಿಯು ಆ ಮುಂಚೆ ಕಲಿಯುತ್ತಿದ್ದ ವಿಷಯದ ಹಾಜರಾತಿಯನ್ನು ಗಣನೆಗೆ ತೆಗೆದುಕೊಂಡು ಪ್ರಸ್ತುತದಲ್ಲಿ ಕಲಿಯುತ್ತಿರುವ ವಿಷಯದ ಹಾಜರಾತಿಯನ್ನು ಲೆಕ್ಕ ಮಾಡಲಾಗುತ್ತದೆ.
2. ಯಾವುದೇ ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಗೆ ಭಾಷೆ / ವಿಷಯ ಗಳನ್ನು ಬದಲಾಯಿಸಲು ಆಯ್ಕೆ ಇರುತ್ತದೆ. ಈ ಆಯ್ಕೆಯನ್ನು ಮೊದಲನೆ ಸೆಮಿಸ್ಟರ್ ಆರಂಭವಾದ ದಿನಾಂಕದಿಂದ 4 ವಾರಗಳೊಳಗೆ ನಿಗದಿಸಲ್ಪಟ್ಟ ಶುಲ್ಕವನ್ನು ಪಾವತಿಸಿ ಒಮ್ಮೆ ಮಾತ್ರ ಈ ಆಯ್ಕೆಯನ್ನು ಬಳಸಬಹುದು. ವಿದ್ಯಾರ್ಥಿ ಒಬ್ಬರು 2ನೇ ಸೆಮಿಸ್ಟರ್ ಅವಧಿಯಲ್ಲಿ ಕಾಲೇಜಿನಿಂದ ನಿಗದಿಸಲ್ಪಟ್ಟ ಶುಲ್ಕವನ್ನು ಪಾವತಿಸಿ ದ್ವಿತೀಯ ಭಾಷೆಯನ್ನು ಬದಲಿಸಬಹುದು. ಹೀಗೆ ಮಾಡುವ ಮೊದಲು ವಿದ್ಯಾರ್ಥಿಯು ಮೊದಲನೆ ಸೆಮಿಸ್ಟರ್/ಅರ್ಧವರ್ಷ ವ್ಯಾಸಂಗ ದ ಬದಲಾಯಿಸಿದ ದ್ವಿತೀಯ ಭಾಷೆಯ ಪರೀಕ್ಷೆಗೆ ಹಾಜರಾಗಿರತಕ್ಕದ್ದು ಎಂದಿರುವಷರತ್ತನ್ನು ಪೂರೈಸ ತಕ್ಕದ್ದು. ಈ ವಿಷಯದ ಆಂತರಿಕ ಮೌಲ್ಯೀಕರಣವನ್ನು ಕಡೆಯ ಸೆಮಿಸ್ಟರ್/ಅರ್ಧವರ್ಷವ್ಯಾಸಂಗ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಲೆಕ್ಕ ಮಾಡಲಾಗುತ್ತದೆ. ಯಾವ್ಯಾವಾಗ ವಿಷಯನ್ನು ಬದಲಿಸಲಾಗುವುದೋ ಆಗ, ಆ ವಿಷಯದಲ್ಲಿನ ಹಾಜರಾತಿಯನ್ನು ವಿದ್ಯಾರ್ಥಿಯು ಮುಂಚಿನ ವಿಷಯದಲ್ಲಿ ಪಡೆದಿದ್ದ ಹಾಜರಾತಿಯನ್ನು ಗಣನೆಗೆ ತೆಗೆದುಕಂಡು ನಿರ್ಧರಿಸಲಾಗುತ್ತದೆ.

ಯಾವುದೇ ವಿದ್ಯಾರ್ಥಿ / ವಿದ್ಯಾರ್ಥಿನಿಯು ಸೆಮಿಸ್ಟರ್ ನ ಅಂತ್ಯದವರೆಗೂ ಪ್ರತಿಯೊಂದು ಪಠ್ಯ ವಿಷಯದಲ್ಲಿ ನಡೆಸಲ್ಪಟ್ಟ ತರಗತಿಗಳಲ್ಲಿ ಶೇಕಡಾ 75 ಕ್ಕಿಂತ ಕಡಿಮೆ ಇಲ್ಲದಂತೆ ಹಾಜರಾತಿ ಹೊಂದಿದ್ದರೆ, ಆತ / ಆಕೆ ಅಪೇಕ್ಷಿತ ಹಾಜರಾತಿಯ ಅಗತ್ಯವನ್ನು ಪೂರೈಸಿದ್ದಾರೆಂದು ಗಣಿಸಲಾಗುತ್ತದೆ. ವಿದ್ಯಾರ್ಥಿ / ವಿದ್ಯಾರ್ಥಿನಿ ಒಬ್ಬರು ಕಾಲೇಜ್/ವಿಶ್ವ ವಿದ್ಯಾಲಯ/ರಾಜ್ಯ/ರಾಷ್ಟ್ರ—-, ಕ್ರೀಡೆಗಳಲ್ಲಿ, ಹಾಗೂ, ಎನ್ ಸಿ ಸಿ/ ಎನ್ ಎಸ್ ಎಸ್/ ಸಾಂಸ್ಕೃತಿಕ ಅಥವಾ ಯಾವುದೇ ಅಧಿಕೃತ ಪ್ರಾಯೋಜಿತ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಲ್ಲಿ, ಸಂಬಂಧಪಟ್ಟ ಶಿಕ್ಷಕರ ಅನುಮೋದನೆಯ ಆಧಾರದ ಮೇಲೆ ಆ ವಿದ್ಯಾರ್ಥಿ /ವಿದ್ಯಾರ್ಥಿನಿಯು ಪ್ರಸ್ತುತವಾಗಿ ಭಾಗವಹಿಸಿದಷ್ಟು ಗಂಟೆಗಳ ಅಥವಾ ದಿನಗಳ ಹಾಜರಾತಿಯನ್ನು ಪಡೆಯಲು ಆತನಿಗೆ/ಆಕೆಗೆ ಅನುಮತಿ ಇರುತ್ತದೆ. ವಿದ್ಯಾರ್ಥಿ / ವಿದ್ಯಾರ್ಥಿನಿ– ಗಣರಾಜ್ಯ ದಿನಾಚರಣೆಯಂತಹ ರಾಷ್ಟ್ರ ಮಟ್ಟದ ಘಟನೆಗಳಲ್ಲಿ ಭಾಗವಹಿಸಲು ಆಯ್ಕೆಯಾದರೆ, ಸಂಬಂಧಪಟ್ಟ ಶಿಕ್ಷಕರ ಅನುಮೋದನೆಯ ಆಧಾರದ ಮೇಲೆ ಆತ/ಆಕೆ ತಾನು ಪ್ರಸ್ತುತವಾಗಿ ಭಾಗವಹಿಸಿದಷ್ಟು ದಿನಗಳ ಹಾಜರಾತಿಯನ್ನು ಪಡೆಯಲು ಆತನಿಗೆ/ಆಕೆಗೆ ಅನುಮತಿ ಇರುತ್ತದೆ
ಓಔಖಿಇ ಖಿಔ SಖಿUಆಇಓಖಿS

ವಿದ್ಯಾರ್ಥಿಗಳು ಗಮನಿಸಬೇಕಾದ ಮುಖ್ಯಾಂಶಗಳು
ಈ ಮೇಲೆ ವಿವರಿಸಿರುವ ನಿಯಮಗಳನ್ನು ಉಲ್ಲಂಘಿಸಿದಲ್ಲಿ ತತ್ ಕ್ಷಣದಲ್ಲೇ ವಜಾ ಮಾಡಲಾಗುತ್ತದೆ ಹಾಗೂ ತಪ್ಪಿತಸ್ಥರೆಂದು ಸಾಬೀತಾದಲ್ಲಿ, ತಕ್ಕಷ್ಟು ವಿಚಾರಣೆಯ ನಂತರ ಕಾಲೇಜಿನಿಂದ ಅಮಾನತ್ತುಗೊಳಿಸಲಾಗುತ್ತದೆ. ಕಾಲೇಜಿನ ಆವರಣದ ಹೊರಗೆ ವಿದ್ಯಾರ್ಥಿಗಳ ನಡವಳಿಕೆಗೆ ಕಾಲೇಜು ಜವಾಬ್ದಾರಿ ತೆಗೆದುಕೊಳ್ಳಲಾಗದಿದ್ದರೂ, ಯಾವುದೇ ಗಂಭೀರ ತಪ್ಪು ನಡವಳಿಕೆ/ವರ್ತನೆಗಳು ನಡೆದಿದ್ದಲ್ಲಿ ಅವನ್ನು ಗಂಭೀರವಾಗಿ ಪರಿಶೀಲಿಸುತ್ತದೆ..

ನಿಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸುವುದರಲ್ಲಿ ಹಾಗೂ ನಿಮ್ಮೊಳಗೆ ವಿಶಾಲ ಮನಸ್ಸಿನ ದೂರದರ್ಶಿತ್ವವನ್ನು ರೂಪಿಸುವುದರಲ್ಲಿ ನಾವು ಹಾಗೂ ನೀವು ಸಹಭಾಗಿಗಳೆಂಬುದನ್ನು ದಯವಿಟ್ಟು ಅರ್ಥೈಸಿಕೊಳ್ಳಿ
ಸೈಂಟ್ ಫಿಲೋಮಿನಾಸ್ ಕಾಲೇಜಿನ ಆದರ್ಶಗಳಿಗೆ ಅನುಗುಣವಾಗಿ ನೀವು ಬಾಳುವಿರಿ ಎಂಬ ಭರವಸೆಯಿಂದ ನಿಮ್ಮನ್ನು ನಾವು ಸ್ವಾಗತಿಸುತ್ತೇವೆ. ಶಿಕ್ಷಕ ಸಿಬ್ಬಂದಿ, ಶಿಕ್ಷಕೇತರ ಸಿಬ್ಬಂದಿ, ಕಾಲೇಜಿನ ಅಧಿಕಾರಿ ಸಿಬ್ಬಂದಿ ಇವರೆಲ್ಲರೊಂದಿಗೆ ಶಿಕ್ಷಣದ ಈ ಪ್ರಕ್ರಿಯೆಯಲ್ಲಿ ಸಹಕರಿಸ ಬೇಕೆಂದು ಕೋರುತ್ತಾ ನಿಮ್ಮನ್ನು ನಾವು ಸ್ವಾಗತಿಸುತ್ತೇವೆ.
ಗುರುತು ಚೀಟಿ
ಕಾಲೇಜಿ—ವಾಸ್ತವಿಕ ವಿದ್ಯಾರ್ಥಿಗಳಿಗೆ ಗುರುತುಚೀಟಿಗಳನ್ನುನೀಡಲಾಗುತ್ತದೆ. ಪ್ರತಿಯೊಬ್ಬವಿದ್ಯಾರ್ಥಿಯು ಕಾಲೇಜಿನ ಆವರಣದೊಳಗೆ ಇರುವಾಗ ತನ್ನ ಗುರುತಿನ ಚೀಟಿಯನ್ನು ಧರಿಸಿರಬೇಕು ಮತ್ತು ಕಾಲೇಜಿನ ಯಾವುದೇ ಸಿಬ್ಬಂದಿ ಸದಸ್ಯರು / ಅಧಿಕಾರಿಯು ಗುರುತುಚೀಟಿಯನ್ನು ಪರಿಶೀಲಿಸಲು ಕೋರಿದಾಗ ಅದನ್ನು ತೋರಿಸಬೇಕು.
ಕುಚೇಷ್ಟೆ / ಒರಟು ಹಾಸ್ಯ/ಪುಂಡಾಟ, ಇವು ವಿಚಾರಣಾರ್ಹಅಪರಾಧ. ವಿದ್ಯಾರ್ಥಿಗಳು ಯಾವುದೇ ರೀತಿಯ ಹಾಗೂ ಎಷ್ಟೇ ಕ್ಷುಲ್ಲಕವಾದ ಕುಚೇಷ್ಟೆ/ಪುಂಡಾಟ ಗಳಲ್ಲಿ ತೊಡಗಿದ್ದೇ ಆದರೆ, ಒಡನೆಯೆ ಆ ವಿದ್ಯಾರ್ಥಿ ಅಥವಾ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ವಜಾ ಮಾಡಿ ವಿಚಾರಣೆಗೆ ಗುರಿಪಡಿಸಲಾಗುತ್ತದೆ. ವಿಚಾರಣೆಯ ನಂತರ ಆ ವಿದ್ಯಾರ್ಥಿ / ವಿದ್ಯಾರ್ಥಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ಅವರನ್ನು ಕಾಲೇಜಿನಿಂದ ಅಮಾನತ್ತು ಮಾಡಲಾಗುತ್ತದೆ.
ಗಮನಿಸಿ: ಕರ್ನಾಟಕ ಶೈಕ್ಷಣಿಕ ಅಧಿನಿಯಮ, 1983, ಭಾಗ 116: ಕುಚೇಷ್ಟೆ / ಒರಟು ಹಾಸ್ಯ/ಪುಂಡಾಟ, ಈ ಕೃತ್ಯಕ್ಕೆ ದಂಡನೆ:
ವಿಶ್ವವಿದ್ಯಾಲಯ ಅಥವಾ ಕೇಂದ್ರ ಸರಕಾರದ ನೇರ ನಿರ್ವಹಣೆಗೆ ಒಳಪಟ್ಟಿರುವ ಸಂಸ್ಥೆ ಗಳೂ ಸೇರಿದಂತೆ, ಯಾವುದೇ ಒಂದು ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ಯಾವ ವಿದ್ಯಾರ್ಥಿಯೂ ಇತರ ವಿದ್ಯಾರ್ಥಿಗಳ ಮೇಲೆ ಕುಚೇಷ್ಟೆ / ಒರಟು ಹಾಸ್ಯ/ಪುಂಡಾಟ, ಮಾಡುವಂತಿಲ್ಲ.
ಉಪ-ಭಾಗ (1) ನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿಯು ಅಪರಾಧಿ ಎಂದು ತೀರ್ಮಾನಿಸಲ್ಪಟ್ಟಲ್ಲಿ, ಆ ವ್ಯಕ್ತಿಯು ಒಂದು ವರ್ಷದ ಅವಧಿಯ ಸೆರೆವಾಸದ ಶಿಕ್ಷೆಗೆ ಇಲ್ಲವೆ, 2 ಸಾವಿರ ರೂಪಾಯಿಗಳ ಜುಲ್ಮಾನೆಗೆ ಒಳಗಾಗ ಬಹುದು, ಅಥವಾ ಈ ಎರಡೂ ಶಿಕ್ಷೆಗಳಿಗೆ ಒಳಗಾಗ ಬಹುದು.
ಭಾಗ 2 (29): ಕುಚೇಷ್ಟೆ / ಒರಟು ಹಾಸ್ಯ/ಪುಂಡಾಟ, ಇದರ ಅರ್ಥ- ವಿದ್ಯಾರ್ಥಿಯೊಬ್ಬರನ್ನು ಒರಟು ಹಾಸ್ಯದ ಮೂಲಕ ಅಥವಾ ಇನ್ಯಾವ ರೀತಿಯಲ್ಲಾದರೂ ಅವನ/ಅವಳ ಮಾನವೀಯ ಘನತೆಗೆ ಧಕ್ಕೆ ಯಾಗುವಂತಹ, ಅಥವಾ ಅವನ ವೈಯಕ್ತಿಕತೆಯನ್ನು ಅತಿಕ್ರಮಿಸುವಂತಹ, ಅಥವಾ ಅವನನ್ನು ಕುಚೋದ್ಯಕ್ಕೆ ಗುರಿಪಡಿಸುವಂತಹ, ಅಥವಾ ಅವನು ಕಾನೂನುಬಧ್ಧ ಕಾರ್ಯವನ್ನು ಮಾಡದಂತೆ ತಡೆಹಿಡಿಯುವುದು, ಅವನಿಗೆ ಬೆದರಿಕೆ ಹಾಕುವುದು, ನ್ಯಾಯ ಬಾಹಿರವಾಗಿ ನಿರ್ಬಂಧಿಸುವುದು, ಬಂಧಿಸಿಡುವುದು, ದಂಡಾರ್ಹ ಆಕ್ರಮಣ ಮಾಡುವುದು/ಮಾಡಿಸುವುದು, ಗಾಯವನ್ನುಂಟುಮಾಡುವುದು, ಈ ರೀತಿಯ ಕೃತ್ಯ ಗಳನ್ನು ಮಾಡುವಂತೆ ಬಲಾತ್ಕರಿಸುವುದು, ಒತ್ತಾಯಿಸುವುದು ಇಲ್ಲವೆ ಈ ವರೆಗೂ ಹೇಳಿದ ಕೃತ್ಯಗಳನ್ನು ಒಬ್ಬ ವ್ಯಕ್ತಿಯ ಮೇಲೆ ಎಸಗುವುದು.
ಈ ಕೆಳಗಿನ ಪಟ್ಟಿಯಲ್ಲಿರುವ ಶಿಕ್ಷಕವರ್ಗದವರೊಂದಿಗೆ ಸೈಂಟ್ ಫಿಲೋಮಿನಾಸ್ ಕಾಲೇಜು ’ಕುಚೇಷ್ಟೆ / ಒರಟು ಹಾಸ್ಯ/ಪುಂಡಾಟ’ ನಿರೋಧಕ ಸಮಿತಿಯೊಂದನ್ನು ನೇಮಿಸಿದೆ. ಕಾಲೇಜಿನ ಆವರಣದಲ್ಲಿ / ಹಾಸ್ಟೆಲ್ ಗಳಲ್ಲಿ ಯಾವುದೇ ರೀತಿಯ ’ಕುಚೇಷ್ಟೆ / ಒರಟು ಹಾಸ್ಯ/ಪುಂಡಾಟ’ ಘಟನೆ ನಡೆದರೆ/ನಡೆದಿದ್ದರೆ ವಿದ್ಯಾರ್ಥಿಗಳು ಅದನ್ನು ಈ ಸಮಿತಿಯ ಯಾವುದೇ ಒಬ್ಬ ಸದಸ್ಯರ ಗಮನಕ್ಕೆ ತರಬೇಕೆಂದು ಕೋರಲಾಗಿದೆ.
ಫಾದರ್.ಬರ್ನಾರ್ಡ್ ಪ್ರಕಾಶ್ ಬಾರ್ನಿಸ್ ರೆಕ್ಟರ್ 9620542203
ಫಾದರ್. ಮೈಕಲ್ ಡಾಲ್ಫಿ ಡಿ ಮೆಲ್ಲೊ ವಾರ್ಡನ್, ಬಾಯ್ಸ್ ಹಾಸ್ಟೆಲ್ 9342944580
ಸಿಸ್ಟೆರ್ ವಿಮಲ್. ವಾರ್ಡನ್, ಮಹಿಳೆಯರ ಹಾಸ್ಟೆಲ್ 
ಪ್ರೊಫೆಸರ್. ಬಾಬು. ಪಿ. ಹೆಚ್ ಒ ಡಿ – ಮಲಯಾಳಂ 9741831619


ಪ್ರವೇಶಾತಿ ಪ್ರಕ್ರಿಯೆ
ಅರ್ಜಿ ಫಾರಮನ್ನು ಸ್ಪಷ್ಟವಾಗಿ ಭರ್ತಿಮಾಡಿ, ಅಭ್ಯರ್ಥಿ ಮತ್ತು ಪೋಷಕರ/ಪಾಲಕರ ಸಹಿ ಮಾಡಿರತಕ್ಕದ್ದು. ಭರ್ತಿ ಮಾಡಿರುವ ಅರ್ಜಿಯ ನೊಂದಾವಣೆಗೆ ನಿಗದಿ ಪಡಿಸಿರುವ ನೊಂದಾವಣೆ ಶುಲ್ಕದೊಂದಿಗೆ ಕಾಲೇಜಿನ ಕಛೇರಿಯಲ್ಲಿ ಸಲ್ಲಿಸತಕ್ಕದ್ದು. ನೊಂದಾಯಿಸದೆ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವುದಿಲ್ಲ.
ಅರ್ಜಿಯೊಂದಿಗೆ ಪ್ರಿ-ಯುನಿವರ್ಸಿಟಿ / ಘಿII ದರ್ಜೆಯ ಅಂಕಗಳ ಚೀಟಿ (ಮಾರ್ಕ್ಸ್ ಕಾರ್ಡ್), ನಡತೆಯ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರ(ಟಿ ಸಿ), ಮತ್ತು ಆಧಾರ್ ಚೀಟಿ – ಇವೆಲ್ಲದರ ನಕಲು ಪ್ರತಿಗಳನ್ನು (ಅಸಲು ಪ್ರತಿಗಳು ಅಲ್ಲ)ದಯವಿಟ್ಟು ಲಗತ್ತಿಸಿ.
ಕಛೇರಿಗೆ ನಿಮ್ಮ ಅರ್ಜಿಯನ್ನು ಸಲ್ಲಿಸುವ ಮುನ್ನ ಅರ್ಜಿ ಫಾರಮ್ ನ ಸಂಖ್ಯೆಯನ್ನು ದಯವಿಟ್ಟು ಬರೆದಿಟ್ಟುಕೊಳ್ಳಿ.
ಕಾಲೇಜಿಗೆ ಪ್ರವೇಶ ಪಡೆಯಲು ಒಂದು ನಿರ್ದಿಷ್ಟ ದಿನಾಂಕದಂದು ನಿಮ್ಮ ಪೋಷಕ/ಪಾಲಕರೊಂದಿಗೆ ನೀವು ಬರುವಂತೆ ನಿಮಗೆ ಆದೇಶ ನೀಡಲಾಗುತ್ತದೆ.
ಹೊರದೇಶದ ವಿದ್ಯಾರ್ಥಿಗಳು ತಾವು ಸಲ್ಲಿಸುವ ಅರ್ಜಿಯೊಂದಿಗೆ ತಮ್ಮ ಪಾಸ್ ಪೋರ್ಟ್ ನಲ್ಲಿ ಭರ್ತಿ ಮಾಡಲ್ಪಟ್ಟಿರುವ ಎಲ್ಲಾ ಪುಟಗಳ ನಕಲು ಪ್ರತಿಗಳನ್ನು ಹಾಗೂ(ಆಧಾರ್ ಚೀಟಿಯನ್ನು ಹೊರತು ಪಡಿಸಿ) ಮೇಲೆ ಹೇಳಿರುವ ನಕಲು ಪ್ರತಿಗಳೊಂದಿಗೆ ಸೇರಿಸಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
ಗಮನಿಸಿ:
ಅರ್ಹತಾ ಪ್ರಮಾಣ ಪತ್ರ ಹೊರದೇಶದ ಮತ್ತು ಕರ್ನಾಟಕ ರಾಜ್ಯವನ್ನು ಬಿಟ್ಟು ಭಾರತದ ಇತರ ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ಅರ್ಹತಾ ಪತ್ರವನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆಯತಕ್ಕದಾದರೂ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಹತಾ ಪತ್ರವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಕಾಲೇಜು ಮಾರ್ಗ ದರ್ಶನ ಮತ್ತು ಸಹಾಯ ನೀಡುತ್ತದೆ.

ವಿದ್ಯಾರ್ಥಿ ನಿಲಯಕ್ಕೆ / ಹಾಸ್ಟೆಲ್ ಗೆ ಪ್ರವೇಶಾತಿ ಪ್ರಕ್ರಿಯೆ


ಹುಡುಗರಿಗೆ: ಸೈಂಟ್ ಫಿಲೋಮಿನಾಸ್ ಕಾಲೇಜಿನ ಆವರಣದೊಳಗಿರುವ ಹುಡುಗರ ಹಾಸ್ಟೆಲ್ ನ ವಾರ್ಡೆನ್ ಅವರನ್ನು (ಮೇಲ್ವಿಚಾರಕರನ್ನು) ಸಂಪರ್ಕಿಸಿ. ದೂರವಾಣಿ: 0821 – 2492886(0821-2492886)

ಹುಡುಗಿಯರಿಗೆ: ಕಾಲೇಜಿನ ಆವರಣದೊಳಗಿರುವ ಮಹಿಳೆಯರ ಹಾಸ್ಟೆಲ್ ನಲ್ಲಿ ತಂಗಲು ಇಚ್ಛಿಸುವ
ವಿದ್ಯಾರ್ಥಿನೀಯರು ರೆಕ್ಟರ್ ಅವರನ್ನು ಸಂಪರ್ಕಿಸಿ. ಒobiಟe-9620542203


ಕಾಲೇಜಿನ ಆವರಣದ ಹೊರಗೆ –
1. “ಶಾಂತಲ– ಭವನ್”, #42, 1ನೇ ಮುಖ್ಯರಸ್ತೆ, ಸುಬಾಶ್ ನಗರ್, ಮೈಸೂರು – 07, ಈ ವಿಳಾಸದಲ್ಲಿ ವಾರ್ಡೆನ್ ಅವರನ್ನು ಸಂಪರ್ಕಿಸಿ. ದೂರವಾಣಿ: 0821-2498380(0821-2498380)
2. “ಕರುಣಾ ನಿಲಯ”, ವಿದ್ಯಾನಿಕೇತನ್ ಎದುರಿಗೆ, ಬನ್ನಿಮಂಟಪ, , ಮೈಸೂರು – 15,ಈ ವಿಳಾಸದಲ್ಲಿ ವಾರ್ಡೆನ್ ಅವರನ್ನು ಸಂಪರ್ಕಿಸಿ. ದೂರವಾಣಿ: 0821-2499759(0821-2499759
ಪ್ರವೇಶಾತಿ ಪಡೆಯುವ ದಿನದಂದು:
ಸಮಯಕ್ಕೆ ಸರಿಯಾಗಿ, ನಿಮ್ಮ ಪೋಷಕರೊಂದಿಗೆ/ಪಾಲಕರೊಂದಿಗೆ ಬರುವುದು. ಬರುವಾಗ ಎಸ್ ಎಸ್ ಎಲ್ ಸಿ, ಪಿ ಯು ಸಿ / + 2, ಇವುಗಳ ಅಂಕದ ಚೀಟಿ, ಟಿ ಸಿ, ಇವುಗಳ ಅಸಲು ಪ್ರತಿ ಗಳು ಹಾಗೂ ಅಂಚೆಚೀಟಿ ಅಳತೆಯ ನಿಮ್ಮ 2 ಛಾಯಾ ಚಿತ್ರಗಳು, ಇವೆಲ್ಲವನ್ನೂ ನಿಮ್ಮೊಂದಿಗೆ ತರತಕ್ಕದ್ದು.
ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಅವರವರ ಪೋಷಕ/ಪಾಲಕ ರೊಂದಿಗೆ ತಮ್ಮ ಕೊಠಡಿಯಲ್ಲಿ ಭೇಟಿ ಮಾಡಿ, ಕಾಲೇಜಿನ ನಿಯಮ, ಕಟ್ಟಳೆಗಳನ್ನು ವಿವರಿಸುತ್ತಾರೆ.
ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರದ ಅಸಲು ಪ್ರತಿಯ ಜೊತೆಗೆ ಧೃಢೀಕರಿಸಲ್ಪಟ್ಟಿರುವ ಅದರ 2 ಪ್ರತಿಗಳನ್ನು ತರತಕ್ಕದ್ದು. (ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಇಲಾಖೆಯಿಂದ ಅವರ ಶುಲ್ಕವನ್ನು ಮರಳಿಸಲಾಗುವುದು. ಕರ್ನಾಟಕ ಸರ್ಕಾರದ ಅಧಿಸೂಚನೆಯ ಪ್ರಕಾರ, ಎಲ್ಲಾ ರಿಯಾಯತಿ ಶುಲ್ಕಗಳು ಸರ್ಕಾರದಿಂದ ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾಯಿಸಲಾಗುತ್ತದೆ. ಅರ್ಹತೆಯುಳ್ಳ ವಿದ್ಯಾರ್ಥಿಗಳು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಆಧಾರ್ ಚೀಟಿ ಮತ್ತು ಬ್ಯಾಂಕ್ ಖಾತೆಯ ಸಂಖ್ಯೆಯೊಂದಿಗೆ ಸಲ್ಲಿಸತಕ್ಕದ್ದು.
ವಿದ್ಯಾರ್ಥಿಗಳು ಪೋಷಕ/ಪಾಲಕರೊಂದಿಗೆ, ನಿಗದಿ ಪಡಿಸಿದ ದಿನಾಂಕದಂದು ನಿಗದಿ ಪಡಿಸಿದ ಸಮಯಕ್ಕೆ ಕಾಲೇಜಿಗೆ ಬರಲು ವಿಫಲರಾದರೆ, ಅಥವಾ, ಶುಲ್ಕವನ್ನು ಸಲ್ಲಿಸುವುದರಲ್ಲಿ ವಿಫಲರಾದರೆ, ಆ ವಿದ್ಯಾರ್ಥಿಯು ತಮಗೆ ದೊರೆತಿದ್ದ ಪ್ರವೇಶ ಸ್ಥಾನವನ್ನು (ಸೀಟನ್ನು)ಕಳೆದುಕೊಳ್ಳುವರು. ಮೈಸೂರಿನ ಹೊರಗಿನ ಸ್ಥಳಗಳಿಂದ ಬಂದಿರುವ ಯಾವುದೇ ವಿದ್ಯಾರ್ಥಿಯು ಸ್ಥಳೀಯ ಪಾಲಕರಿಂದ ಲಿಖಿತರೂಪದಲ್ಲಿ ತಾವು ’ಲೋಕಲ್ ಗಾರ್ಡಿಯನ್’ ಎಂದು ಪ್ರಮಾಣೀಕರಿಸಿದ ಪತ್ರವನ್ನು ಸಲ್ಲಿಸದಿದ್ದಲ್ಲಿ, ಆ ವಿದ್ಯಾರ್ಥಿಗೆ ಕಾಲೇಜಿನೊಳಗೆ ಪ್ರವೇಶ ದೊರಕುವುದಿಲ್ಲ.
ಪ್ರವೇಶಾತಿ ಪ್ರಕ್ರಿಯೆಯ ಸಮಯದಲ್ಲಿ ನಿಮ್ಮ ಗುರುತು ಚೀಟಿಯನ್ನು ಮತ್ತು ಕಾಲೇಜಿನ ಕ್ಯಾಲೆಂಡರ್ ನ್ನು ಪಡೆಯಬಹುದು.
———————————————-
ದೂರದರ್ಶಿತ್ವ ಮತ್ತು ಧ್ಯೇಯ
ದೂರದರ್ಶಿತ್ವ
ಸೈಂಟ್ ಫಿಲೋಮಿನಾಸ್ ಕಾಲೆಜ್ ಭವ್ಯ ಕಲ್ಪನೆಯಿಂದ ಪ್ರೇರಿತಗೊಂಡು, ಪ್ರತಿ ಒಬ್ಬರಿಗೂ ಅವರ ಮತ, ಧರ್ಮ, ಜಾತಿ, ನಂಬಿಕೆ, ಲಿಂಗ ಇವ್ಯಾವುದನ್ನೂ ಲೆಕ್ಕಿಸದೆ ಮೌಲ್ಯ ಆಧಾರಿತ ಶಿಕ್ಷಣವನ್ನು ಒದಗಿಸುವ ಛಲ ಮತ್ತು ಉತ್ಸಾಹ ಹೊಂದಿರುತ್ತದೆ. ಇಂತಹ ವಿಧ್ಯೆಯ ಮೂಲಕ ಪ್ರತಿ ಒಬ್ಬರ ನೈತಿಕ ಸತ್ವ ರೂಪುಗೊಳ್ಳುತ್ತದೆ, ವಿಚಾರ ಶಕ್ತಿಯು ವಿಸ್ತಾರಗೊಳ್ಳುತ್ತದೆ, ಮತ್ತು ಪ್ರತಿ ಒಬ್ಬ ವ್ಯಕ್ತಿಯು ತನ್ನ ಕಾಲ ಮೇಲೆ ತಾನು ನಿಲ್ಲಲು ಸಶಕ್ತನಾಗುತ್ತಾನೆ/ಸಶಕ್ತಳಾಗುತ್ತಾಳೆ.
ಧ್ಯೇಯ
ಪುಸ್ತಕಗಳಿಂದಷ್ಟೇ ಅಲ್ಲದೆ ಜೀವನದ ಅನುಭವಗಳಿಂದ ಕಲಿಯಲು ಬರುವ ಯುವಕ, ಯುವತಿಯರನ್ನು ಪರಿವರ್ತಿಸುವುದು ನಮ್ಮ ಒಂದು ಧ್ಯೇಯವಾಗಿರುತ್ತದೆ. ಕೂಡಿ ಕೆಲಸ ಮಾಡುವುದು ಹಾಗೂ ಕೂಡಿ ಆಡುವುದರಿಂದ ಅವರಲ್ಲಿ ಜೀವನ ಕೌಶಲಗಳು ನೆಲೆಗೊಳ್ಳುವುದಲ್ಲದೆ, ಇದರಿಂದ ಅವರು ಶಿಸ್ತು ಹಾಗೂ ಸಮಗ್ರತೆಯುಳ್ಳ ಒಳ್ಳೆಯ ಪ್ರಜೆಗಳಾಗುತ್ತಾರೆ.

ಪಠ್ಯಕ್ರಮಗಳಲ್ಲಿ ಪ್ರತಿಫಲಿತಗೊಂಡಿರುವ ಗುರಿಗಳು ಮತ್ತು ಉದ್ದೇಶಗಳು:
ಅಡ್ಡಿಗಳನ್ನು ಭೇದಿಸಿ, ಸರಿಸಿ ಕಾರ್ಯಾರಂಭ ಮಾಡುವ ಯಾವುದೇ ಸಮುದಾಯದ ಕಥನವು ಆ ಸಮುದಾಯದ ಮುಂದಾಳುಗಳ ಮತ್ತು ಅಸಾಧಾರಣ ವ್ಯಕ್ತಿಗಳ ಕಥಾನಕವೂ ಆಗಿರುತ್ತದೆ. ನಮ್ಮ ಸ್ಥಾಪಕರು ಧರ್ಮವಿಧಿಯ ಪ್ರಜ್ಞೆಯಿಂದ ಪ್ರೇರಿತರಾಗಿದ್ದರಿಂದ ಶಿಕ್ಷಣವು ಭವಿಷ್ಯದಲ್ಲಿ ವೃತ್ತಿ ಅವಕಾಶಗಳಿಗಾಗಿ ಮಾತ್ರ ಒಂದು ಹೂಡಿಕೆ ಆಗಿರದೆ ಆತ್ಮಸಾಕ್ಷಾತ್ಕಾರಕ್ಕೆಒಂದು ಮಾರ್ಗವೆಂದೂ ಮತ್ತು ವಿವೇಚನಾಯುಕ್ತ ಜೀವನಕ್ಕೆ ಒಂದು ಮಾರ್ಗದರ್ಶಿ ಎಂದೂ ಅವರ ನಂಬಿಕೆಯಾಗಿತ್ತು.
ಈ ಪ್ರವರ್ತಕರು ಅಡಿಪಾಯಗಳನ್ನು ಸ್ಥಾಪಿಸಿ, ಅವರ ಕೈಗಳಿಂದ ನಿರ್ಮಾಣಗೊಂಡ ಈ ಕಲಿಕೆಯ ದೇಗುಲವು ಹಲವು ವರ್ಷಗಳಲ್ಲಿ ಬೆಳೆದು, ಭಾರತ ದೇಶದ ಮೂಲೆ ಮೂಲೆಗಳಿಂದ ಹಾಗೂ ಹಲವು ಸಮುದ್ರಗಳ ಆಚೆಯಿಂದ ಕೂಡ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. ಭಾರತದ 23 ರಾಜ್ಯಗಳಿಂದ ಭಾರತೀಯ ವಿದ್ಯಾರ್ಥಿಗಳು ನಮ್ಮಲ್ಲಿರುವುದಲ್ಲದೆ, 30 ಬೇರೆ ಬೇರೆ ರಾಷ್ಟ್ರೀಯತೆ ಹೊಂದಿರುವ ವಿದ್ಯಾರ್ಥಿಗಳೂ ಇರುವರು. ಇವರೆಲ್ಲರೂ ಒಂದಾಗಿ ಸಮ್ಮಿಳಿತ ಸಂಸ್ಕೃತಿಯ ಪ್ರತೀಕವಾಗಿರುವ ನಮ್ಮ ದೇಶದ ಸಂಕ್ಷೇಪ ರೂಪವನ್ನು ಪ್ರತಿನಿಧಿಸುತ್ತಾರೆ.
ಈ ವಿದ್ಯಾರ್ಥಿಗಳು ಮೊದಲು ಸಂಪ್ರದಾಯಬಧ್ಧ ವಿಷಯಗಳನ್ನು ಕಲಿಯಲು ಬಂದು ನಂತರದಲ್ಲಿ ಇನ್ನೂ ಹೆಚ್ಚು ಪ್ರಚಲಿತ ಶಿಕ್ಷಣ ವಿಷಯಗಳ ಅಧ್ಯಯನ ಮಾಡುತ್ತಾರೆ. ವಿಷಯಗಳನ್ನು ಕಲಿಯುವುದರೊಂದಿಗೆ, ಅವರು ಹಾಡಲು ಹಾಗೂ ನರ್ತಿಸಲೂ ಬರುತ್ತಾರೆ. ಹಾಗೆಯೇ – ಹಾಕಿ, ಕ್ರಿಕೆಟ್, ಫುಟ್ ಬಾಲ್, ವಾಲಿ ಬಾಲ್, ಬಾಸ್ಕೆಟ್ ಬಾಲ್, ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ – ಈ ಎಲ್ಲಾ ಆಟಗಳನ್ನೂ ಆಡಲು ಬರುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯು ಕಾಲೇಜಿನ ವಾರ್ಷಿಕ ಕ್ರೀಡಾ ಕೂಟದಲ್ಲಿ ಎಲ್ಲರ ಕಣ್ಣಿಗೆ ಕಾಣುವಂತೆ ಮುಂದೆ ಬಂದು, ಅವರಲ್ಲಿ ಕೆಲವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟಗಳಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸುತ್ತಾರೆ.
ಬೋಧನೆಯ ಮೂಲಕ ಜೀವನ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ನೆಲೆಗೊಳಿಸುವುದು ನಮ್ಮ ಕಾಲೇಜಿನ ಮೌಲ್ಯಾಧಾರಿತ ಶಿಕ್ಷಣದ ಉದ್ದೇಶವಾಗಿದೆ. ಎನ್ ಸಿ ಸಿ, ಎನ್ ಎಸ್ ಎಸ್, ರೋಟರಾಕ್ಟ್, ನೇಚರ್ ಕ್ಲಬ್, ಅಡ್ವೆಂಚರ್ ಕ್ಲಬ್(ಸಾಹಸಕಾರ್ಯ ಕೂಟ), ಫೈನ್ ಆರ್ಟ್ಸ್ ಕ್ಲಬ್(ಲಲಿತ ಕಲೆಗಳ ಕೂಟ), ಲಿಟ್ರರಿ ಕ್ಲಬ್(ಸಾಹಿತ್ಯ ಕೂಟ)– ಇವುಗಳು ಸಾಮಾಜಿಕ ಜಾಗೃತಿಯನ್ನು ವರ್ಧಿಸುವುದು ಮತ್ತು ಶಿಕ್ಷಣಕ್ಕೆ ಮತ್ತೊಂದು ಆಯಾಮವನ್ನು ನೀಡುವುದು.
ವಿಚಾರ ಗೋಷ್ಟಿಗಳು, ಗುಂಪು ಚರ್ಚೆಗಳು, ಅತಿಥಿಗಳಿಂದ ಉಪನ್ಯಾಸಗಳು, ತರಗತಿ ಕಲಿಕೆ, ಸಹ-ಪಠ್ಯ ಚಟುವಟಿಕೆಗಳು, ಇವೆಲ್ಲವೂ ಸಾಂಸ್ಕೃತಿಕ ನಕ್ಷೆಯ ಮೇಲೆ ಸೈಂಟ್ ಫಿಲೋಮಿನಾಸ್ ಕಾಲೇಜನ್ನು ಸುಸ್ಥಿರವಾಗಿ ಸ್ಥಾಪಿಸಿವೆ.ಫಿಲೋಮಿನಾಸ್ ಕಾಲೇಜಿನ ಸಂಘಗಳ ಹಾಗೂ ಕೂಟಗಳ ಪಟ್ಟಿಯು ಲಂಬವಾಗುತ್ತಲೇ ಇದ್ದು, ಕ್ಷೇತ್ರ ಪ್ರವಾಸ ಮತ್ತು ಶೈಕ್ಷಿಣಕ ಪ್ರವಾಸಗಳು ಇನ್ನೂ ಹೆಚ್ಚು ಹೆಚ್ಚು ಹೊಸ ಅನುಭವಗಳನ್ನು ತರುತ್ತಿವೆ.
ಐ ಕ್ಯು ಎ ಸಿ (ಇಂಟರ್ನಲ್ ಕ್ವಾಲಿಟಿ ಅಶ್ಯುರೆನ್ಸ್ ಸೆಲ್) ಯು ನಾಯಕತ್ವ ಮತ್ತು ವ್ಯಕ್ತಿತ್ವ ಅಭಿವೃಧ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ಥೈರ್ಯವನ್ನು ಮತ್ತಷ್ಟು ಮೇಲಕ್ಕೆ ಏರಿಸುತ್ತಿದೆ.
ತರಗತಿಗಳಲ್ಲಿ ಬಳಸುತ್ತಿರುವ ಬೋಧನಾ ವಿಧಾನ, ಕ್ರಮಗಳ ಬಗ್ಗೆ ಹೇಳುವುದಾದರೆ, ನಾವೀನ್ಯತೆಯನ್ನು ತರಲು ಇಲ್ಲಿ ಸಂಪೂರ್ಣ ಸ್ವಾತಂತ್ರ್ಯ ವಿರುತ್ತದೆ. ದೂರ ದರ್ಶಿತ್ವವುಳ್ಳ ಹಾಗೂ ಪ್ರಗತಿಪರ ಪ್ರಾಂಶುಪಾಲರ ಉತ್ತೇಜನದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ರೆಕ್ಕೆಗಳನ್ನು ವಿಸ್ತಾರವಾಗಿ ಹರಡುತ್ತಾ ಕಾಲೇಜಿನ ಒಳಗಿನಿಂದ ಮತ್ತು ಸಮಾಜದಿಂದ ಅವರ ಮುಂದೆ ಒದಗಿ ಬರುವ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಎದುರಿಸುತ್ತಾರೆ. ಕಾಲದೊಂದಿಗೆ ಸೈಂಟ್ ಫಿಲೋಮಿನಾಸ್ ಬದಲಾಗುತ್ತಿದ್ದರೂ, ಅದು ತನ್ನ ಸಂಪ್ರದಾಯಗಳನ್ನು ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದು ಮುಂದುವರಿಯುತ್ತಲೇ ಇರುವುದರಿಂದ ಈ ಕಾಲೇಜಿನ ಆಂಗಣದಿಂದ ತೇರ್ಗಡೆಯಾಗಿ ಹೊರಬಂದಿರುವವರೆಲ್ಲಾ ಈ ಕಾಲೇಜಿನ ಕುಟುಂಬಕ್ಕೆ ನಾವೆಲ್ಲರೂ ಸೇರಿದವರು ಎಂಬ ಭಾವನೆಯನ್ನು ತಾಳಿರುತ್ತಾರೆ.
ಭವಿಷ್ಯತ್ಕಾಲದ ಬಗ್ಗೆ ನಮ್ಮ ದೂರದರ್ಶಿತ್ವ ಅಸ್ತಿತ್ವಕ್ಕೆ ಬಂದ ಈ 72 ವರ್ಷಗಳಲ್ಲಿ ಸೈಂಟ್ ಫಿಲೋಮಿನಾಸ್ ಕಾಲೇಜು ಮಾನವೀಯ ಮೌಲ್ಯಗಳಿಗೆ ಮತ್ತು ವಿದ್ವತ್ ಪೂರ್ಣ ಉತ್ಕೃಷ್ಟತೆಗೆ ಧೃಢಸಂಕಲ್ಪದೊಂದಿಗೆ ನಿಷ್ಠವಾಗಿದೆ. ವಿಶಾಲವಾದ ತರಗತಿ ಕೊಠಡಿಗಳು, ಅಂಗಣಗಳು,ಗ್ರಂಥಾಲಯಗಳು, ಪ್ರಯೋಗಾಲಯಗಳು, ಸಭಾಂಗಣ, ಮಲ್ಟಿ ಮೀಡಿಯಾ ಹಾಗೂ ವಿಡಿಯೊ ಕಾನ್ಫರೆನ್ಸ್ ಸೌಲಭ್ಯಗಳಿರುವ ಸಮಾಲೋಚನಾ ಸಭಾಂಗಣ, ಆಟದ ಮೈದಾನಗಳು, ಒಳ ಕ್ರೀಡಾಂಗಣ, ಈ ಎಲ್ಲಾ ಎಡೆಗಳಲ್ಲಿ ಕಾಲೇಜಿನ ಎಲ್ಲಾ ಚಟುವಟಿಕೆಗಳು ವ್ಯಾಪಿಸಿಕೊಂಡಿರುತ್ತವೆ.
1946 ರಲ್ಲಿ ಅತಿ ಸಾಧಾರಣ ರೀತಿಯಲ್ಲಿ ಆರಂಭವಾದ ಸೈಂಟ್ ಫಿಲೋಮಿನಾಸ್ ಕಾಲೇಜು ಬೃಹತ್ತಾಗಿ ಬೆಳೆದಿದೆ. ಇವತ್ತಿನ ದಿನ, ಕಾಲೇಜಿನಲ್ಲಿ ವಿಜ್ಞಾನ, ಮಾನವಿಕ ವಿಷಯಗಳು(ಆರ್ಟ್ಸ್),ಉದ್ಯಮ ಆಡಳಿತ(ಬಿಸ್ ನೆಸ್ ಅಡ್ಮಿನಿಸ್ಟ್ರೇಶನ್), ಕಂಪ್ಯೂಟರ್ ಅಪ್ಲಿಕೇಶನ್ಸ್, ಸಮಾಜ ಕಾರ್ಯ, ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಟೂರಿಸಂ (ಪ್ರವಾಸೋದ್ಯಮ) ಮತ್ತು ಭಾಷೆಗಳು, ಈ ಎಲ್ಲಾ ವಿಷಯಗಳೂ ಸೇರಿದಂತೆ ಒಟ್ಟು 37 ವಿಭಾಗಗಳಿವೆ. ಕಾಲೇಜು ಇವತ್ತಿನ ದಿನ 14 ಸ್ನಾತಕೋತ್ತರ ಪದವಿಗಳನ್ನು ನೀಡುವುದು. ಒಂದು ವಿಜ್ಞಾನ ಸಂಶೋಧನಾ ಕೆಂದ್ರವನ್ನು ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ..
ತನ್ನ ಬೃಹತ್ ಕಟ್ಟಡಗಳ ಮತ್ತು ಸುಂದರವಾದ ಕ್ಶೇತ್ರಾವರಣಗಳ ಬಗ್ಗೆ ಯಾವುದೇ ಶಿಕ್ಷಣ ಸಂಸ್ಥೆಯು ಹೆಮ್ಮೆ ಪಡಬಹುದಾದರೂ, ಕಾಲೇಜಿನ ನಿಜವಾದ ಘನತೆ ಇರುವುದು ವಿದ್ಯಾರ್ಥಿಗಳ ಸಾಧನೆಗಳಲ್ಲಿ. ಸಾಮಾನ್ಯವಾಗಿ, ಕಾಲೇಜೊಂದರ ಯಶಸ್ವೀ ಕಾರ್ಯಸಾಧನೆಯನ್ನು, ಆ ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ, ಕ್ರೀಡೆಗಳಲ್ಲಿ, ಚರ್ಚಾ ಸ್ಫರ್ಧೆಗಳಲ್ಲಿ, ಅವರ ವೃತ್ತಿಪರ ಜೀವನದಲ್ಲಿ , ಈ ರೀತಿಯ ಹಲವಾರು ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಗಳ ಮೂಲಕ ಅಳೆಯಲಾಗುತ್ತದೆ. ಫಿಲೋಮಿನಾಸ್ ಕಾಲೇಜಿನಲ್ಲಿ ಶಿಕ್ಷಣಪಡೆದು ಹೊರಬಂದಿರುವವರಲ್ಲಿ ಅನೇಕ ವಿಜ್ಞಾನಿಗಳು, ಕಲಾವಿದರು, ಆಡಳಿತ ಅಧಿಕಾರಿಗಳು, ವೃತ್ತಿಪರರು ಇರುವರು. ಇವರೆಲ್ಲರೂ ಅವರ ವಿದ್ಯಾಸಂಸ್ಥೆಯು ಹೊತ್ತಿಸಿದ ಕಲಿಕಾ ದೀವಿಗೆ ಹಾಗೂ ಸಾಮಾಜಿಕ ಕಳಕಳಿಯನ್ನುಎತ್ತಿ ಹಿಡಿದು ಮುನ್ನಡೆಯುತ್ತಿದ್ದಾರೆ.
ಹಿಂದಿನ ಸಾಧನೆಗಳ ಸ್ಮರಣೆಯು ಇಂದಿನ ಜನಾಂಗವನ್ನು ಶಿಕ್ಷಣ, ಸಂಶೋಧನೆ ಮತ್ತು ಸೇವೆಯಲ್ಲಿ ಮತ್ತಷ್ಟೂ ಉನ್ನತ ಮಟ್ಟವನ್ನು ಸಾಧಿಸಲು ಪ್ರಚೋದಿಸಬೇಕು.
ನಮ್ಮ ಜೀವನದ ಪ್ರತಿಯೊಂದು ಆಯಾಮಗಳ ಮೇಲೆ ಪರಿಣಾಮ ಬೀರುವಂತಹ ರೋಮಾಂಚಕ ಹಾಗೂ ಅಪೂರ್ವ ಬದಲಾವಣೆಗಳ ಹೊಸ್ತಿಲಿನ ಮೇಲೆ ನಮ್ಮ ದೇಶವು ನಿಂತಿದೆ. ಹಾಗಾಗಿ, ಬದಲಾವಣೆಯು ಸಂಸ್ಥೆಗಳನ್ನು ಮಾರ್ಪಡಿಸಲಿ ಎಂದು ಅದಕ್ಕಾಗಿ ಕಾಯುವ ಬದಲಾಗಿ ಆ ಬದಲಾವಣೆಗಳನ್ನು ಮುನ್ನಡೆಯುತ್ತಿರುವ ಪ್ರಕ್ರಿಯೆಗಳಲ್ಲಿ ಅಳವಡಿಸಿಕೊಳ್ಳುತ್ತಾ ಪೂರ್ವಭಾವಿಯಾಗಿ ಸಕ್ರಿಯಶೀಲವಾಗಿ (ಬದಲಾಗುತ್ತಿರುವ) ಕಾಲದೊಂದಿಗೆ ಹೆಜ್ಜೆಹಾಕುತ್ತಾ ಮುನ್ನಡೆಯುವುದು ಶಿಕ್ಷಣ ಸಂಸ್ಥೆಗಳಿಗೆ ಈ ಸಮಯದಲ್ಲಿ ಅತ್ಯಗತ್ಯವಾಗಿರುತ್ತದೆ. ಅದಲ್ಲದೆ, ಈ ಸವಾಲುಗಳು ಬೆಳವಣಿಗೆಗೆ ಅದೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅವಕಾಶಗಳನ್ನು ಬಿಚ್ಚಿಡುತ್ತವೆ. ಈ ಅವಕಾಶಗಳನ್ನು ಸ್ವೀಕರಿಸಲು ಫಿಲೋಮಿನಾಸ್ ಕಾಲೇಜು ಸಿಧ್ಧವಾಗಿದೆ.
‘ಉತ್ಕೃಷ್ಟ ಕಾಲೇಜ್’ ಎಂದು ಯು ಜಿ ಸಿ ನೀಡಿರುವ ಹಣೆಪಟ್ಟಿಯೊಂದಿಗೆಸ್ವಯಮಾಧಿಕಾರದ ಕಾಲೇಜಾಗಿ ಬೆಳೆದು ಬಂದಿರುವ ಸೈಂಟ್ ಫಿಲೋಮಿನಾಸ್ ರೋಮಾಂಚಕ ಮನೋದೃಷ್ಯಗಳನ್ನು ಎದುರುನೋಡುತ್ತಿದೆ. – ತನ್ನದೇ ಆದ ಪ್ರೇರೇಪಣಕಾರಿ ಮತ್ತು ಪ್ರಸಕ್ತ ಪಠ್ಯಕ್ರಮಗಳ ಚೌಕಟ್ಟನ್ನು ರಚಿಸುವುದು, ತನ್ನದೇ ಆದ ಪರೀಕ್ಷೆಗಳನ್ನು ನಡೆಸುವುದು, ವಿದ್ಯಾರ್ಥಿಗಳ ಒಟ್ಟಾರೆ ಮೌಲ್ಯಮಾಪನದಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಒಳಗೂಡಿಸುವುದು, ಸಮಾನಹಂತ ಮತ್ತು ಮೇಲಿನ ಹಂತಗಳ ನಡುವೆ ಚಲನಶೀಲತೆ ಇರುವಂತಹ ವಿಕೇಂದ್ರೀತ ಪಠ್ಯಕ್ರಮವನ್ನು ಅಳವಡಿಸಿ ಸಿ ಬಿ ಸಿ ಎಸ್ ಸೆಮಿಸ್ಟರ್ ವ್ಯವಸ್ಥೆಯನ್ನು ಅನುಸರಿಸುವುದು, ಸಾಮಾಜಿಕವಾಗಿ ಕಾಲೇಜನ್ನು ಮತ್ತಷ್ಟೂ ಯಥಾರ್ಥಗೊಳಿಸುವುದು, ಹಾಗೂ ’ಫಿಲೋಮಿನೈಟ್’ ಗಳನ್ನು ಪ್ರಪಂಚದಲ್ಲಿ ತನ್ನತನವನ್ನು ಎತ್ತಿ ಹಿಡಿಯುವಂತಹ ಪುರುಷ – ಮಹಿಳೆ ಯರಾಗಿ ರೂಪಿಸುವುದು ಮತ್ತು ಸಮಾಜವನ್ನು ನಿಷ್ಕೃಷ್ಟ ಮಾದರಿಯಲ್ಲಿ ಪರಿವರ್ತಿಸುವುದು.
———————————————————-
ಪ್ರಾಂಶುಪಾಲರ ಸಂದೇಶ


ಸೈಂಟ್ ಫಿಲೋಮಿನಾಸ್ ಸ್ವಾಯತ್ತ ಕಾಲೇಜು, ಮೈಸೂರು,- ಇದರ ಅಧಿಕೃತ ವೆಬ್ ಸೈಟ್ ಗೆ ನಿಮ್ಮನ್ನು ಆಹ್ವಾನಿಸಲು ನಾನು ಬಹಳ ಸಂತೋಷಪಡುತ್ತೇನೆ. ಮೈಸೂರು ನಗರದಲ್ಲಿ ವಿಜ್ಞಾನ ವಿಷಯದಲ್ಲಿ ಸ್ನಾತಕ ಪದವಿ ನೀಡುವ ಮೊದಲ ಕಾಲೇಜ್ ಆಗಿರುವ ಸೈಂಟ್ ಫಿಲೋಮಿನಾಸ್ ಗುಣಮಟ್ಟ ಉನ್ನತ ಶಿಕ್ಷಣ ನೀಡುವುದರಲ್ಲಿ ಅದರ ಆದರ್ಶಪ್ರಾಯ ಬಧ್ಧತೆಗಾಗಿ ಪ್ರತ್ಯೇಕವಾಗಿ ಎದ್ದು ಕಾಣುತ್ತದೆ. ಸೈಂಟ್ ಫಿಲೋಮಿನಾಸ್ ನಲ್ಲಿ ನಾವೆಲ್ಲರೂ ನಮ್ಮ ವಿದ್ಯಾರ್ಥಿಗಳ ಭಾವನಾತ್ಮಕ, ಭೌಧ್ಧಿಕ, ಮತ್ತು ನೈತಿಕ ಅವಶ್ಯಕತೆಗಳನ್ನು ಪೂರೈಸುತ್ತಾ ಅವರ ಸಮಗ್ರ ಬೆಳವಣಿಗೆಯಾಗುವಂತೆ ನೋಡಿಕೊಳ್ಳುತ್ತೇವೆ. ಭಾರತದ 20 ರಾಜ್ಯಗಳಿಂದ ಮತ್ತು ಪ್ರಪಂಚದಾದ್ಯಂತ 30 ದೇಶಗಳಿಂದ ಬಂದಿರುವ ವಿದ್ಯಾರ್ಥಿಗಳು ಈ ಕಾಲೇಜನ್ನು ಜಾಗತಿಕ ಗ್ರಾಮವನ್ನಾಗಿ ಮಾಡಿದ್ದಾರೆ. ಇದು ಸಮೃಧ್ಧ ಸಾಂಸ್ಕೃತಿಕ, ಭಾಷೆಗಳ ಮತ್ತು ಜೀವನ ಶೈಲಿಗಳ ವೈವಿಧ್ಯತೆಯನ್ನು ಅನುಭವಿಸಲು ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲ ಮಾಡುತ್ತದೆ. ಈ ವಿಷಯವು ಜಾಗತಿಕ ಗ್ರಾಮದ ವೈಶಿಷ್ಟ್ಯತೆಯೂ ಹೌದು. ಹಚ್ಚ ಹಸಿರಾಗಿರುವ, ಸುಂದರ ಹಾಗೂ ವಿಶಾಲವಾಗಿರುವ 25 ಎಕರೆಗಳಷ್ಟು ವಿಸ್ತಾರವಾದ ಕ್ಷೇತ್ರಾವರಣದಲ್ಲಿ ರಾಜರ ಅರಮನೆಗಳನ್ನು ಹೋಲುವಂತಹ ಕಟ್ಟಡಗಳುಳ್ಳ ಕಾಲೇಜು ಭವ್ಯವಾಗಿ ನಿಂತಿರುತ್ತದೆ. ತರಗತಿಯ ಕೊಠಡಿಗಳು, ಗ್ರಂಥಾಲಯ , ಕ್ಯಾಂಟೀನ್ ಲೇಖನ ಸಾಮಗ್ರಿ ಅಂಗಡಿಗಳು ವಿಶಾಲವಾಗಿದ್ದು, ಇವೆಲ್ಲವೂ ವಿದ್ಯಾರ್ಥಿಸ್ನೇಹಿಯಾಗಿದೆ.
ಒಮ್ಮನಸ್ಸಿನ ನಿಷ್ಠೆಯುಳ್ಳ ಉತ್ಸಾಹೀ ಶಿಕ್ಷಕರು, ಬಧ್ಧತೆಯುಳ್ಳ ಸಹಾಯಕ ಸಿಬ್ಬಂದಿ ಮತ್ತು ತಾಂತ್ರಿಕ ಸಹಾಯ ಸಿಬ್ಬಂದಿಯೊಂದಿಗೆ ಕಾಲೇಜು ಶೈಕ್ಷಣಿಕ ಕಾರ್ಯ ಕ್ಷೇತ್ರ ದಲ್ಲಿ ತನ್ನದೇ ಆದ ಗೌರವಯುತ ಸ್ಥಾನವನ್ನು ಸೃಷ್ಟಿಸಿಕೊಂಡಿದೆ. ನಾವು ಮಾಡುವ ಎಲ್ಲಾ ಕಾರ್ಯಗಳಲ್ಲಿ ವೃತ್ತಿಪರತೆ ಮತ್ತು ಪರಿಪೂರ್ಣತೆ ನಮ್ಮ ಕಾಲೇಜಿಗೆ ಒಂದು ನಿರ್ದಿಷ್ಟ ಛಾಪನ್ನು ನೀಡಿದೆ. ಕಾಲೇಜು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು ಐ ಸಿ ಟಿ (ICT) ಸಕ್ರಿಯಗೊಂಡ ಶಿಕ್ಷಣವನ್ನು ನೀಡಲಾಗುತ್ತಿದೆ. ತರಗತಿಯ ಬೋಧನೆಗೆ ಹೆಚ್ಚುವರಿಯಾಗಿ ಹಲವಾರು ಸಹ-ಪಠ್ಯಕ್ರಮಗಳು ಮತ್ತು ಪಠ್ಯೇತರ ಚಟುವಟಿಕೆಗಳು, ನಿಯಮಿತ ಕ್ಷೇತ್ರ ಮತ್ತು ಉದ್ದಿಮೆ ಪ್ರವಾಸಗಳು, ಈ ಎಲ್ಲಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯು ಒಂದು ಆಸಕ್ತಿದಾಯಕ ಕಾರ್ಯವಾಗುತ್ತದೆ.ಈ ಕಾಲೇಜಿನ ಪ್ರಮುಖ ಪಾಲುದಾರರಾದ ವಿದ್ಯಾರ್ಥಿಗಳನ್ನು ಕಾಲೇಜಿನ ನಿರ್ಣಾಯಕ ವಿಷಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಈ ಸಂಸ್ಥೆಯ ಒಂದು ಆರೋಗ್ಯಕರ ರೂಢಿಯಾಗಿದೆ.
ಸವೆದುಹೋಗುತ್ತಿರುವ ಮಾನವೀಯ ಮೌಲ್ಯಗಳು ಮತ್ತು ಕ್ಷೀಣಿಸುತ್ತಿರುವ ಭಾವನಾತ್ಮಕ ಅಂಶ ಸಮಾಜಕ್ಕೆ ಭಾರಿ ಅಪಾಯವನ್ನೊಡ್ಡುತ್ತಿವೆ. ಈ ಹಿನ್ನೆಲೆಯಲ್ಲಿ ಸೈಂಟ್ ಫಿಲೋಮಿನಾಸ್ ಕಾಲೇಜು ಒಂದು ಅಪೂರ್ವ ಹೆಜ್ಜೆಯನ್ನು ತೆಗೆದುಕೊಂಡಿದೆ. ಪ್ರತಿ ವಿದ್ಯಾರ್ಥಿಯೂ ಯಾವುದೇ ಪಠ್ಯಕ್ರಮವನ್ನು ಆಯ್ಕೆ ಮಾಡಿಕೊಂಡಿದ್ದರೂ, ಮಾನವೀಯ ಮೌಲ್ಯಗಳು ಮತ್ತು ಜೀವನವನ್ನು ಅರ್ಥಪೂರ್ಣವಾಗಿಸುವುದರಲ್ಲಿ ಮೌಲ್ಯಗಳ ಮಹತ್ವ – ಈ ವಿಚಾರವನ್ನು ಒಳಗೊಂಡಿರುವ 6 ತಿಂಗಳುಗಳ ಒಂದು ಪಠ್ಯಕ್ರಮವನ್ನು ಅಧ್ಯಯನ ಮಾಡಬೇಕಿರುತ್ತದೆ. ಧಾರ್ಮಿಕ ಅಸಹಿಷ್ಣುತೆ ಒಂದು ಆಧುನಿಕ ಸಮಾಜದ ಪೀಡೆ ಎಂದೇ ಪರಿಗಣಿಸಲಾಗಿರುವ ಧಾರ್ಮಿಕ ಅಸಹಿಷ್ಣುತೆ- ಸಮಸ್ಯೆಯನ್ನು ಬಗೆಹರಿಸಲು, ಪದವಿಯ ಕೊನೆಯ ವರ್ಷದಲ್ಲಿರುವ ವಿದ್ಯಾರ್ಥಿಗಳು ‘ಇಂಟರ್ ರಿಲಿಜಿಯಸ್ ಡಯಲಾಗ್’ (’ಅಂತರ್ ಧಾರ್ಮಿಕ ವಿಚಾರ ವಿನಿಮಯ’) ಎಂಬ ವಿಶೇಷ ಅಧಿವೇಶನಗಳಲ್ಲಿ ಪಾಲುಗೊಳ್ಳುವರು. ಈ ಅಧಿವೇಶನಗಳಲ್ಲಿ ಅಂತರ್ ಧಾರ್ಮಿಕ ವಿಷಯ ವಸ್ತುವಿಗೆ ಸಂಬಂಧ ಪಟ್ಟ ಸ್ಥಳೀಯ, ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸಮಸ್ಯೆಗಳನ್ನು ಚರ್ಚಿಸಲಾಗುತ್ತದೆ.
ಫಿಲೋಮಿನಾಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ದೈಹಿಕ ಚಟುವಟಿಕೆ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಲು ಅಸಂಖ್ಯಾತ ಆಸ್ಪದಗಳಿವೆ. ಹೊರಾಂಗಣ ಮತ್ತು ಒಳಾಂಗಣ ಸ್ಟೇಡಿಯಮ್, ವ್ಯಾಯಾಮಶಾಲೆ ಮತ್ತು ವಿಶಾಲವಾದ ಆಟದ ಮೈದಾನಗಳು, ಇವೆಲ್ಲವೂ ನಮ್ಮ ಕಾಲೇಜಿನ ಉತ್ಕೃಷ್ಟತೆಯ ಲಾಂಛನವಾಗಿವೆ. ನಮ್ಮ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮತ್ತು ಅಂತರ್ ಕಾಲೇಜು ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಗೆದ್ದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಪ್ರಕೃತಿ ಪ್ರಿಯರ ಕೂಟ, ಸಾಹಿತ್ಯ ಕೂಟ, ರಂಗಕಲೆಯ ಕೂಟ, ಸಾಂಸ್ಕೃತಿಕ ಕೂಟ ಈ ತೆರನ ವಿವಿಧ ಸಂಘಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಮರ್ಥ್ಯಗಳನ್ನು ಹೊರತರುವುದಲ್ಲದೆ ಅವು ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ನೆರವು ನೀಡುತ್ತವೆ. ಪರಿಸರ ಸಂರಕ್ಷಣೆಯಲ್ಲಿ ತಮ್ಮ ಜವಾಬ್ದಾರಿಯನ್ನು ಅರ್ಥೈಸಿ ಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿಗಳು ಪತಂಗವನ, ಸಸ್ಯ ವನ ಇವುಗಳನ್ನು ಪೋಷಿಸಿ ಕಾಪಾಡುವ ಹಾಗೂ ಕಾಗದಗಳನ್ನು ಪರಿವರ್ತಿಸಿ ಮರುಬಳಕೆ ಮಾಡುವ- ಇಂತಹ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ನಿರ್ದಿಷ್ಟ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಾವೇ ಬರೆದ ಕಥಾವಸ್ತು, ಸಂಭಾಷಣೆಗಳನ್ನು ಬಳಸಿ ಬಯಲು ನಾಟಕಗಳನ್ನಾಡಿ, ಸಾಮಾಜಿಕವಾಗಿ ಪ್ರಸ್ತುತವಾದಂತಹ ಘಟನೆಗಳ, ಸಮಸ್ಯೆಗಳ ಬಗ್ಗೆ ತಮ್ಮ ಸಹವರ್ತಿಗಳಲ್ಲಿ ಸಂವೇದನಶೀಲತೆಯನ್ನು ಮೂಡಿಸುತ್ತಾರೆ.
ಸೈಂಟ್ ಫಿಲೋಮಿನಾಸ್ ಕಾಲೇಜ್ ಆರಂಭವಾದಾಗಿನಿಂದ ಅದರ ಪ್ರಗತಿಯು ದಾಪುಗಾಲು ಹಾಕುತ್ತಾ ಶರವೇಗದಲ್ಲಿ ಬೆಳೆದಿದೆ. 380 ವಿದ್ಯಾರ್ಥಿಗಳುಳ್ಳ ಪುಟ್ಟ ಸಮುದಾಯದೊಂದಿಗೆ ಪ್ರಾರಂಭವಾದ ನಮ್ಮ ಕಾಲೇಜು ಈಗ ಭಾಷೆ, ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ, ವಿಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್ಸ್, ಪ್ರವಾಸೋದ್ಯಮ ಮತ್ತು ಆತಿಥ್ಯ ವ್ಯವಸ್ಥಾಪನೆ ಮುಂತಾದವುಗಳನ್ನೊಳಗೊಂಡ ವ್ಯಾಪಕ ಶ್ರೇಣಿಯ ವಿಷಯಗಳಲ್ಲಿ ಸ್ನಾತಕ, ಸ್ನಾತಕೋತ್ತರ ಅಧ್ಯಯನ ಮಾಡುವ ಸಾವಿರಾರು ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. ಬಿವಾಕ್ (BVoC)ನಡೆಸಲು ಮತ್ತು ಕಡಿಮೆ ಸವಲತ್ತುಗಳುಳ್ಳ ಹಾಗೂ ಸಮುದಾಯದ/ಸಮಾಜದ ಅಂಚಿನಲ್ಲಿರುವ ಜನ ಸಮೂಹಗಳಿಗೆ ಕಲಿಕಾ ಕಾರ್ಯಕ್ರಮಗಳನ್ನು ನೀಡುವ ‘Community College ’ನಡೆಸಲು ಯು ಜಿ ಸಿ ಯ ಅನುದಾನಕ್ಕೆ ಫಿಲೋಮಿನಾಸ್ ಕಾಲೇಜ್ ಪಾತ್ರವಾಗಿದೆ.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಧಿವತ್ತಾಗಿ ಸಮರ್ಪಿಸಿರುವ ಕಾಲೇಜಿನ ಕೊಡುಗೆಯನ್ನು ಗುರುತಿಸಿ,ನ್ಯಾಕ್ ಸಂಸ್ಥೆಯು 4 ಪಾಯಿಂಟ್ ಉಳ್ಳ ಮಾಪನದಲ್ಲಿ ’ಎ(A)’ ಶ್ರೇಣಿಯೊಂದಿಗೆ 3.58 ಸಿ ಜ ಪಿ ಎ ನೀಡಿ 2014ರಲ್ಲಿ ಕಾಲೇಜಿನ ಮಾನ್ಯತೆಯನ್ನುಮರುಧೃಢೀಕರಿಸಿದೆ. ಯು ಜಿಸಿಯು 2011-12 ರಲ್ಲಿ ಕಾಲೇಜಿಗೆ ಸ್ವಯಮಾಧಿಕಾರದ ಮಾನ್ಯತೆಯನ್ನುನೀಡಿದಂದಿನಿಂದ ಕಾಲೇಜು ಹಲವಾರು ಶೈಕ್ಷಣಿಕ ಪರಿಪಾಠಗಳಲ್ಲಿ ನಾವಿ-ನ್ಯತೆಯನ್ನು ತರುವ ಸಾಹಸ ಮಾಡಿರುತ್ತದೆ. 2015ರಲ್ಲಿ ಕಾಲೇಜನ್ನು ’ಕಾಲೇಜ್ ಆಫ್ ಎಕ್ಸೆಲೆನ್ಸ್’(ಶ್ರೇಷ್ಠತೆಯ ಕಾಲೇಜು) ಎಂದು ಉನ್ನತಸ್ಥಾನಕ್ಕೆ ಏರಿಸಲಾಯಿತು. ದೇಶದಾದ್ಯಂತ ಈ ಹೆಗ್ಗಳಿಕೆಗೆ ಪಾತ್ರವಾಗಿರುವ 14 ಸಂಸ್ಥೆಗಳಲ್ಲಿ ಸೈಂಟ್ ಫಿಲೋಮಿನಾಸ್ ಕೂಡ ಒಂದಾಗಿದೆ.
ಈ ಮಹಾನ್ ಸಂಸ್ಥೆಯ ದೂರದೃಷ್ಟಿ ಮತ್ತು ಧ್ಯೇಯ ಕ್ಕೆ ತಕ್ಕಂತೆ ಹಾಗೂ ಉನ್ನತ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಅದನ್ನು ಪೋಷಿಸಿದ ವ್ಯಕ್ತಿಗಳ ತ್ಯಾಗದ ಮೂಲಕ ಸಮಾಜದಲ್ಲಿ ಉಳಿದವರಿಗಿಂತ ಕಡಿಮೆ ಅದೃಷ್ಟವುಳ್ಳವರನ್ನು ಅಭಿವೃದ್ಧಿಗೊಳಿಸಿ ಸಾಮಾಜಿಕ ಜವಾಬ್ದಾರಿಯುಳ್ಳ ಹಾಗೂ ನೈತಿಕವಾಗಿ ಪ್ರಾಮಾಣಿಕತೆಯುಳ್ಳ ಭಾರತದ ಪ್ರಜೆಯನ್ನಾಗಿಸಲು ಸೈಂಟ್ ಫಿಲೋಮಿನಾಸ್ ಕಾಲೇಜ್ ಸದಾ ಶ್ರಮಿಸುತ್ತದೆ.
ಸೈಂಟ್ ಫಿಲೋಮಿನಾಸ್ ಕಾಲೇಜಿಗೆ ಮತ್ತೊಮ್ಮೆ ನಿಮಗೆಲ್ಲರಿಗೂ ಆದರದ ಸ್ವಾಗತ.
ಡಾ.ಟಿ. ರೂತ್ ಶಾಂತ ಕುಮಾರಿ
ಪ್ರಾಂಶುಪಾಲರು.
—————————————————————

ರೆಕ್ಟರ್ ಅವರ ಸಂದೇಶ


ಆತ್ಮೀಯರೇ
ನಿಮ್ಮನ್ನು ನಮ್ಮ ಕಾಲೇಜಿನ ಅಂತರ್ಜಾಲ ತಾಣಕ್ಕೆ ಸ್ವಾಗತಿಸಲು ನನಗೆ ಸಂತೋಷ ಹಾಗೂ ಹೆಮ್ಮೆಯಾಗುತ್ತಿದೆ.
ಪ್ರಧಾನ ವಿದ್ಯಾಸಂಸ್ಥೆ ಯಾಗಿರುವ ಸೈಂಟ್ ಫಿಲೋಮಿನಾಸ್ ಕಾಲೇಜು ಮೈಸೂರು, ವ್ಯಾಸಂಗ ವಿಷಯಗಳಲ್ಲಿ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಹೋನ್ನತ ಸಾಧನೆ ಮಾಡಿರುವ ಪ್ರಖ್ಯಾತಿಯನ್ನು ಹೊಂದಿರುತ್ತದೆ. ಇದರೊಂದಿಗೆ, ಹಿಂದಿನಿಂದ ಉನ್ನತ ಶಿಕ್ಷಣದಲ್ಲಿ ಮಹತ್ವ ಸಾಧನೆಗಳನ್ನು ಸಾಧಿಸಿರುವ ದೀರ್ಘ ಇತಿಹಾಸವನ್ನು ಹೊಂದಿರುವ ಈ ನಮ್ಮ ಕಾಲೇಜು ಧೃಢವಿಶ್ವಾಸ, ಹೆಮ್ಮೆ ಮತ್ತು ಉತ್ಸಾಹದಿಂದ ಮುನ್ನಡೆಯುತ್ತಿದೆ.
ಉತ್ಕೃಷ್ಟ ಸರ್ವತೋಮುಖ ಶೈಕ್ಷಣಿಕ ಬೆಳವಣಿಗೆಯ ಕುರಿತು ಕಾಲೇಜಿನ ಸಿಬ್ಬಂದಿ ವರ್ಗಕ್ಕೆ ಇರುವ ಬಧ್ಧತೆಯನ್ನು ಗಮನಿಸಿ ನಾನು ಅದರಿಂದ ಬಹಳ ಪ್ರಭಾವಿತನಾಗಿದ್ದೇನೆ. ಸಂಪೂರ್ಣ ಸ್ವಯಮಾಧಿಕಾರದ ಮಾನ್ಯತೆಯನ್ನು ಕಳೆದ 6 ವರ್ಷಗಳಿಂದ ಅನುಭೋಗಿಸುತ್ತಿರುವ ನಮ್ಮ ಕಾಲೇಜಿಗೆ ಆ ಮಾನ್ಯತೆಯನ್ನು ಇನ್ನೂ 5 ವರ್ಷಗಳ ಅವಧಿಯವರೆಗೆ (2017-18 ರಿಂದ 2021-22ರ ವರೆಗೆ) ದೀರ್ಘೀಕರಣ ಮಾಡಲಾಗಿದೆ. ಈಗ, (Choice Based Credit System) ಸಿಬಿಸಿಎಸ್ ವ್ಯವಸ್ಥೆಯನ್ನು ಸ್ನಾತಕ ಪದವಿಯ ಮಟ್ಟದಲ್ಲಿ ಎಲ್ಲಾ ವಿಷಯಗಳಲ್ಲಿ ಕಾರ್ಯಗತಗೊಳಿಸಲಾಗಿದೆ, ಮತ್ತು ಮೂರನೇ ಆವರ್ತದ ’ನ್ಯಾಕ್’ (ಎನ್ ಎ ಎ ಸಿ) ಮಾನ್ಯತೆ ಪಡೆಯಲು ಸಿಧ್ಧತೆಗಳು ಅತಿ ಬಿರುಸಿನಿಂದ ನಡೆಯುತ್ತಿವೆ
ನಮ್ಮ ಕಾಲೇಜಿನಲ್ಲಿ ಒದಗಿಸುವ ಈಗಾಗಲೇ ಅತ್ಯುತ್ತಮವೆಂದೆನಿಸಿಕೊಂಡಿರುವ ಸೌಲಭ್ಯಗಳ ಅಭಿವರ್ಧನಾ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿರುತ್ತದೆ. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ಬೆಳವಣಿಗೆಗಾಗಿ ಅವಕಾಶಗಳನ್ನು ಮತ್ತು ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಪಠ್ಯ ವಿಷಯಗಳಲ್ಲಿ, ಸಹ-ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಮ್ಮ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ಘನತೆಯನ್ನು ಎತ್ತಿ ಹಿಡಿಯಲು ಹಾಗೂ ಅದರ ಪತಾಕೆಯು ದಿಗಂತದಲ್ಲಿ ಎತ್ತರಕ್ಕೆ ಯಾವಾಗಲೂ ಹಾರಾಡುತ್ತಲೇ ಇರುವಂತೆ ಶ್ರಮಿಸುವರೆಂದು ನನಗೆ ಗಾಢನಂಬಿಕೆ ಇದೆ.
ಕಾಲೇಜಿಗೆ ಸಂಭಂದಿಸಿದ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ನಡುವೆ ಸ್ನೇಹಪರ ಮತ್ತು ಹೊಂದಾಣಿಕೆಯ ವಾತಾವರಣವನ್ನು ಸೃಷ್ಟಿಸಿ “ಸದಾ ತೆರೆದಿರುವ ಬಾಗಿಲು” ನ ಮೂಲಕ ಸವಾಲುಗಳು ಬಹಿರಂಗವಾಗಿ ಚರ್ಚಿಸಲ್ಪಟ್ಟು ಆರೋಗ್ಯಕರ ಪರಿಹಾರವನ್ನು ಹೊಂದಬಹುದೆಂದು ನಾನು ವೈಯಕ್ತಿಕವಾಗಿ ನಂಬಿದ್ದೇನೆ
ನೀವು ನಮ್ಮ ಜಾಲತಾಣಕ್ಕೆ ಭೇಟಿಕೊಡುವಿರೆಂದು ಆಶಿಸುತ್ತೇನೆ. ನಮ್ಮನ್ನು ಸಂಪರ್ಕಿಸಲು ನೀವು ಇಚ್ಛಿಸಿದಲ್ಲಿ ದಯವಿಟ್ಟು ಜಾಲತಾಣದ ’ಸಂಪರ್ಕ ಪುಟ’ಕ್ಕೆ ಹೋಗಿ ವಿವರಗಳನ್ನು ಕಂಡುಕೊಳ್ಳಿ.

ರೆವರೆಂಡ್. ಡಾ. ಬರ್ನಾರ್ಡ್ ಪ್ರಕಾಶ್ ಬರ್ನಿಸ್.
ರೆಕ್ಟರ್ (ನಿರ್ವಹಣಾಧಿಕಾರಿ)

 


ಲಭ್ಯವಿರುವ ಸೌಲಭ್ಯಗಳು
ಪುರುಷರ ವಿದ್ಯಾರ್ಥಿ ನಿಲಯ

Boys Hostel

ಪುರುಷರ ವಿದ್ಯಾರ್ಥಿ ನಿಲಯವು ಕಾಲೇಜಿನಷ್ಟೇ ಹಳೆಯದ್ದಾಗಿರುತ್ತದೆ. ಇದು ಒಂದು ಯೋಗ್ಯ ವಸತಿಯನ್ನು ಒದಗಿಸುವುದರೊಂದಿಗೆ, ಸಹಯೋಗಿತ್ವ ಮತ್ತು ಜವಾಬ್ದಾರಿ, ಒಡಗೂಡಿಕೊಳ್ಳುವ ಭಾವನೆ ಮತ್ತು ಅನ್ಯೋನ್ಯತೆ,ಈ ಎಲ್ಲಾ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಅನುವಾಗುವಂತಹ ಹಾಗೂ ಪರಸ್ಪರ ಹಂಚಿಕೆ ಮತ್ತು ಪರಸ್ಪರ ಕಾಳಜಿಯನ್ನು ಮೈಗೂಡಿಸಿಕೊಳ್ಳುವಂತಹ ಅತ್ಯುತ್ತಮ ಹಾಗೂ ಅಹ್ಲಾದಕರ ವಾತಾವರಣವನ್ನೂ ಒದಗಿಸುತ್ತದೆ. ಪುರುಷರ ವಿದ್ಯಾರ್ಥಿ ನಿಲಯ ದ ವಸತಿಯು ವಾಸಿಸುವವರಲ್ಲಿ ಭ್ರಾತೃತ್ವದ ಭಾವನೆ ಬೆಳೆಯಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಲಭ್ಯವಿರುವ ಸಮಯದ ಗರಿಷ್ಠ ಬಳಕೆಗೆ ಇದು ನೆರವು ನೀಡುತ್ತದೆ.

ಹಾಸ್ಟೆಲ್ ನಲ್ಲಿ ಲಭ್ಯವಿರುವ  ಸೌಕರ್ಯಗಳು
1. ಊಟದ ವ್ಯವಸ್ಥೆ –ನೈರ್ಮಲ್ಯವುಳ್ಳ ಸ್ಥಳದಲ್ಲಿ ತಯಾರಿಸಿದ ತಾಜಾ, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ
2. ಸರ್ವೋಪಯೋಗಿ ಕೊಠಡಿ –ಈ ಕೊಠಡಿಯಲ್ಲಿ ಟೆಲಿವಿಜ಼ನ್ ಮತ್ತು ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ವೃತ್ತ ಪತ್ರಿಕೆಗಳು ಮತ್ತು ವಾರ ಪತ್ರಿಕೆ, ಮಾಸಪತ್ರಿಕೆಗಳು ಈ ಮುಂತಾದ ನಿಯತ ಕಾಲಿಕೆಗಳ (ಮ್ಯಾಗಝಿನ್) ಸಂಗ್ರಹಣೆ ಲಭ್ಯವಿರುತ್ತವೆ.
3. ಸುವ್ಯವಸ್ಥಿತ ವೇಳಾಪಟ್ಟಿ –(ಕಾಲೇಜಿನ ವೇಳಪಟ್ಟಿಯೊಂದಿಗೆ) ವಿದ್ಯಾರ್ಥಿಗಳ ದಿನಂಪ್ರತಿ ವೇಳಾಪಟ್ಟಿಯಲ್ಲಿ ಸ್ವ-ಅಧ್ಯಯನ, ಕ್ರೀಡೆ, ಮನೋರಂಜನೆ ಮತ್ತು ವಿಶ್ರಾಂತಿ ಇವೆಲ್ಲವಕ್ಕೂ ಸೂಕ್ತ ಸಮಯಗಳನ್ನು ಅಳವಡಿಸಲಾಗಿರುತ್ತದೆ.
4. ಟೆಲಿವಿಜ಼ನ್ ಕೊಠಡಿಗಳು, ಓದಲು ಆರಾಮ ಕೊಠಡಿಗಳು, ಸ್ನೂಕರ್ ಆಟದ ಮೇಜುಗಳು, ಹಾಗೂ ಅಧ್ಯಯನಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಒದಗಿಸಲಾಗಿರುತ್ತದೆ.
5. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಸ್ಟೆಲ್ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳ ಸಾಧನ ಸಲಕರಣೆಗಳಿಂದ ಸುಸಜ್ಜಿತವಾಗಿರುತ್ತದೆ. ವ್ಯಾಯಾಮ ಶಾಲೆಯನ್ನು ಉಪಯೋಗಿಸಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುತ್ತದೆ.
6. ಲೇಖನ ಸಾಮಗ್ರಿಗಳ ಅಂಗಡಿ
7. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಎ ಟಿ ಎಮ್ ಕೇಂದ್ರ
8. ಹಬ್ಬ ಹರಿದಿನ ಮತ್ತು ಇನ್ನಿತರಸಮಯ ಸಂದರ್ಭ ಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು
ವಿದ್ಯಾರ್ಥಿ ನಿಲಯದ ವಾರ್ಡನ್/ಮೇಲ್ವಿಚಾರಕರ ಮೂಲಕ ವಿದ್ಯಾರ್ಥಿಗಳಿಗೆ ದೂರವಾಣಿ/ಟೆಲಿಫೋನ್ ಬಳಸಲು ಅನುಕೂಲವಿರುತ್ತದೆ. ವಿದ್ಯಾರ್ಥಿ ನಿಲಯದ ಕಛೇರಿಯ ಮೂಲಕ ಪೋಷಕರು ವಿದ್ಯಾರ್ಥಿಗಳನ್ನು ಸಂಪರ್ಕಿಸ ಬಹುದು.
9. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ನೋಡಿಕೊಳ್ಳಲೆಂದು ಗೃಹ ಸಿಬ್ಬಂದಿಗಳ ಒಂದು ತಂಡವಿರುತ್ತದೆ.
10. ವಿದ್ಯಾರ್ಥಿಗಳಿಗೆ ನಿರಂತರವಾಗಿ ರಕ್ಷಣೆ ಮತ್ತು ಮಾರ್ಗದರ್ಶನ ನೀಡಲು ಹಿರಿಯ ಶಿಕ್ಷಕರೊಬ್ಬರು ನಿವಾಸಿ ವಾರ್ಡನ್ ನಾಗಿ ಇರುತ್ತಾರೆ.
ಮಹಿಳೆಯರ ವಿದ್ಯಾರ್ಥಿ ನಿಲಯ
ಹುಡುಗಿಯರ ವಿದ್ಯಾರ್ಥಿ ನಿಲಯ- “ ಮನೆಯಿಂದ ದೂರವಿರುವ  ಮನೆ”
ಕಾಲೇಜಿನ ಕ್ಷೇತ್ರಾವರಣದೊಳಗಿರುವ ಈ ಹಾಸ್ಟೆಲ್ ಸುರಕ್ಷಿತವಾದ 4 ಮಹಡಿಗಳ ಕಟ್ಟಡವನ್ನು ಒಳಗೊಂಡಿರುತ್ತದೆ. ಇದು ಹಿತಕರ ವಸತಿಯನ್ನು ಒದಗಿಸುವುದರೊಂದಿಗೆ, ಸಹಯೋಗಿತ್ವ ಮತ್ತು ಜವಾಬ್ದಾರಿ ಬೆಳೆಸಿಕೊಳ್ಳಲು ಅನುವಾಗುವಂತಹ ಅತ್ಯುತ್ತಮ ಪರಿಸರವನ್ನು ಒದಗಿಸುತ್ತದೆ. ಮನೆಯಿಂದಾಚೆ ದೂರದಲ್ಲಿರುವ ಮತ್ತೊಂದು ಮನೆಯಾಗಿದ್ದು ಇಲ್ಲಿ ಯುವ ವಿದ್ಯಾರ್ಥಿನಿಯರು ಒಡಗೂಡಿ ಒಟ್ಟಾಗಿ ಇರುವ ಹುರುಪನ್ನು ಹಾಗೂ ಪರಸ್ಪರ ಹಂಚಿಕೆ ಮತ್ತು ಪರಸ್ಪರ ಕಾಳಜಿ – ಈ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಹಾಸ್ಟೆಲ್ ವಸತಿಯು ವಾಸಿಸುವವರಲ್ಲಿ ಭ್ರಾತೃತ್ವದ ಭಾವನೆ ಬೆಳೆಯಲು ಸಹಾಯ ಮಾಡುತ್ತದೆ. ವಿದ್ಯಾರ್ಥಿನಿಯರಿಗೆ ಲಭ್ಯವಿರುವ ಸಮಯದ ಗರಿಷ್ಠ ಬಳಕೆಗೆ ಇದು ನೆರವು ನೀಡುತ್ತದೆ.
ಹಾಸ್ಟೆಲ್ ಒಂದು ಸಂರಕ್ಷಿತ ವಾಸಸ್ಥಾನವಾಗಿರುತ್ತದೆ. ಏಕೆಂದರೆ, ನಮಗೆ ವಿದ್ಯಾರ್ಥಿನಿಯರ ಭದ್ರತೆಯು ಅತಿ ಮುಖ್ಯವಾದ ವಿಷಯವಾಗಿರುತ್ತದೆ. ಹಾಸ್ಟೆಲ್ ಪರಿಸರ ಸ್ನೇಹಿ ವಾತಾವರಣವನ್ನು ಹೊಂದಿದ್ದು, ಸುತ್ತ ಮುತ್ತಲೂ ಹೂವಿನ ಗಿಡಗಳನ್ನು, ಮಾವು, ಬೇವು, ತೆಂಗು ಈ ಮೊದಲಾದ ಮರಗಳನ್ನೊಳಗೊಂಡಿರುವ ಸ್ವಚ್ಛ ಹಾಗೂ ಆರೋಗ್ಯಕರ ತಾಣವಾಗಿರುತ್ತದೆ.
ಊಟದ ವ್ಯವಸ್ಥೆ – ನೈರ್ಮಲ್ಯವುಳ್ಳ ಸ್ಥಳದಲ್ಲಿ ತಯಾರಿಸಿದ ತಾಜಾ, ಆರೋಗ್ಯಕರ, ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ.
ಸರ್ವೋಪಯೋಗಿ ಕೊಠಡಿ – ಈ ಕೊಠಡಿಯಲ್ಲಿ ಟೆಲಿವಿಜ಼ನ್ ಮತ್ತು ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ವೃತ್ತ ಪತ್ರಿಕೆಗಳು ಮತ್ತು ವಾರ ಪತ್ರಿಕೆ, ಮಾಸಪತ್ರಿಕೆಗಳು ಈ ಮುಂತಾದ ನಿಯತ ಕಾಲಿಕಗಳ (ಮ್ಯಾಗಝಿನ್) ಸಂಗ್ರಹಣೆ ಲಭ್ಯವಿರುತ್ತವೆ.

ಸುವ್ಯವಸ್ಥಿತ ವೇಳಾಪಟ್ಟಿ – (ಕಾಲೇಜಿನ ವೇಳಪಟ್ಟಿಯೊಂದಿಗೆ) ವಿದ್ಯಾರ್ಥಿಗಳ ದಿನಂಪ್ರತಿ ವೇಳಾಪಟ್ಟಿಯಲ್ಲಿ ಸ್ವ-ಅಧ್ಯಯನ, ಕ್ರೀಡೆ, ಮನೋರಂಜನೆ ಮತ್ತು ವಿಶ್ರಾಂತಿ ಇವೆಲ್ಲವಕ್ಕೂ ಸೂಕ್ತ ಸಮಯಗಳನ್ನು ಅಳವಡಿಸಲಾಗಿರುತ್ತದೆ
ಟೆಲಿವಿಜ಼ನ್ ಕೊಠಡಿಗಳು, ಓದಲು ಆರಾಮ ಕೊಠಡಿಗಳು, ಸ್ನೂಕರ್ ಆಟದ ಮೇಜುಗಳು, ಹಾಗೂ ಅಧ್ಯಯನಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಒದಗಿಸಲಾಗಿರುತ್ತದೆ.
ವಿದ್ಯಾರ್ಥಿನಿಯರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಸ್ಟೆಲ್ ನಲ್ಲಿ ಒಳಾಂಗಣ ಹಾಗೂ ಹೊರಾಂಗಣಗಳು, ಕ್ರೀಡೆಗಳ ಸಾಧನ ಸಲಕರಣೆಗಳಿಂದ ಸುಸಜ್ಜಿತವಾಗಿರುತ್ತದೆ. ವ್ಯಾಯಾಮ ಶಾಲೆಯನ್ನು ಉಪಯೋಗಿಸಲು ವಿದ್ಯಾರ್ಥಿನಿಯರಿಗೆ ಉತ್ತೇಜನ ನೀಡಲಾಗುತ್ತದೆ.
11. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಎ ಟಿ ಎಮ್ ಕೇಂದ್ರ
12.ಲೇಖನ ಸಾಮಗ್ರಿಗಳ ಅಂಗಡಿ

ಹಬ್ಬ ಹರಿದಿನ ಮತ್ತು ಇನ್ನಿತರ ಸಮಯ ಸಂದರ್ಭ ಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು
ಹಾಸ್ಟೆಲ್ ನ ವಾರ್ಡನ್/ಮೇಲ್ವಿಚಾರಕರ ಮೂಲಕ ವಿದ್ಯಾರ್ಥಿಗಳಿಗೆ ದೂರವಾಣಿ/ಟೆಲಿಫೋನ್ ಬಳಸಲು ಅನುಕೂಲವಿರುತ್ತದೆ. ಹಾಸ್ಟೆಲ್ ನ ಕಛೇರಿಯ ಮೂಲಕ ಪೋಷಕರು ವಿದ್ಯಾರ್ಥಿಗಳನ್ನು ಸಂಪರ್ಕಿಸ ಬಹುದು.
ಸಂಪೂರ್ಣ ಕಾಳಜಿಯೊಂದಿಗೆ ವಿದ್ಯಾರ್ಥಿನಿಯರ ಯೋಗಕ್ಷೇಮವನ್ನು ನೋಡಿಕೊಳ್ಳಲೆಂದು ಗೃಹ ಸಿಬ್ಬಂದಿಗಳ ಒಂದು ತಂಡವಿರುತ್ತದೆ.
ನಿವಾಸಿ ವಾರ್ಡನ್ ಒಬ್ಬ ಹಿರಿಯ ಶಿಕ್ಷಕಿಯಾಗಿದ್ದು ಅವರು ವಿದ್ಯಾರ್ಥಿನಿಯರಿಗೆ ಸಹಾಯ ಮತ್ತು ಮಾರ್ಗದರ್ಶನ ನೀಡಲು ಯಾವಾಗಲೂ ಬಧ್ಧರಾಗಿರುತ್ತಾರೆ.
ಬ್ಯಾಂಕ್ ಮತ್ತು ಎ ಟಿ ಎಮ್
ನಮ್ಮ ಕಾಲೇಜಿನ ಆವರಣದಲ್ಲಿ 2 ಎ ಟಿ ಎಮ್ ಕೌಂಟರ್ (ಎ ಟಿ ಎಮ್ ಮಂಟಪ)ಗಳಿರುತ್ತವೆ. ಇವುಗಳಲ್ಲಿ ಒಂದು ಸಿಂಡಿಕೇಟ್ ಬ್ಯಾಂಕ್ ಗೆ ಸೇರಿರುತ್ತದೆ, ಮತ್ತೊಂದು ಸೌತ್ ಇಂಡಿಯನ್ ಬ್ಯಾಂಕ್ ಗೆ ಸೇರಿರುತ್ತದೆ.
ಬ್ಯಾಂಕ್ ರಜೆದಿನಗಳ ಮತ್ತು ಸಾರ್ವಜನಿಕ ರಜಾದಿನಗಳ ಬಗ್ಗೆ ಚಿಂತಿಸುವ ಅಗತ್ಯವಿರುವಿದಿಲ್ಲ. ದಿನದ 24 ಗಂಟೆಗಳು ಹಾಗೂ ವಾರದ 7 ದಿನಗಳೂ ಮತ್ತು ವರ್ಷದುದ್ದಕ್ಕೂ ಬ್ಯಾಂಕ್ ವ್ಯವಹಾರ ಮಾಡಲು ಸೌಲಭ್ಯವಿರುತ್ತದೆ. ಕಾಲೇಜಿನ ಸಿಬ್ಬಂದಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಕೇವಲ ಬಟನ್ ಗಳನ್ನು ಒತ್ತಿ ಬ್ಯಾಂಕ್ ವ್ಯವಹಾರಮಾಡಿ ಅದರ ಹಲವಾರು ಸವಲತ್ತುಗಳನ್ನು ಅನುಭೋಗಿಸಬಹುದು:
• ತ್ವರಿತ ನಗದು ಹಿಂತೆಗೆದುಕೊಳ್ಳುವಿಕೆ
• ಖಾತೆ ಸಮತೋಲನ ವಿಚಾರಣೆ
• ಹಣವನ್ನು ಹಿಂತೆಗೆದುಕೊಳ್ಳುವುದು
• ಸುಪ್ತವಾಗಿರುವ ಖಾತೆಯನ್ನು ಉಳಿಸಿಕೊಳ್ಳುವುದು
• ಕಿರು ಲೆಕ್ಕಪಟ್ಟಿ (ಮಿನಿ ಸ್ಟೇಟ್ ಮೆಂಟ್) ಮೂಲಕ ಇತ್ತೀಚಿನ ವ್ಯವಹಾರಗಳ ವಿವರಗಳು
• ಯಾವುದೇ ಸಮಯದಲ್ಲಿ ನಗದು / ಚೆಕ್ ಗಳನ್ನು ಠೇವಣಿ ಮಾಡಬಹುದು
• ಹೊಸ ಚೆಕ್ ಬುಕ್ ಗಾಗಿ ವಿನಂತಿ
• ಖಾತೆಗಳ ನಡುವೆ ನೈಜ ಸಮಯದ ಆಧಾರದ ಮೇಲೆ ವರ್ಗಾವಣೆ ಮಾಡಬಹುದು.
• ನಿತ್ಯೋಪಯುಕ್ತ ಬಿಲ್ ಗಳನ್ನು ಪಾವತಿಸಬಹುದು.
ಕ್ಯಾಂಟೀನು / ತಿಂಡಿಕಟ್ಟೆ
ಸೈಂಟ್ ಫಿಲೋಮಿನಾಸ್ ಕಾಲೇಜ್ ವತಿಯಿಂದ ಸ್ಥಾಪಿಸಲ್ಪಟ್ಟ ಕ್ಯಾಂಟೀನ್ ಅದರ ಆರಂಭದಿಂದಲೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಾಕಷ್ಟು ವೈವಿಧ್ಯತೆ, ವ್ಯಾಪಕತೆಯುಳ್ಳ ಆಹಾರ ಪದಾರ್ಥಗಳನ್ನು ಅವುಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಾತರಿಗೊಳಿಸಿಕೊಂಡು ಶುಧ್ಧ ಸ್ಥಿತಿಯಲ್ಲಿ ಒದಗಿಸುವುದು ಕಾಲೇಜ್ ನ ಗುರಿಯಾಗಿರುತ್ತದೆ. ಇದೇ ಗುರಿ ಇಟ್ಟುಕೊಂಡು ಆಹಾರ/ತಿಂಡಿ ಪೊಟ್ಟಣಗಳನ್ನು ಮಾರುವ ಒಂದು ಕಿಯೋಸ್ಕ್ ನ್ನೂ (ಕಟೆ ಕಟೆಯನ್ನೂ) ಸ್ಥಾಪಿಸಲಾಗಿದೆ. ಈ ಕ್ಯಾಂಟೀನು ಕಾಲೇಜಿನ ಸಮಾರಂಭಗಳಿಗೂ ಆಹಾರ ಸರಬರಾಜಿನ ಸೇವೆಯನ್ನು ದಕ್ಷತೆಯಿಂದ ಒದಗಿಸುತ್ತಿದೆ. ಆಹಾರ ಪೂರೈಕೆ ನಿರ್ವಹಣೆಯಲ್ಲಿ ಒಳ್ಳೆಯ ಅನುಭವವುಳ್ಳ ವ್ಯಕ್ತಿಯೋರ್ವರು ಈ ಕ್ಯಾಂಟೀನ್ ನ್ನು ನಡೆಸುತ್ತಿದ್ದಾರೆ. ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೂ ಸೇರಿದಂತೆ ಈ ಕ್ಯಾಂಟಿನ್ ಗೆ ಭೇಟಿ ಕೊಡುವವರ ಅತ್ಯಧಿಕ ಸೌಕರ್ಯಕ್ಕಾಗಿ ಕ್ಯಾಂಟೀನಿನ ಗುಣಮಟ್ಟವನ್ನು ಕಾಪಾಡಲು ಕಾಲೇಜಿನ ನಿರ್ವಹಣಾ ಸಮಿತಿಯು ಸಂಪೂರ್ಣವಾಗಿ ಬಧ್ಧವಾಗಿರುತ್ತದೆ. ಕಾಲೇಜಿಗೆ ಬಹುದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳು ನಮ್ಮ ಕ್ಯಾಂಟೀನ್ ಗೆ ಬಂದು ತಮ್ಮ ಹಸಿವು ದಾಹಗಳನ್ನು ತಣಿಸಿಕೊಳ್ಳಲು ಇಷ್ಟ ಪಡುತ್ತಾರೆ. ಪ್ಲಾಸ್ಟಿಕ್ ರಹಿತ, ಪರಿಸರ ಸ್ನೇಹಿ ಕ್ಷೇತ್ರಾವರಣದಲ್ಲಿರುವ ಕ್ಯಾಂಟೀನ್ ನ ಸುತ್ತ ಮುತ್ತಲಿನ ಪ್ರದೇಶವನ್ನು ಯಾವಾಗಲೂ ಸ್ವಚ್ಛವಾಗಿ ಓರಣವಾಗಿ ಇಡಲಾಗುತ್ತದೆ. ಭೋಜನ ಪ್ರಿಯರಿಗೆ ಈ ಕ್ಯಾಂಟೀನ್ ಒಂದು ವೈವಿಧ್ಯಮಯ ಎಡೆಯಾಗಿರುತ್ತದೆ.
—————————————————————–
ಪೂರ್ವ ಸ್ನಾತಕ ಪದವಿಯ ಪಠ್ಯ ವಿಷಯಗಳು
ಅಡ್ಡಿಗಳನ್ನು ಭೇದಿಸಿ, ಸರಿಸಿ ಕಾರ್ಯಾರಂಭ ಮಾಡುವ ಯಾವುದೇ ಸಮುದಾಯದ ಕಥನವುಆ ಸಮುದಾಯದ ಮುಂದಾಳುಗಳ ಮತ್ತು ಅಸಾಧಾರಣ ವ್ಯಕ್ತಿಗಳ ಕಥಾನಕವೂ ಆಗಿರುತ್ತದೆ. ನಮ್ಮ ಸ್ಥಾಪಕರು ಧರ್ಮವಿಧಿಯ ಪ್ರಜ್ಞೆಯಿಂದ ಪ್ರೇರಿತರಾಗಿದ್ದರಿಂದ ಅವರಿಗೆ ಭವಿಷ್ಯದಲ್ಲಿ ವೃತ್ತಿ ಅವಕಾಶಗಳಿಗಾಗಿ ಮಾತ್ರ ಶಿಕ್ಷಣವು ಒಂದು ಹೂಡಿಕೆ ಆಗಿರದೆ ಶಿಕ್ಷಣವು ಆತ್ಮಸಾಕ್ಷಾತ್ಕಾರಕ್ಕೆಒಂದು ಮಾರ್ಗವೆಂದೂ ಮತ್ತು ವಿವೇಚನಾಯುಕ್ತ ಜೀವನಕ್ಕೆ ಒಂದು ಮಾರ್ಗದರ್ಶಿ ಎಂದು ಅವರ ನಂಬಿಕೆಯಾಗಿತ್ತು.
ಈ ಪ್ರವರ್ತಕರು ಅಡಿಪಾಯಗಳನ್ನು ಸ್ಥಾಪಿಸಿ, ಅವರ ಕೈಗಳಿಂದ ನಿರ್ಮಾಣಗೊಂಡ ಈ ಕಲಿಕೆಯ ದೇಗುಲವು ಹಲವು ವರ್ಷಗಳಲ್ಲಿ ಬೆಳೆದು, ಭಾರತ ದೇಶದ ಮೂಲೆ ಮೂಲೆಗಳಿಂದ ಹಾಗೂ ಹಲವು ಸಮುದ್ರಗಳ ಆಚೆಯಿಂದ ಕೂಡ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. ಭಾರತದ 23 ರಾಜ್ಯಗಳಿಂದ ಭಾರತೀಯ ವಿದ್ಯಾರ್ಥಿಗಳು ನಮ್ಮಲ್ಲಿರುವುದಲ್ಲದೆ, 20 ಬೇರೆ ಬೇರೆ ರಾಷ್ಟ್ರೀಯತೆ ಹೊಂದಿರುವ ವಿದ್ಯಾರ್ಥಿಗಳೂ ಇರುವರು. ಇವರೆಲ್ಲರೂ ಒಂದಾಗಿ ಸಮ್ಮಿಳಿತ ಸಂಸ್ಕೃತಿಯ ಪ್ರತೀಕವಾಗಿರುವ ನಮ್ಮ ದೇಶದಸಂಕ್ಷೇಪ ರೂಪವನ್ನು ಪ್ರತಿನಿಧಿಸುತ್ತಾರೆ.
ಈ ವಿದ್ಯಾರ್ಥಿಗಳು ಮೊದಲು ಸಂಪ್ರದಾಯಬಧ್ಧ ವಿಷಯಗಳನ್ನು ಕಲಿಯಲು ಬಂದು ನಂತರದಲ್ಲಿ ಇನ್ನೂ ಹೆಚ್ಚು ಪ್ರಚಲಿತಶಿಕ್ಷಣ ವಿಷಯಗಳ ಅಧ್ಯಯನ ಮಾಡುತ್ತಾರೆ. ವಿಷಯಗಳನ್ನು ಕಲಿಯುವುದರೊಂದಿಗೆ, ಅವರು ಹಾಡಲು ಹಾಗೂ ನರ್ತಿಸಲೂ ಬರುತ್ತಾರೆ. ಹಾಗೆಯೇ – ಹಾಕಿ, ಕ್ರಿಕೆಟ್, ಫುಟ್ ಬಾಲ್, ವಾಲಿ ಬಾಲ್, ಬಾಸ್ಕೆಟ್ ಬಾಲ್, ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ – ಈ ಎಲ್ಲಾ ಆಟಗಳನ್ನೂ ಆಡಲು ಬರುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯು ಕಾಲೇಜಿನ ವಾರ್ಷಿಕ ಕ್ರೀಡಾ ಕೂಟದಲ್ಲಿ ಎಲ್ಲರ ಕಣ್ಣಿಗೆ ಕಾಣುವಂತೆ ಮುಂದೆ ಬಂದು, ಅವರಲ್ಲಿ ಕೆಲವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟಗಳಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸುತ್ತಾರೆ.
ಈ ಕೆಳಗಿನ ಪಠ್ಯ ವಿಷಯಗಳಲ್ಲಿ ಸ್ನಾತಕ ಪದವಿಗಳು ಲಭ್ಯವಿರುತ್ತವೆ.
• ಬಿ.ಕಾಮ್ /ವಾಣಿಜ್ಯ ಶಾಸ್ತ್ರದ ಸ್ನಾತಕ ಪದವಿ[ಬ್ಯಾಚೆಲರ್ ಆಫ್ ಕಾಮರ್ಸ್]
• ಬಿ.ಎಸ್ಸಿ / ವಿಜ್ಞಾನ ಶಾಸ್ತ್ರದ ಸ್ನಾತಕ ಪದವಿ[ಬ್ಯಾಚೆಲರ್ ಆಫ್ ಸೈನ್ಸ್]
• ಬಿ.ಸಿ.ಎ/ ಕಂಪ್ಯುಟರ್ ಅಪ್ಲಿಕೇಶನ್ಸ್ಸ್ನಾತಕ ಪದವಿ[ಬ್ಯಾಚೆಲರ್ ಆಫ್ ಕಂಪ್ಯುಟರ್ ಅಪ್ಲಿಕೇಶನ್]
• ಬಿ.ಎ / [ಬ್ಯಾಚೆಲರ್ ಆಫ್ ಆರ್ಟ್ಸ್]
• ಬಿ.ಎಸ್.ಡಬಲ್ಯು./ ಸಮಾಜ ಕಾರ್ಯದ/ಕೆಲಸದ ಸ್ನಾತಕ ಪದವಿ [ಬ್ಯಾಚೆಲರ್ ಆಫ್ ಸೋಶಿಯಲ್ ವರ್ಕ್]
• ಬಿ.ಬಿ.ಎ/ವ್ಯವಹಾರ ಆಡಳಿತ ಶಾಸ್ತ್ರದಸ್ನಾತಕ ಪದವಿ[ಬ್ಯಾಚೆಲರ್ ಆಫ್ ಬಿಸ್ ನೆಸ್ ಅಡ್ಮಿನಿಸ್ಟ್ರೇಶನ್]
• ಬಿ.ಟಿ.ಹೆಚ್.ಎಮ್/ ಪ್ರವಾಸೋದ್ಯಮ ಮತ್ತು ಹೊಟೆಲ್ ನಿರ್ವಹಣೆ ಸ್ನಾತಕ ಪದವಿ[ಬ್ಯಾಚೆಲರ್ ಆಫ್ ಟೂರಿಸಮ್ ಅಂಡ್ ಹೊಟೆಲ್ ಮ್ಯಾನೇಜ್ ಮೆಂಟ್]
• ಬಿ.ವಿಒಸಿ / ಔದ್ಯೋಗಿಕ ಪಠ್ಯಕ್ರಮದ ಸ್ನಾತಕ ಪದವಿ[ಬ್ಯಾಚೆಲರ್ ಆಫ್ ವೊಕೇಶನಲ್ ಕೋರ್ಸಸ್]

ಸ್ನಾತಕೋತ್ತರ ಪಠ್ಯವಿಷಯಗಳು.

• ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ಎಮ್.ಎಸ್ಸಿ. ಕೆಮಿಸ್ಟ್ರಿ
• ಅರ್ಥಶಾಸ್ತ್ರದಲ್ಲಿಸ್ನಾತಕೋತ್ತರ ಪದವಿ/ಎಮ್.ಎ. ಎಕನಾಮಿಕ್ಸ್
• ಭೌತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎಸ್ಸಿ.ಫಿಸಿಕ್ಸ್
• ಗಣಕ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎಸ್ಸಿ.ಕಂಪ್ಯುಟರ್ ಸೈನ್ಸ್
• ಜೀವರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎಸ್ಸಿ.ಬಯೊಕೆಮಿಸ್ಟ್ರಿ
• ಮನೋವಿಜ್ಞಾನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎಸ್ಸಿ.ಸೈಕಾಲಜಿ
• ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎಸ್ಸಿಮ್ಯಾಥಮ್ಯಾಟಿಕ್ಸ್
• ಸಮಾಜ ಕಾರ್ಯಸ್ನಾತಕೋತ್ತರ ಪದವಿ/ಎಮ್ ಎಸ್ ಡಬಲ್ಯೂ – ಮಾಸ್ಟರ್ ಆಫ್ ಸೋಶಿಯಲ್ ವರ್ಕ್
• ಆಂಗ್ಲ ಭಾಷೆ/ ಇಂಗ್ಲೀಷ್/ಎಮ್.ಎ. ಇಂಗ್ಲಿಷ್
• ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎ. ಸೋಶಿಯಾಲಜಿ
• ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಕಾಮ್.
• ಸಮಗ್ರ ಆಧ್ಯಾತ್ಮಿಕತೆ ಸ್ನಾತಕೋತ್ತರ ಪದವಿ /ಎಮ್.ಎ.ಹೋಲಿಸ್ಟಿಕ್ ಸ್ಪಿರಿಚ್ಯುಆಲಿಟಿ
• ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎ.ಮಾಸ್ ಕಮ್ಯೂನಿಕೇಶನ್ ಹಾಗೂ ಜರ್ನಲಿಸಮ್
—————————————————————————————————————–
ಬಿ ಬಿ ಎ
ವ್ಯವಹಾರ ಆಡಳಿತ ಶಾಸ್ತ್ರದ ವಿಭಾಗ
1969ರಲ್ಲಿ ವಾಣಿಜ್ಯ ವಿಭಾಗವನ್ನು ಆರಂಭಿಸಲಾಯಿತು ಹಾಗೂ ವ್ಯವಹಾರ ಆಡಳಿತ ಪಠ್ಯಕ್ರಮವನ್ನು ಪ್ರತ್ಯೇಕ ಪಠ್ಯ ವಿಷಯವಾಗಿ 2004ರಲ್ಲಿ ಪ್ರಾರಂಭಿಸಲಾಯಿತು. 2004 ರ ವರೆಗೂ ಈ ವಿಷಯವು ವಾಣಿಜ್ಯ ವಿಭಾಗದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. 2014 ರ ಜೂನ್ ತಿಂಗಳ 1ನೇ ತಾರೀಖಿನಿಂದ Management Department ಸ್ವತಂತ್ರ ವಿಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತದಲ್ಲಿ ಈ ವಿಭಾಗವು 3 ಸಿಬ್ಬಂದಿ ಸದಸ್ಯರನ್ನು ಮತ್ತು 140 ವಿದ್ಯಾರ್ಥಿಗಳನ್ನು ಹೊಂದಿರುತ್ತದೆ.
ತನ್ನ ಕ್ಷೇತ್ರದ ಉದಯೋನ್ಮುಖ ಪ್ರವೃತ್ತಿಗಳನ್ನು ತೀವ್ರವಾಗಿ ಅನುಸರಿಸುತ್ತಿದ್ದು, ತನ್ನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೊಸದಾಗಿ ನಿರೂಪಣೆಯಾಗುತ್ತಿರುವ ವಿಧಾನಗಳೊಂದಿಗೆ ಮತ್ತು ರೂಢಿಗಳೊಂದಿಗೆ ಸರಿಸಮಾನವಾಗಿ ಹೆಜ್ಜೆಹಾಕುವಂತೆ ಮಾಡುವುದರಲ್ಲಿ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಈ ನಿಟ್ಟಿನಲ್ಲಿ, 2011ರಲ್ಲಿ,ವಿಭಾಗವು ರಾಷ್ಟ್ರಮಟ್ಟದ ಒಂದು ವಿಚಾರಗೋಷ್ಟಿಯನ್ನು ಏರ್ಪಡಿಸಿದ್ದು, ಇದರಲ್ಲಿ “ಹಣದುಬ್ಬರ ನಿರ್ವಹಣೆ –ತಪ್ಪು ಅಭಿಪ್ರಾಯಗಳು” ಇದು ಚರ್ಚೆಯ ವಿಷಯ ವಸ್ತುವಾಗಿತ್ತು. ನಂತರ, 2012 ರಲ್ಲಿ ರಾಜ್ಯ ಮಟ್ಟದಲ್ಲಿ “ಆಪ್ಟಿಮಸ್ ಎಂಪ್ರೆಸ್ಸಾರಿಯೊ” ಎಂಬ ಹೆಸರಿನ  ಉತ್ಸವವನ್ನು ನಿಯೋಜಿಸಲಾಗಿತ್ತು.

ಈ ವಿಭಾಗದ ಸಾಧನೆಗಳು
“ಹಣಕಾಸಿನ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳು” – ಎಂಬ ವಿಷಯ ವಸ್ತುವನ್ನು ಕುರಿತು ಸಿ.ಎ.ನಂಬಿಯಾರ್ ಅವರಿಂದ ಭಾಷಣ. ವಾಣಿಜ್ಯ ಶಾಸ್ತ್ರದ ಸ್ನಾತಕ ಪದವಿಯ ಮೊದಲನೆ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
2016-17, ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಕೆಳಗಿನ ’ಕ್ಷೇತ್ರಾವರಣ ನೇಮಕಾತಿ / ಕ್ಯಾಂಪಸ್ ರೆಕ್ರ್ಯುಟ್ ಮೆಂಟ್ ನಲ್ಲಿ ಭಾಗವಹಿಸಿದ್ದರು:
1. ಕಾನ್ಸೆಂಟ್ರಿಕ್ಸ್
2. ಜಾರೊ ಎಜುಕೇಶನ್
3. ಸಿಸ್ ಇನ್ಫರ್ಮೇಶನ್ ಹೆಲ್ತ್ ಕೇರ್ ಇಂಡಿಯ ಪ್ರೈವೆಟ್ ಲಿಮಿಟೆಡ್.
2017 ರ ಫೆಬ್ರುವರಿ ತಿಂಗಳ 22ನೇ ದಿನಾಂಕದಂದು, ಗ್ಲೋಬಲ್ ಆಪರ್ಚುನಿಟೀಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯು ಹೊರದೇಶಗಳಲ್ಲಿ ಉನ್ನತ ಅಧ್ಯಯನಕ್ಕೆ ಹೋಗಲು ಇಚ್ಛಿಸುತ್ತಿದ್ದ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಮಾರ್ಗದರ್ಶನ ನೀಡುವ ಅಧಿವೇಶನವನ್ನು ನಡೆಸಿದ್ದರು.
ಥಾಂಪ್ಸನ್ ರಾಯ್ ಟರ್ಸ್ ಎಂಬ ಸಂಸ್ಥೆಯು ತಮ್ಮ “ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿ ಎಸ್ ಆರ್)” ಈ ಉಪಕ್ರಮದ ಅಂಗವಾಗಿ, ’ಜಿ ಟಿ ಟಿ ನ್ಯಾಸ್ ಕಾಮ್’ ಎಂಬ ಸಂಸ್ಥೆಯ ಸಹಭಾಗಿತ್ವದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಅವಕಾಶಗಳಿಗಾಗಿ ’ವಿತ್ತೀಯ ಮಾರುಕಟ್ಟೆಗಳು’, ಇದರ ಬಗ್ಗೆ 100ಗಂಟೆಗಳ ಅವಧಿಯ ತರಬೇತಿಯನ್ನು ಉಚಿತವಾಗಿ ನೀಡಿದರು.
2017ರ ಫೆಬ್ರುವರಿ ತಿಂಗಳಲ್ಲಿ, ನಮ್ಮ ವಿದ್ಯಾರ್ಥಿಗಳು ಎಸ್. ಎ. ಪಿ. ಕುರಿತುಗೊನೊಸ್ ಕನ್ಸಲ್ಟಿಂಗ್ ಪ್ರೈವೆಟ್ ಲಿಮಿಟೆಡ್ ನಡೆಸಿದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
———————————————————-
ಬಿ. ಕಾಮ್
ಸಂಕ್ಷಿಪ್ತ ಇತಿಹಾಸ
ವಾಣಿಜ್ಯ ವಿಭಾಗವು 1969ರಲ್ಲಿ ಸ್ಥಾಪನೆಗೊಂಡಿತು. ಈ ವಿಭಾಗದ ಕೆಲವು ಅಗ್ರಮಾನ್ಯರನ್ನು ಇಲ್ಲಿ ಹೆಸರಿಸಲು ಇಚ್ಛಿಸುತ್ತೇವೆ –ಪ್ರೊಫೆಸರ್.ಬಾಲಸುಬ್ರಮಣ್ಯಮ್(1969), ಪ್ರೊಫೆಸರ್. ಕೆ.ಜಿ.ರಾಮಕ್ರಿಷ್ಣ (1971), ಪ್ರೊಫೆಸರ್. ಬಿ.ಆರ್.ಹರಿಣಿ (1972), ಪ್ರೊಫೆಸರ್.ರಾಜಗೋಪಾಲ ಶಾಸ್ತ್ರಿ(1973), ಪ್ರೊಫೆಸರ್. ಟಿ.ಎ.ಸುಬ್ರಮಣ್ಯ ಶೆಟ್ಟಿ, ಮತ್ತು ಪ್ರೊಫೆಸರ್. ಏಬ್ರಹಮ್ ಸೋಮ್ ಪ್ರಕಾಶ್ ಹಾಗೂ ಇನ್ನೂ ಹಲವರು ವಿಭಾಗದ ಅಭಿವೃಧ್ಧಿಯಲ್ಲಿ ಬಹು ದೊಡ್ಡ ಪಾತ್ರ ವಹಿಸಿರುವರು.
ಖಿhe ಆeಠಿಣ. oಜಿ ಒಚಿಟಿಚಿgemeಟಿಣ 2004ರಲ್ಲಿ ಸ್ಥಾಪಿತವಾಯಿತು. ಈ ವಿಭಾಗದೊಂದಿಗೆ, ವಾಣಿಜ್ಯ ವಿಭಾಗವು ಪ್ರತಿ ವರ್ಷ ಬಹು ಸಂಖ್ಯೆಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಾ ಕಾಲೇಜಿನ ಅತ್ಯಂತ ದೊಡ್ಡ ವಿಭಾಗವಾಗಿ ಬೆಳೆದಿರುತ್ತದೆ. ಪ್ರಸ್ತುತದಲ್ಲಿ, ಇಲ್ಲಿ ಬಿ.ಕಾಮ್ಪಠ್ಯಕ್ರಮದ 3 ವಿಭಾಗಗಳು(ಸೆಕ್ಷನ್) ಹಾಗೂ ಬಿಬಿಎ, ಇದರ 1 ವಿಭಾಗ ಇರುತ್ತವೆ. ಇದರಲ್ಲಿ ಈಗ ಉತ್ಸಾಹಿ ಹಾಗೂ ಪ್ರೇರಕರಾದ 10 ಮಂದಿ ಪೂರ್ಣ ಸಮಯ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ..
ಸಾಧನೆಗಳು:
ಬಿ.ಕಾಮ್ ಮತ್ತು ಬಿಬಿಎವಿದ್ಯಾರ್ಥಿಗಳಿಗೆ, ತೆರಿಗೆ, ಬ್ಯಾಂಕಿಂಗ್, ಅಂತರ್ ರಾಷ್ಟ್ರೀಯ ವಾಣಿಜ್ಯೋದ್ಯಮಮತ್ತು ಇ-ಅommeಡಿಛಿe ಮತ್ತು ಬಿಬಿಎ ಪದವಿಗೆ ಹಣಕಾಸು ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ, ಮತ್ತು, ಮಾನವಸಂನ್ಮೂಲ ನಿರ್ವಹಣೆ,ಈ ಎಲ್ಲಾ ವಿಷಯಗಳನ್ನು ಐಚ್ಛಿಕ ಪಠ್ಯಕ್ರಮ ವಿಷಯಗಳಾಗಿ ನೀಡುತ್ತಿದೆ ಮಾನವ ಸಂಪನ್ಮೂಲ ನಿರ್ವಹಣೆ ಮಾರುಕಟ್ಟೆ ನಿರ್ವಹಣೆ, ಈ ವಿಷಯಗಳಲ್ಲಿ ಡಿಪ್ಲೊಮ ಪದವಿಯನ್ನು ಇತ್ತಿಚೆಗೆ ನೀಡಿದ್ದು, ಇನ್ನು ಮುಂದೆ ಮಾನವ ಸಂಪನ್ಮೂಲ ನಿರ್ವಹಣೆ, ವಿತ್ತೀಯ ಮಾರುಕಟ್ಟೆ, ಮತ್ತು, ಉದ್ಯಮಶೀಲತೆ ಅಭಿವೃಧ್ಧಿ, ಈ ವಿಷಯಗಳಲ್ಲಿ ಮುಕ್ತ ಡಿಪ್ಲೊಮ ಪದವಿಯನ್ನು ನೀಡಲು ವಿಭಾಗವು ಪ್ರಸ್ತಾಪಿಸಿರುತ್ತದೆ.
ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ವಿಭಾಗವು ಕಂಪೆನಿ ಕಾರ್ಯದರ್ಶಿ(ಅS) ಪಠ್ಯಕ್ರಮವನ್ನು ನೀಡುತ್ತದೆ. ಸಿ ಎಸ್ ಪಠ್ಯಕ್ರಮವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳ 2ನೇ ತಂಡ ಇದಾಗಿದೆ. ವಿಭಾಗವು ಚಾರ್ಟರ್ಡ್ ಅಕೌಂಟೆಂಟ್ (ಸಿ ಎ)ಪಠ್ಯಕ್ರಮವನ್ನು ಆಯ್ಕೆಮಾಡಿ ಕಲಿಯುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತದೆ. ಈಗಾಗಲೇ ಕೆಲವು ವಿದ್ಯಾರ್ಥಿಗಳು ಸಿ ಎ ಪಠ್ಯಕ್ರಮವನ್ನು ಆಯ್ಕೆ ಮಾಡಿ ಖಾಸಗಿಯಾಗಿ ಕಲಿಯುತ್ತಿದ್ದಾರೆ. ಎಸ್ ಎ ಪಿ SAPಪಠ್ಯಕ್ರಮಕ್ಕೆ ತರಬೇತಿ ಪಡೆದಿರುವ ಕೆಲವು ಶಿಕ್ಷಕರು ವಿಭಾಗದಲ್ಲಿದ್ದಾರೆ. ಈ ತರಗತಿಗಳನ್ನು ಕಾಲೇಜಿನ ಆವರಣದಲ್ಲೆ ನಡೆಸಲಾಗುತ್ತಿದೆ.

ನಿಯಮಿತವಾಗಿ Management ಮತ್ತು ವಾಣಿಜ್ಯೋದ್ಯಮ ಉತ್ಸವಗಳನ್ನು ನಡೆಸುವುದರ ಮೂಲಕ ತಮ್ಮ ವೃತ್ತಿಗೆ ಅವಶ್ಯವಿರುವ ಕೌಶಲಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗುತ್ತದೆ. ವಿದ್ಯಾರ್ಥಿಗಳು ವೃತ್ತಿಯ ಬಗ್ಗೆ ಮಾರ್ಗದರ್ಶನ ಪಡೆಯಲು ಅತಿಥಿ ಉಪನ್ಯಾಸಗಳನ್ನು ಕಾಲ ಕಾಲಕ್ಕೆ ಸಂಯೋಜಿಸಲಾಗುತ್ತದೆ.
ವಿಭಾಗದ ತರಗತಿಗಳಲ್ಲಿ ಪ್ರಕ್ಷೇಪಕಗಳನ್ನು / ಪ್ರೊಜೆಕ್ಟರ್ ಗಳನ್ನು ಅಳವಡಿಸಲಾಗಿದ್ದು ಅವುಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚು ಪ್ರಮಾಣದಲ್ಲಿ ಬಳಸುತ್ತಾರೆ. ವಾಣಿಜ್ಯೇತರ ವಿಷಯಗಳನ್ನು ಕಲೆತು ಮುಗಿಸಿ ವಾಣಿಜ್ಯ ಪಠ್ಯಕ್ರಮವನ್ನು ಕಲಿಯಲು ಇಚ್ಛಿಸುವಂತಹ ವಿದ್ಯಾರ್ಥಿಗಳಿಗೆ ವಿಭಾಗವು bridge course ನ್ನು ನಡೆಸುತ್ತದೆ. ಮಂದಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗಾಗಿ ವಿಶೇಷ ಪರಿಹಾರ ತರಗತಿಗಳನ್ನು ನಡೆಸುವುದರ ಮೂಲಕ ವಿಭಾಗವು ಅವರ ಕಲಿಕೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತದೆ. ಉದ್ಯೋಗ ಕೋಶದೊಂದಿಗೆ ಕೆಲಸ ಮಾಡುತ್ತಾ ವಿಭಾಗವು ಕ್ಷೇತ್ರಾವರಣ ನೇಮಕಾತಿ ಯ ಬಗ್ಗೆ ಆಸಕ್ತಿ ತೆಗೆದುಕೊಳ್ಳುತ್ತದೆ. ಹೀಗಾಗಿ, ಹಲವಾರು ವಿದ್ಯಾರ್ಥಿಗಳು ಈಗಾಗಲೇ ಪ್ರಖ್ಯಾತ ಸಂಸ್ಥೆಗಳಲ್ಲಿ ನೇಮಕಾತಿ ಪಡೆದಿದ್ದಾರೆ.
“ಹಣಕಾಸಿನ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳು” – ಎಂಬ ವಿಷಯ ವಸ್ತುವನ್ನು ಕುರಿತು ಸಿ.ಎ.ನಂಬಿಯಾರ್ ಅವರಿಂದ ಭಾಷಣ. ಮೊದಲನೆ ವರ್ಷದಿ.ಕಾಮ್ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
2016-17, ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಕೆಳಗಿನ ’ಕ್ಷೇತ್ರಾವರಣ ನೇಮಕಾತಿ / ಕ್ಯಾಂಪಸ್ ರೆಕ್ರ್ಯುಟ್ ಮೆಂಟ್ ನಲ್ಲಿ ಭಾಗವಹಿಸಿದ್ದರು:
1. ಕಾನ್ಸೆಂಟ್ರಿಕ್ಸ್
2. ಜಾರೊ ಎಜುಕೇಶನ್
3. ಸಿಸ್ ಇನ್ ಫರ್ಮೇಶನ್ ಹೆಲ್ತ್ ಕೇರ್ ಇಂಡಿಯ ಪ್ರೈವೆಟ್ ಲಿಮಿಟೆಡ್.
2017 ರ ಫೆಬ್ರುವರಿ ತಿಂಗಳ 22ನೇ ದಿನಾಂಕದಂದು, ಗ್ಲೋಬಲ್ ಆಪರ್ಚುನಿಟೀಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯು ಹೊರದೇಶಗಳಲ್ಲಿ ಉನ್ನತ ಅಧ್ಯಯನಕ್ಕೆ ಹೋಗಲು ಇಚ್ಛಿಸುತ್ತಿದ್ದ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಮಾರ್ಗದರ್ಶನ ನೀಡುವ ಅಧಿವೇಶನವನ್ನು ನಡೆಸಿದ್ದರು.
ಥಾಂಪ್ಸನ್ ರಾಯ್ ಟರ್ಸ್ ಎಂಬ ಸಂಸ್ಥೆಯು ತಮ್ಮ “ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿ ಎಸ್ ಆರ್)” ಈ ಉಪಕ್ರಮದ ಅಂಗವಾಗಿ, ’ಜಿ ಟಿ ಟಿ ನ್ಯಾಸ್ ಕಾಮ್’ ಎಂಬ ಸಂಸ್ಥೆಯ ಸಹಭಾಗಿತ್ವದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಅವಕಾಶಗಳಿಗಾಗಿ ’ವಿತ್ತೀಯ ಮಾರುಕಟ್ಟೆಗಳು’, ಇದರ ಬಗ್ಗೆ 100ಗಂಟೆಗಳ ಅವಧಿಯ ತರಬೇತಿಯನ್ನು ಉಚಿತವಾಗಿ ನೀಡಿದರು.
2017ರ ಫೆಬ್ರುವರಿ ತಿಂಗಳಲ್ಲಿ, ನಮ್ಮ ವಿದ್ಯಾರ್ಥಿಗಳು ಎಸ್. ಎ. ಪಿ. ಕುರಿತು ಗೊನೊಸ್ ಕನ್ಸಲ್ಟಿಂಗ್ ಪ್ರೈವೆಟ್ ಲಿಮಿಟೆಡ್ ನಡೆಸಿದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
———————————————————–
ಬಿ ಎಸ್ಸಿ.
ಅರ್ಹತೆ
ಕರ್ನಾಟಕ ರಾಜ್ಯದ ಪ್ರಿ-ಯುನಿವರ್ಸಿಟಿ ಕೋರ್ಸ್ ಅಥವಾ ಇದಕ್ಕೆ ಸರಿಸಮಾನವಾದಸೈನ್ಸ್ ಮೇಜರ್ ನಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿರುವ ಇತರ ಯಾವುದೇ ಕೋರ್ಸ್ ಗಳು.
ಭೌತಶಾಸ್ತ್ರ ದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ –ಭೌತಶಾಸ್ತ್ರ ವಿಭಾಗ
• ಪಿ ಸಿ ಎಮ್ – ಭೌತಶಾಸ್ತ್ರ(ಫಿಸಿಕ್ಸ್),ರಸಾಯನ ಶಾಸ್ತ್ರ(ಕೆಮಿಸ್ಟ್ರಿ),ಗಣಿತಶಾಸ್ತ್ರ(ಮ್ಯತೆಮ್ಯಾಟಿಕ್ಸ್)
• ಪಿ ಎಮ್ ಸಿ – ಭೌತಶಾಸ್ತ್ರ(ಫಿಸಿಕ್ಸ್), ಕಂಪ್ಯೂಟರ್ ಸೈನ್ಸ್, ಗಣಿತಶಾಸ್ತ್ರ(ಮ್ಯತೆಮ್ಯಾಟಿಕ್ಸ್)
• ಪಿ ಎಮ್ ಇ – ಭೌತಶಾಸ್ತ್ರ(ಫಿಸಿಕ್ಸ್), ಗಣಿತಶಾಸ್ತ್ರ(ಮ್ಯತೆಮ್ಯಾಟಿಕ್ಸ್), ಇಲೆಕ್ಟ್ರಾನಿಕ್ಸ್

ರಸಾಯನಶಾಸ್ತ್ರದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ– ರಸಾಯನ ಶಾಸ್ತ್ರ ವಿಭಾಗ
• ಪಿ ಸಿ ಎಮ್ – ಭೌತಶಾಸ್ತ್ರ(ಫಿಸಿಕ್ಸ್),ರಸಾಯನ ಶಾಸ್ತ್ರ(ಕೆಮಿಸ್ಟ್ರಿ),ಗಣಿತಶಾಸ್ತ್ರ(ಮ್ಯತೆಮ್ಯಾಟಿಕ್ಸ್)
• ಸಿ ಬಿ ಜ಼ೆಡ್ – ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ), ಪ್ರಾಣಿಶಾಸ್ತ್ರ(ಜ಼ುಆಲಜಿ)
• ಬಿಟಿ ಸಿ ಜ಼ೆಡ್ – ಬಯೊ-ಟೆಕ್ನಾಲಜಿ, ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಪ್ರಾಣಿಶಾಸ್ತ್ರ(ಜ಼ುಆಲಜಿ)
• ಬಿಟಿ ಸಿ ಬಿ – ಬಯೊ-ಟೆಕ್ನಾಲಜಿ, ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ),
• ಸಿ ಬಿ ಎಫ್ ಎನ್ – ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ), (ಆಹಾರ ಮತ್ತು ಪೋಷಣ ಶಾಸ್ತ್ರ (ಫುಡ್ ಅಂಡ್ ನ್ಯುಟ್ರಿಶನ್)

ಗಣಿತಶಾಸ್ತ್ರದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಗಣಿತಶಾಸ್ತ್ರ ವಿಭಾಗ
• ಪಿ ಸಿ ಎಮ್ – ಭೌತಶಾಸ್ತ್ರ(ಫಿಸಿಕ್ಸ್),ರಸಾಯನ ಶಾಸ್ತ್ರ(ಕೆಮಿಸ್ಟ್ರಿ),ಗಣಿತಶಾಸ್ತ್ರ(ಮ್ಯತೆಮ್ಯಾಟಿಕ್ಸ್)
• ಪಿ ಎಮ್ ಸಿ – ಭೌತ ಶಾಸ್ತ್ರ, ಗಣಿತ ಶಾಸ್ತ್ರ, ಗಣಕ ವಿಜ್ಞಾನ
• ಪಿ ಎಮ್ ಇ – ಭೌತಶಾಸ್ತ್ರ, ಗಣಿತಶಾಸ್ತ್ರ, ವಿಧ್ಯುನ್ಮಾನ ಶಾಸ್ತ್ರ(ಇಲೆಕ್ಟ್ರಾನಿಕ್ಸ್),
• ಸಿ ಎಮ್ ಇ – ಕಂಪ್ಯೂಟರ್ ಸೈನ್ಸ್, ಗಣಿತಶಾಸ್ತ್ರ,ವಿಧ್ಯುನ್ಮಾನ ಶಾಸ್ತ್ರ(ಇಲೆಕ್ಟ್ರಾನಿಕ್ಸ್)
• ಇ ಎಮ್ ಸಿ – ಅರ್ಥಶಾಸ್ತ್ರ(ಎಕನಾಮಿಕ್ಸ್), ಗಣಿತಶಾಸ್ತ್ರ, ಗಣಕ ವಿಜ್ಞಾನ

ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ –ಇಲೆಕ್ಟ್ರಾನಿಕ್ಸ್ ವಿಭಾಗ
• ಸಿ ಎಮ್ ಇ – ಗಣಕ ವಿಜ್ಞಾನ, ಗಣಿತಶಾಸ್ತ್ರ, ವಿಧ್ಯುನ್ಮಾನ ಶಾಸ್ತ್ರ
• ಸಿ ಎಮ್ ಇ – ಗಣಕ ವಿಜ್ಞಾನ,, ಗಣಿತಶಾಸ್ತ್ರ, ವಿಧ್ಯುನ್ಮಾನ ಶಾಸ್ತ್ರ

ಸಸ್ಯಶಾಸ್ತ್ರದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಸಸ್ಯಶಾಸ್ತ್ರ ವಿಭಾಗ
• ಸಿ ಬಿ ಜ಼ೆಡ್ – ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ), ಪ್ರಾಣಿಶಾಸ್ತ್ರ(ಜ಼ುಆಲಜಿ)
• ಬಿ ಬಿ ಎಮ್ ಬಿ – ಸಸ್ಯಶಾಸ್ತ್ರ, ಜೀವರಸಾಯನ ಶಾಸ್ತ್ರ, ಸೂಕ್ಷ್ಮಜೀವ ಶಾಸ್ತ್ರ
• ಬಿಟಿ ಸಿ ಬಿ – ಬಯೊಟೆಕ್ನಾಲಜಿ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ;
• ಸಿ ಬಿ ಎಫ್ ಎನ್ – ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ), ಆಹಾರ ಮತ್ತು ಪೋಷಣ ಶಾಸ್ತ್ರ

ಗಣಕ ವಿಜ್ಞಾನದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಗಣಕ ವಿಜ್ಞಾನವಿಭಾಗ
• ಪಿ ಎಮ್ ಸಿ –ಗಣಕ ವಿಜ್ಞಾನ, ಭೌತಶಾಸ್ತ್ರ, ಗಣಿತಶಾಸ್ತ್ರ,
• ಸಿ ಎಮ್ ಇ – ಗಣಕ ವಿಜ್ಞಾನ, ಗಣಿತಶಾಸ್ತ್ರ, ಇಲೆಕ್ಟ್ರಾನಿಕ್ಸ್,
• ಇ ಎಮ್ ಸಿ -ಗಣಕ ವಿಜ್ಞಾನ, ಎಕನಾಮಿಕ್ಸ್, ಗಣಿತ ಶಾಸ್ತ್ರ

ಪ್ರಾಣಿಶಾಸ್ತ್ರದಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ –ಪ್ರಾಣಿಶಾಸ್ತ್ರ ವಿಭಾಗ
• ಸಿ ಬಿ ಜ಼ೆಡ್ – ಪ್ರಾಣಿಶಾಸ್ತ್ರ(ಜ಼ುಆಲಜಿ),ರಸಾಯನ ಶಾಸ್ತ್ರ(ಕೆಮಿಸ್ಟ್ರಿ), ಸಸ್ಯ ಶಾಸ್ತ್ರ(ಬಾಟನಿ),
• ಬಿಟಿ ಸಿ ಜ಼ೆಡ್ – ಪ್ರಾಣಿಶಾಸ್ತ್ರ(ಜ಼ುಆಲಜಿ), ಬಯೊಟೆಕ್ನಾಲಜಿ,ರಸಾಯನಶಾಸ್ತ್ರ(ಕೆಮಿಸ್ಟ್ರಿ);
• ಬಿಬಿಎಮ್ ಬಿ – ಸೂಕ್ಷ್ಮಜೀವ ಶಾಸ್ತ್ರ, ಸಸ್ಯ ಶಾಸ್ತ್ರ, ಜೀವ ರಸಾಯನ ಶಾಸ್ತ್ರ
• ಬಟಿಬಿಎಮ್ ಬಿ – ಸೂಕ್ಷ್ಮಜೀವ ಶಾಸ್ತ್ರ, ಬಯೊ-ಟೆಕ್ನಾಲಜಿ,ಜೀವರಸಾಯನ ಶಾಸ್ತ್ರ
ಬಯೊಕೆಮಿಸ್ಟ್ರಿ ಯಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ –ಬಯೊಕೆಮಿಸ್ಟ್ರಿ ವಿಭಾಗ
• ಇಟಿ ಬಿ ಎಮ್ ಬಿ –ಜೀವರಸಾಯನ ಶಾಸ್ತ್ರ, ಬಯೊಟೆಕ್ನಾಲಜಿ,ಸೂಕ್ಷ್ಮಜೀವ ಶಾಸ್ತ್ರ,

ಬಯೊಟೆಕ್ನಾಲಜಿ ಯಲ್ಲಿಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಬಯೊಟೆಕ್ನಾಲಜಿ ವಿಭಾಗ
• ಬಿಟಿ ಸಿ ಜ಼ೆಡ್ – ಬಯೊಟೆಕ್ನಾಲಜಿ,ರಸಾಯನ ಶಾಸ್ತ್ರ, ಪ್ರಾಣಿಶಾಸ್ತ್ರ
• ಬಿಟಿ ಸಿ ಬಿ – ಬಯೊಟೆಕ್ನಾಲಜಿ,ರಸಾಯನ ಶಾಸ್ತ್ರ,ಸಸ್ಯಶಾಸ್ತ್ರ
• ಬಿಟಿ ಬಿ ಎಮ್ ಬಿ – ಬಯೊಟೆಕ್ನಾಲಜಿ, ರಸಾಯನ ಶಾಸ್ತ್ರ,ಸೂಕ್ಷ್ಮ ಜೀವಶಾಸ್ತ್ರ
ಆಹಾರ ಮತ್ತು ಪೋಷಣಶಾಸ್ತ್ರ ವಿಷಯಲ್ಲಿ ಲಭ್ಯವಿರುವ ಪಠ್ಯ ವಿಷಯ ಸಂಯೋಗಗಳ(ಕಾಂಬಿನೇಶನ್) ಪಟ್ಟಿ –ಆಹಾರ ಮತ್ತು ಪೋಷಣಶಾಸ್ತ್ರ ವಿಭಾಗ
• ಸಿ ಬಿ ಎಫ್ ಎನ್ – ಆಹಾರ ಮತ್ತು ಪೋಷಣಶಾಸ್ತ್ರ, ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ
———————————————————–
ಬಿಸಿಎ
ಅರ್ಹತೆ

ಕರ್ನಾಟಕ ರಾಜ್ಯದ ಪ್ರಿ-ಯುನಿವರ್ಸಿಟಿ ಕೋರ್ಸ್ ಅಥವಾ ಇದಕ್ಕೆ ಸರಿಸಮಾನವಾದ ಅರ್ಹತೆಯನ್ನು ಗಣಿತ/ಗಣಕ ವಿಜ್ಞಾನ/Business Mathematics / Accountancy ವಿಷಯಗಳಲ್ಲಿ, ಅಥವಾ ಎಸ್ ಎಸ್ ಎಲ್ ಸಿ /10ನೇ ತರಗತಿಯComputer Science Engineering /Information Science Engineering  ಈ ವಿಷಯಗಳಲ್ಲಿ ತೆರ್ಗಡೆಯಾಗಿ ಅರ್ಹತೆಯನ್ನು ಹೊಂದಿರುವ, ಅಥವಾ ಇದಕ್ಕೆ ಸರಿಸಮಾನವಾದ ಇನ್ಯಾವುದೇ ವಿಷಯಗಳಲ್ಲಿ ಅರ್ಹತೆ ಹೊಂದಿರತಕ್ಕದ್ದು.
ಬಿಸಿಎ Bachelor of Computer ApplicationsChoice Based Credit System(6 ಸೆಮಿಸ್ಟರ್ ಗಳುಳ್ಳ) ಸ್ವಂತ ವೆಚ್ಚದಲ್ಲಿ ಕಲಿಯಬೇಕಾದ ಪಠ್ಯ ಕ್ರಮ
ಸಂಕ್ಷಿಪ್ತ ಇತಿಹಾಸ:
ಗಣಕಯಂತ್ರ ವಿಜ್ಞಾನವಿಭಾಗವು ಕಂಪ್ಯೂಟರ್ ಪರಿಣಿತರಾದ,ಘನವಂತ ಧರ್ಮಗುರು.. ಫಾದರ್. ಲೆಸ್ಲಿ ಮೊರಾಸ್ ಅವರ ಪ್ರೇರೇಪಣೆಯನಿಮಿತ್ತ 1992ರಲ್ಲಿ, ಅವರು ಪ್ರಾಂಶುಪಾಲರಾಗಿ ನೇಮಕಾತಿ ಪಡೆಯುವ ಮುನ್ನ 1990ರಲ್ಲಿ ಸ್ಥಾಪಿತಗೊಂಡಿತು. ಅವರು ಮೊದಲು ಕಛೇರಿಯ ಎಲ್ಲಾ ಕಾರ್ಯಕಲಾಪಗಳನ್ನು ದಾಖಲೆಗಳನ್ನು ಗಣಕೀಕರಿಸಿ, ನಂತರ ಗಣಕಯಂತ್ರ ವಿಜ್ಞಾನ ಪಠ್ಯಕ್ರಮಗಳನ್ನು 1993ರಲ್ಲಿ ಕಾಲೇಜಿನಲ್ಲಿ ಸ್ನಾತಕ ವಿಜ್ಞಾನ (ಬಿ.ಎಸ್ಸಿ) ಪದವಿ (CME, PMC) ಗಣಕಯಂತ್ರ ವಿಜ್ಞಾನ ಮತ್ತು ಬಿ.ಎ. (ಎಸ್ ಒ ಸಿ ಪಿ) ಇವುಗಳೊಂದಿಗೆ ಪ್ರಾರಂಭಸಿದರು. ಆದರೆ, 2009ರಲ್ಲಿ ಗಣಕಯಂತ್ರ ವಿಜ್ಞಾನವು ಸ್ವತಃ ಒಂದು ಪ್ರಮುಖ ಪಠ್ಯಕ್ರಮ ವಿಷಯವಾಗಿ ಮಾರ್ಪಟ್ಟಿತು. ಈ ವಿಷಯವನ್ನು ಆಯ್ಕೆ ಮಾಡಿಪ್ರವೇಶಕೋರಿದ 23 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ವಿದೇಶೀಯರಾಗಿದ್ದರು.ಕಡ್ಡಾಯವಾಗಿ ಕಂಪ್ಯೂಟರ್ ನ್ನು / ಗಣಕಯಂತ್ರವನ್ನು ಕಲಿಯಲು ಮೊದಲನೆ ಸೆಮಿಸ್ಟರ್ ನ ಸಮಗ್ರ ವಿದ್ಯಾರ್ಥಿವೃಂದಕ್ಕೆ ಕಲಿಸುವ ಭಾಗ್ಯ ಈ ವಿಭಾಗದ್ದಾಗಿದೆ. ’ಲೈನಕ್ಸ್’ ಮತ್ತು ’ನೊವೆಲ್ ನೆಟ್ ವೇರ್’ ಸೌಲಭ್ಯದೊಂದಿಗೆ 40 ವ್ಯವಸ್ಥೆಗಳನ್ನು / ಸಿಸ್ಟಮ್ ಗಳನ್ನು ಮೊದಮೊದಲಿಗೆ ವಿಭಾಗಕ್ಕೆ ಒದಗಿಸಲಾಗಿತ್ತು. ಅದರ ನಂತರ, ವ್ಯವಸ್ಥೆಗಳು/ ಸಿಸ್ಟಮ್ ಗಳನ್ನು ’ಮೈಕ್ರೊಸಾಫ್ಟ್ ವಿಂಡೋಸ್’ ಗೆ ಸ್ಥಾನಾಂತರಸಿ, ಬಿಎ, ಬಿ.ಏಸ್ ಸಿ, ಬಿ.ಕಾಂ, ಬಿ ಬ ಎಮ್, ಬಿ ಎಸ್ ಡಬಲ್ಯು ಈ ಪದವಿಗಳ 2ನೇ ವರ್ಷದಲ್ಲಿ ಕಂಪ್ಯೂಟರ್ ಅಪ್ಲಿಕಾಶನ್ಎಂಬ ಪಠ್ಯಕ್ರಮವಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಇದು ಸಂಪೂರ್ಣವಾಗಿ ಅಪ್ಲಿಕಾಶನ್ ಆಧಾರಿತ, ಕಡ್ಡಾಯವಾದ ಪೂರಕ/ಉಪಾಂಗ ವಿಷಯ ವಾಗಿತ್ತು. 2005ರಲ್ಲಿ ಕಂಪ್ಯೂಟರ್ ಲ್ಯಾಬ್ ನ್ನು/ ಪ್ರಯೋಗಾಲಯವನ್ನು ಇನ್ನೂ ದೊಡ್ಡದಾಗಿರುವ ಸ್ಥಳಕ್ಕೆ 48 ವ್ಯವಸ್ಥೆ / ಸಿಸ್ಟಮ್ ಗಳೊಂದಿಗೆ ವರ್ಗಾಯಿಸಲಾಯಿತು. 2007ರಲ್ಲಿ 5 ಲ್ಯಾಬ್ / ಪ್ರಯೋಗಾಲಯಗಳನ್ನು, 1500 ಲುಮೆನ್ಸ್ ಉಳ್ಳ ಎಲ್ ಸಿ ಡಿ ಪ್ರೊಜೆಕ್ಟರ್ ಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಪ್ರಸ್ತುತದಲ್ಲಿ, ಕಲಿಕಾರ್ಥಿಗಳ ಅವಶ್ಯಕತೆಗಳನ್ನು ಪೂರೈಸಲು 120 ವ್ಯವಸ್ಥೆ / ಸಿಸ್ಟಮ್ ಗಳಿವೆ. 2010ರಲ್ಲಿ,ವಿಭಾಗವು ಗಣಕ ಸಂಕೀರ್ಣ ವ್ಯವಸ್ಥೆ / ಕಂಪ್ಯೂಟರ್ ನೆಟ್ ವರ್ಕಿಂಗ್ಈ ವಿಷಯದಲ್ಲಿ 3 ವರ್ಷ ಕಾಲದ ಉನ್ನತ ಮಟ್ಟ ಪಠ್ಯಕ್ರಮವನ್ನು ಹಾಗೂ 2012ರಲ್ಲಿ ಜಾಲತಾಣ ವಿನ್ಯಾಸ / ವೆಬ್ ಡಿಸೈನಿಂಗ್ ಈ ವಿಷಯದಲ್ಲಿ 1 ವರ್ಷ ಕಾಲದ ಡಿಪ್ಲೊಮ ಪದವಿಯನ್ನು ಪರಿಚಯಿಸಿರುತ್ತದೆ. ಪ್ರಸ್ತುತವಾಗಿ, ಗಣಕಯಂತ್ರ ವಿಜ್ಞಾನ ವು 2ನೇ ಮತ್ತು 3ನೇ ವರ್ಷದ ವಿದ್ಯಾರ್ಥಿಗಳಿಗೆ ಮುಕ್ತ ಐಚ್ಛಿಕ ಪಠ್ಯಕ್ರಮಗಳನ್ನಾಗಿ ನೀಡುತ್ತದೆ. ವಿಭಾಗದ ವರ್ಷಾನುಚರಿತೆಯಲ್ಲಿ, ಶೀಮತಿ. ಆಶಾ.ವಿ. ಇವರಂತಹ ಪ್ರತಿಭಾನ್ವಿತ ಶಿಕ್ಷಕರ ತಂಡದ ನೆರವಿನಿಂದ ವಿಭಾಗವನ್ನು ಸುಸ್ಥಿರಗೊಳಿಸಿದ ಫಾದರ್. ಲೆಸ್ಲಿ ಮೊರಾಸ್ ಅವರು ನೆನಪಿನ ಹಾದಿಯಲ್ಲಿ ಏಕೈಕಪ್ರವರ್ತಕರಾಗಿ ನಡೆದಿದ್ದಾರೆ.
—————————————————————————–
ಬಿ ಎ
ಅರ್ಹತೆ
ಕರ್ನಾಟಕ ರಾಜ್ಯದ ಪ್ರಿ-ಯುನಿವರ್ಸಿಟಿ ಕೋರ್ಸ್ ಅಥವಾ ಇದಕ್ಕೆ ಸರಿಸಮಾನವಾದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿರುವ ಇತರ ಯಾವುದೇ Science major ಕೋರ್ಸ್ ಗಳು / ಪಠ್ಯಕ್ರಮಗಳು(ಪಿ ಸಿ ಎಮ್, ಪಿ ಸಿ ಎಮ್ ಸಿ, ಪಿ ಸ್ ಎಮ್ ಇ)
ಅರ್ಥಶಾಸ್ತ್ರ(ಎಕನಾಮಿಕ್ಸ್)ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ –ಅರ್ಥಶಾಸ್ತ್ರ(ಎಕನಾಮಿಕ್ಸ್) ವಿಭಾಗ.
ಇ ಎಸ್ ಪಿ
ಅರ್ಥಶಾಸ್ತ್ರ
ಸಮಾಜ ಶಾಸ್ತ್ರ ರಾಜಕೀಯ ವಿಜ್ಞಾನ (ಪೊಲಿಟಿಕಲ್ ಸೈನ್ಸ್)
ಇ ಹೆಚ್ ಪಿ ಅರ್ಥಶಾಸ್ತ್ರ ಇತಿಹಾಸ ರಾಜಕೀಯ ವಿಜ್ಞಾನ
ಇ ಹೆಚ್ ಸಿ ಅರ್ಥಶಾಸ್ತ್ರ ಇತಿಹಾಸ ಕ್ರಿಶ್ಚಿಯನ್ ದರ್ಮ
ಇ ಎಸ್ ಸಿ ಅರ್ಥಶಾಸ್ತ್ರ ಸಮಾಜ ಶಾಸ್ತ್ರ ಕ್ರಿಶ್ಚಿಯನ್ ದರ್ಮ
ಇ ಹೆಚ್ ಕೆ ಅರ್ಥಶಾಸ್ತ್ರ ಇತಿಹಾಸ ಐಚ್ಛಿಕ – ಕನ್ನಡ
ಇ ಎಸ್ ಕೆ ಅರ್ಥಶಾಸ್ತ್ರ ಸಮಾಜ ಶಾಸ್ತ್ರ ಐಚ್ಛಿಕ – ಕನ್ನಡ
ಇ ಎಸ್ ಜೆ ಅರ್ಥಶಾಸ್ತ್ರ ಸಮಾಜ ಶಾಸ್ತ್ರ ಪತ್ರಿಕೋದ್ಯಮ
ಇ ಎಸ್ ಪಿಎಸ್ವೈ ಅರ್ಥಶಾಸ್ತ್ರ ಸಮಾಜ ಶಾಸ್ತ್ರ ಮನೋವಿಜ್ಞಾನ
ಇ ಹೆಚ್ ಜೆ ಅರ್ಥಶಾಸ್ತ್ರ ಇತಿಹಾಸ ಪತ್ರಿಕೋದ್ಯಮ
ಇ ಹೆಚ್ ಪಿಎಸ್ವೈ ಅರ್ಥಶಾಸ್ತ್ರ ಇತಿಹಾಸ ಮನೋವಿಜ್ಞಾನ

ರಾಜಕೀಯ ವಿಜ್ಞಾನ, ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ – ರಾಜಕೀಯ ವಿಜ್ಞಾನ ವಿಭಾಗ
ಇ ಎಸ್ ಪಿ ರಾಜಕೀಯ ವಿಜ್ಞಾನ ಸಮಾಜ ಶಾಸ್ತ್ರ ಅರ್ಥಶಾಸ್ತ್ರ
ಇ ಹೆಚ್ ಪಿ ರಾಜಕೀಯ ವಿಜ್ಞಾನ ಇತಿಹಾಸ ಅರ್ಥಶಾಸ್ತ್ರ
ಇ ಎನ್ ಎಸ್ ಪಿ ರಾಜಕೀಯ ವಿಜ್ಞಾನ ಸಮಾಜ ಶಾಸ್ತ್ರ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ
ಇ ಎನ್ ಹೆಚ್ ಪಿ ರಾಜಕೀಯ ವಿಜ್ಞಾನ ಇತಿಹಾಸ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ
ಸಿ ಆರ್ ಎಸ್ ಪಿ ರಾಜಕೀಯ ವಿಜ್ಞಾನ ಸಮಾಜ ಶಾಸ್ತ್ರ ಅಪರಾಧ ಶಾಸ್ತ್ರ /ಕ್ರಿಮಿನಾಲಜಿ
ಇ ಎನ್ ಪಿ ಹೆಚ್ ಪಿ ರಾಜಕೀಯ ವಿಜ್ಞಾನ ಇತಿಹಾಸ ತತ್ವಶಾಸ್ತ್ರ

ಸಮಾಜ ಶಾಸ್ತ್ರ, ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ-ಸಮಾಜ ಶಾಸ್ತ್ರ ವಿಭಾಗ
ಇ ಎಸ್ ಪಿ ಸಮಾಜ ಶಾಸ್ತ್ರ ಅರ್ಥಶಾಸ್ತ್ರ ರಾಜಕೀಯ ಶಾಸ್ತ್ರ
ಇ ಎಸ್ ಸಿ ಸಮಾಜ ಶಾಸ್ತ್ರ ಅರ್ಥಶಾಸ್ತ್ರ ಕ್ರಿಶ್ಚಿಯನ್ ಧರ್ಮ
ಇ ಎಸ್ ಕೆ ಸಮಾಜ ಶಾಸ್ತ್ರ ಅರ್ಥಶಾಸ್ತ್ರ ಐಚ್ಛಿಕ ಕನ್ನಡ
ಇಎನ್ ಎಸ್ ಪಿ ಸಮಾಜ ಶಾಸ್ತ್ರ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ರಾಜಕೀಯ ಶಾಸ್ತ್ರ
ಇಎನ್ ಎಸ್ ಸಿ ಸಮಾಜ ಶಾಸ್ತ್ರ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಕ್ರಿಶ್ಚಿಯನ್ ಧರ್ಮ
ಇಎನ್ ಎಸ್ ಜೆ ಸಮಾಜ ಶಾಸ್ತ್ರ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಪತ್ರಿಕೋದ್ಯಮ
ಇಎನ್ ಎಸ್ ಕೆ ಸಮಾಜ ಶಾಸ್ತ್ರ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಐಚ್ಛಿಕ ಕನ್ನಡ
ಇಎನ್ ಎಸ್ ಪಿಎಸ್ ವೈ ಸಮಾಜ ಶಾಸ್ತ್ರ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಮನೋವಿಜ್ಞಾನ
ಇ ಎಸ್ ಜೆ ಸಮಾಜ ಶಾಸ್ತ್ರ ಅರ್ಥಶಾಸ್ತ್ರ ಪತ್ರಿಕೋದ್ಯಮ
ಇ ಎಸ್ ಪಿಎಸ್ ವೈ ಸಮಾಜ ಶಾಸ್ತ್ರ ಅರ್ಥಶಾಸ್ತ್ರ ಮನೋವಿಜ್ಞಾನ
ಸಿಆರ್ ಎಸ್ ಪಿಎಸ್ ವೈ ಸಮಾಜ ಶಾಸ್ತ್ರ ಅಪರಾಧ ಶಾಸ್ತ್ರ /ಕ್ರಿಮಿನಾಲಜಿ ಮನೋವಿಜ್ಞಾನ
ಸಿಆರ್ ಎಸ್ ಪಿ ಸಮಾಜ ಶಾಸ್ತ್ರ ಅಪರಾಧ ಶಾಸ್ತ್ರ /ಕ್ರಿಮಿನಾಲಜಿ ರಾಜಕೀಯ ಶಾಸ್ತ್ರ

ಕ್ರಿಶ್ಚಿಯನ್ ಧರ್ಮ, ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಕ್ರಿಶ್ಚಿಯನ್ ಧರ್ಮ ವಿಭಾಗ
ಇ ಹೆಚ್ ಸಿ ಕ್ರಿಶ್ಚಿಯನ್ ಧರ್ಮ ಇತಿಹಾಸ ಅರ್ಥಶಾಸ್ತ್ರ
ಇ ಎಸ್ ಸಿ ಕ್ರಿಶ್ಚಿಯನ್ ಧರ್ಮ ಸಮಾಜ ಶಾಸ್ತ್ರ ಅರ್ಥಶಾಸ್ತ್ರ
ಇಎನ್ ಹೆಚ್ ಸಿ ಕ್ರಿಶ್ಚಿಯನ್ ಧರ್ಮ ಇತಿಹಾಸ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ
ಇಎನ್ ಎಸ್ ಸಿ ಕ್ರಿಶ್ಚಿಯನ್ ಧರ್ಮ ಸಮಾಜ ಶಾಸ್ತ್ರ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ

ಇತಿಹಾಸ, ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಇತಿಹಾಸ ವಿಭಾಗ
ಇ ಹೆಚ್ ಪಿ ಇತಿಹಾಸ ಅರ್ಥಶಾಸ್ತ್ರ ರಾಜಕೀಯ ಶಾಸ್ತ್ರ
ಇ ಹೆಚ್ ಸಿ ಇತಿಹಾಸ ಅರ್ಥಶಾಸ್ತ್ರ ಕ್ರಿಶ್ಚಿಯನ್ ಧರ್ಮ
ಇ ಹೆಚ್ ಕೆ ಇತಿಹಾಸ ಅರ್ಥಶಾಸ್ತ್ರ ಐಚ್ಛಿಕ ಕನ್ನಡ
ಇಎನ್ ಹೆಚ್ ಪಿ ಇತಿಹಾಸ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ರಾಜಕೀಯ ಶಾಸ್ತ್ರ
ಇಎನ್ ಹೆಚ್ ಸಿ ಇತಿಹಾಸ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಕ್ರಿಶ್ಚಿಯನ್ ಧರ್ಮ
ಇಎನ್ ಹೆಚ್ ಜೆ ಇತಿಹಾಸ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಪತ್ರಿಕೋದ್ಯಮ
ಇಎನ್ ಹೆಚ್ ಪಿಎಸ್ ವೈ ಇತಿಹಾಸ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಮನೋವಿಜ್ಞಾನ
ಇ ಹೆಚ್ ಜೆ ಇತಿಹಾಸ ಅರ್ಥಶಾಸ್ತ್ರ ಪತ್ರಿಕೋದ್ಯಮ
ಇ ಹೆಚ್ ಪಿಎಸ್ ವೈ ಇತಿಹಾಸ ಅರ್ಥಶಾಸ್ತ್ರ ಮನೋವಿಜ್ಞಾನ
ಇಎನ್ ಹೆಚ್ ಕೆ ಇತಿಹಾಸ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಐಚ್ಛಿಕ ಕನ್ನಡ

ಕನ್ನಡ ಭಾಷೆ, ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಕನ್ನಡ ಭಾಷೆ
ವಿಭಾಗ
ಇ ಹೆಚ್ ಕೆ ಐಚ್ಛಿಕ ಕನ್ನಡ ಇತಿಹಾಸ ಅರ್ಥಶಾಸ್ತ್ರ
ಇ ಎಸ್ ಕೆ ಐಚ್ಛಿಕ ಕನ್ನಡ ಸಮಾಜ ಶಾಸ್ತ್ರ ಅರ್ಥಶಾಸ್ತ್ರ
ಇಎನ್ ಹೆಚ್ ಕೆ ಐಚ್ಛಿಕ ಕನ್ನಡ ಇತಿಹಾಸ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ
ಇಎನ್ ಎಸ್ ಕೆ ಐಚ್ಛಿಕ ಕನ್ನಡ ಸಮಾಜ ಶಾಸ್ತ್ರ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ
ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ,ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಇಂಗ್ಲಿಷ್/ಆಂಗ್ಲಭಾಷೆವಿಭಾಗ
ಇಎನ್ ಎಸ್ ಪಿ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಸಮಾಜ ಶಾಸ್ತ್ರ ರಾಜಕೀಯ ಶಾಸ್ತ್ರ
ಇಎನ್ ಹೆಚ್ ಪಿ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಇತಿಹಾಸ ರಾಜಕೀಯ ಶಾಸ್ತ್ರ
ಇಎನ್ ಹೆಚ್ ಸಿ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಇತಿಹಾಸ ಕ್ರಿಶ್ಚಿಯನ್ ಧರ್ಮ
ಇಎನ್ ಎಸ್ ಸಿ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಸಮಾಜ ಶಾಸ್ತ್ರ ಕ್ರಿಶ್ಚಿಯನ್ ಧರ್ಮ
ಇಎನ್ ಹೆಚ್ ಕೆ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಇತಿಹಾಸ ಐಚ್ಛಿಕ ಕನ್ನಡ
ಇಎನ್ ಎಸ್ ಜೆ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಸಮಾಜ ಶಾಸ್ತ್ರ ಪತ್ರಿಕೋದ್ಯಮ
ಇಎನ್ ಎಸ್ ಕೆ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಸಮಾಜ ಶಾಸ್ತ್ರ ಐಚ್ಛಿಕ ಕನ್ನಡ
ಇಎನ್ ಎಸ್ ಪಿಎಸ್ ವೈ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಸಮಾಜ ಶಾಸ್ತ್ರ ಮನೋವಿಜ್ಞಾನ
ಇಎನ್ ಹೆಚ್ ಜೆ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಇತಿಹಾಸ ಪತ್ರಿಕೋದ್ಯಮ
ಇಎನ್ ಹೆಚ್ ಪಿಎಸ್ ವೈ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಇತಿಹಾಸ ಮನೋವಿಜ್ಞಾನ
ಇಎನ್ ಎಫ್ ಜೆ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಕಾರ್ಯಕಾರಿ ಇಂಗ್ಲಿಷ್/ಆಂಗ್ಲಭಾಷೆ ಪತ್ರಿಕೋದ್ಯಮ
ಇಎನ್ ಎಫ್ ಪಿಎಸ್ ವೈ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಕಾರ್ಯಕಾರಿ ಇಂಗ್ಲಿಷ್/ಆಂಗ್ಲಭಾಷೆ ಮನೋವಿಜ್ಞಾನ
ಇಎನ್ ಪಿ ಹೆಚ್ ಪಿ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ತತ್ವ ಶಾಸ್ತ್ರ ರಾಜಕೀಯ ಶಾಸ್ತ್ರ

ಪತ್ರಿಕೋದ್ಯಮ, ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಪತ್ರಿಕೋದ್ಯಮ ವಿಭಾಗ
ಇಎನ್ ಹೆಚ್ ಜೆ ಪತ್ರಿಕೋದ್ಯಮ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಇತಿಹಾಸ
ಇಎನ್ ಎಸ್ ಜೆ ಪತ್ರಿಕೋದ್ಯಮ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಸಮಾಜ ಶಾಸ್ತ್ರ
ಇಎನ್ ಎಫ್ ಜೆ ಪತ್ರಿಕೋದ್ಯಮ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಕಾರ್ಯಕಾರಿ ಇಂಗ್ಲಿಷ್/ಆಂಗ್ಲಭಾಷೆ
ಇ ಎಸ್ ಜೆ ಪತ್ರಿಕೋದ್ಯಮ ಸಮಾಜ ಶಾಸ್ತ್ರ ಅರ್ಥಶಾಸ್ತ್ರ
ಇ ಹೆಚ್ ಜೆ ಪತ್ರಿಕೋದ್ಯಮ ಇತಿಹಾಸ ಅರ್ಥಶಾಸ್ತ್ರ

ಮನೋವಿಜ್ಞಾನ, ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಮನೋವಿಜ್ಞಾನ ವಿಭಾಗ
ಇಎನ್ ಎಸ್ ಪಿಎಸ್ ವೈ ಮನೋವಿಜ್ಞಾನ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಸಮಾಜ ಶಾಸ್ತ್ರ
ಇಎನ್ ಹೆಚ್ ಪಿಎಸ್ ವೈ ಮನೋವಿಜ್ಞಾನ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಇತಿಹಾಸ
ಇಎನ್ ಎಫ್ ಪಿಎಸ್ ವೈ ಮನೋವಿಜ್ಞಾನ ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ಕಾರ್ಯಕಾರಿ ಇಂಗ್ಲಿಷ್/ಆಂಗ್ಲಭಾಷೆ
ಇ ಎಸ್ ಪಿಎಸ್ ವೈ ಮನೋವಿಜ್ಞಾನ ಅರ್ಥಶಾಸ್ತ್ರ ಸಮಾಜ ಶಾಸ್ತ್ರ
ಇ ಹೆಚ್ ಪಿಎಸ್ ವೈ ಮನೋವಿಜ್ಞಾನ ಅರ್ಥಶಾಸ್ತ್ರ ಇತಿಹಾಸ
ಸಿಆರ್ ಎಸ್ ಪಿಎಸ್ ವೈ ಮನೋವಿಜ್ಞಾನ ಅಪರಾಧ ಶಾಸ್ತ್ರ ಸಮಾಜ ಶಾಸ್ತ್ರ

ಅಪರಾಧ ಶಾಸ್ತ್ರ, ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ – ಅಪರಾಧ ಶಾಸ್ತ್ರ ವಿಭಾಗ
ಸಿಆರ್ ಎಸ್ ಪಿಎಸ್ ವೈ ಅಪರಾಧ ಶಾಸ್ತ್ರ ಸಮಾಜ ಶಾಸ್ತ್ರ ಮನೋವಿಜ್ಞಾನ
ಸಿಆರ್ ಎಸ್ ಪಿ ಅಪರಾಧ ಶಾಸ್ತ್ರ ಸಮಾಜ ಶಾಸ್ತ್ರ ರಾಜಕೀಯ ಶಾಸ್ತ್ರ

ತತ್ವಶಾಸ್ತ್ರ, ಈ ವಿಷಯದಲ್ಲಿ ಲಭ್ಯವಿರುವಪಠ್ಯವಿಷಯಸಂಯೋಗಗಳ(ಕಾಂಬಿನೇಶನ್) ಪಟ್ಟಿ – ತತ್ವಶಾಸ್ತ್ರ ವಿಭಾಗ
ಇಎನ್ ಪಿಹೆಚ್ ಪಿ ತತ್ವಶಾಸ್ತ್ರ, ಐಚ್ಛಿಕ ಇಂಗ್ಲಿಷ್/ಆಂಗ್ಲಭಾಷೆ ರಾಜಕೀಯ ಶಾಸ್ತ್ರ
ಇ ಪಿಹೆಚ್ ಪಿ ತತ್ವಶಾಸ್ತ್ರ, ಅರ್ಥಶಾಸ್ತ್ರ ರಾಜಕೀಯ ಶಾಸ್ತ್ರ

ಕಾರ್ಯಕ್ರಮಗಳು
ರೂಸ ಯೋಜನೆಗಳ ಅಂಕೀಯ/ಡಿಜಿಟಲ್/ಮೊದಲಿಡುವಿಕೆ/ ಉದ್ಘಾಟನೆ
ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ರೂಸ ಯೋಜನೆಯನ್ನು ಶ್ರೀನಗರದ ಶೇರ್-ಎ ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಿಂದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೊ ಸಮ್ಮೇಳನದ ಮೂಲಕ ಡಿಜಿಟಲ್ ಮಾದ್ಯಮದಲ್ಲಿ ಉದ್ಘಾಟಿಸಿದರು. ಸೈಂಟ್ ಫಿಲೋಮಿನಾಸ್ ಕಾಲೇಜ್ ನ ಸಮ್ಮೇಳನ ಸಭಾಂಗಣದಲ್ಲಿ ಸಾಂಕೇತಿಕವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ರೂಸ ಯೋಜನೆಯ ಉದ್ಘಾಟನೆಯ ಗುರುತಾಗಿ ಫಲಕವನ್ನು ಅನಾವರಣ ಮಾಡಿದರು
ರೂಸ ಯೋಜನೆಯ ಅಡಿಯಲ್ಲಿ ಸೈಂಟ್ ಫಿಲೋಮಿನಾಸ್ ಕಾಲೇಜ್ “ಘಟಕ 8” ಇದಕ್ಕೆ ಆಯ್ಕೆಯಾಗಿ 5 ಕೋಟಿ ರುಪಾಯಿಗಳನ್ನು ಸ್ವೀಕರಿಸಲಿದೆ ಇದಕ್ಕೆ ತಕ್ಕ ತಯಾರಿಯನ್ನು ಕಾಲೇಜು ಸಿದ್ಧಪಡಿಸಿಕೊಂಡಿದೆ
ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ರೂತ್ ಶಾಂತಕುಮಾರಿ, ಅವರು ರೂಸ ಯೋಜನೆಯ ಕುರಿತು ಮತ್ತು ಅದರ ಕಾರ್ಯ ಯೋಜನೆಯನ್ನು ಕಾರ್ಯಗತಗೊಳಿಸುವುದರ ಬಗ್ಗೆ ಸವಿಸ್ತಾರ ವಿವರಣೆಯನ್ನು ನೀಡಿದರು.
ಈ ಮೇಲೆ ಹೇಳಿದ ಸಮಾರಂಭವನ್ನು ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ಮಧ್ಯಾಹ್ನ 2ರಿಂದ 5ಗಂಟೆಯ ವರೆಗೆ ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಿಬ್ಬಂದಿಯವರೂ ಸೇರಿದಂತೆ 130 ಮಂದಿ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಲಹಾಸಮಿತಿಯಿಂದ ಪಡೆದ ಮಾರ್ಗಸೂಚಕಗಳ ಪ್ರಕಾರ ಈ ಮುಂದೆ ವಿವರಿಸಿರುವ ವ್ಯವಸ್ಥೆಗಳನ್ನು ಮಾಡಲಾಗಿತ್ತು-ಡಿಜಿಟಲ್ ಬಿಡುಗಡೆಯ ವಿಡಿಯೊ ಸಮ್ಮೇಳನಕ್ಕಾಗಿ ಉಪಕರಣಗಳ ಸಜ್ಜೀಕರಣ, ಬ್ಯಾನರ್ ಗಳ ಪ್ರದರ್ಶನ, ನಿಗದಿಪಡಿಸಿದ್ದ ಅಳತೆಯುಳ್ಳ ಫಲಕ, ಅತಿಥಿ ಗಣ್ಯರಿಗೆ ಮತ್ತು ಸಭಾಸದರಿಗೆ ಆಸನ ವ್ಯವಸ್ಥೆ, ಈ ಮಂತಾದವು.
ಡಾ. ಪ್ರಮಿಳಾ, ವಿಶೇಷ ಅಧಿಕಾರಿ, ರೂಸ, ಡಿಪಾರ್ಟ್ಮೆಂಟ್ ಆಫ್ ಕಾಲೇಜಿಯೇಟ್ ಎಜುಕೇಶನ್, ಮೈಸೂರು; ರೆವರೆಂಡ್.ಫಾದರ್. ಬರ್ನಾರ್ಡ್ ಪ್ರಕಾಶ್ ಬಾರ್ನಿಸ್ ರೆಕ್ಟರ್/ಮ್ಯಾನೇಜರ್, ಸೈಂಟ್ ಫಿಲೋಮಿನಾಸ್ ಕಾಲೇಜ್
ರೆವರೆಂಡ್.ಫಾದರ್.ಮರಿಯಾಕ್ಸೇವಿಯರ್, ವೈಸ್-ರೆಕ್ಟರ್; ಡಾ.ರವಿಜೆ.ಡಿ.ಸಲ್ಡಾನ್ಹ ಹಾಗೂ ಹಿರಿಯ ಸಿಬ್ಬಂದಿ ವರ್ಗದವರು
ಉಪಸ್ಥಿತರಿದ್ದರು
ಶ್ರೀ ರೊನಾಲ್ಡ್ ಪ್ರಕಾಶ್ ಕುಟಿನ್ಹಾ ಅವರ ವಂದನಾರ್ಪಣೆಯೊಂದಿಗೆ ಸಮಾರಂಭವು ಮುಕ್ತಾಯಗೊಂಡಿತು.
—————————————————————-
ಸಂಯುಕ್ತರಾಷ್ಟ್ರಸಂಸ್ಥೆಯ ಸುಸ್ಥಿರ ಸಮರ್ಥನೀಯ ಅಭಿವೃಧ್ಧಿ ಗುರಿಗಳನ್ನು ಮುಂತರಲು ’ಜ್ಞಾನಪಾಲುಗಾರಿಕೆಗೆ” ಅಂತರ್ರಾಷ್ಟ್ರೀಯ ಸಮ್ಮೇಳನ.
ಸಂಯುಕ್ತರಾಷ್ಟ್ರಸಂಸ್ಥೆಯ ಸಮರ್ಥನೀಯಅಭಿವೃಧ್ಧಿಗುರಿ (ಎಸ್ಡಿಜಿ) ಗಳನ್ನುಮುಂತರಲುಆಯೋಜಿಸಲಾಗಿದ್ದ 2 ದಿನಗಳ ’ಜ್ಞಾನಪಾಲುಗಾರಿಕೆಗಳ’ಅಂತರ್ರಾಷ್ಟ್ರೀಯಸಮ್ಮೇಳನದಲ್ಲಿ“ಸಾಧುವೆನ್ನಬಹುದಾದ ಜೀವನಶೈಲಿಗಳತ್ತಮತ್ತುಅಂತರ್ವಿಷ್ಟಸಮಾಜದತ್ತ’ – ಈವಿಷಯವಸ್ತುವನ್ನುಕುರಿತುಪ್ರಸ್ತುತದಲ್ಲಿ ಜನಸಾಮಾನ್ಯರಲ್ಲಿ ಇರುವ ಕಾಳಜಿಯನ್ನು ಎತ್ತಿ ಹಿಡಿಯಲಾಯಿತು. ಈ ಸಮ್ಮೇಳನವು ಸೈಂಟ್ ಫಿಲೋಮಿನಾಸ್ ಕಾಲೇಜ್ (ಸ್ವಾಯತ್ತ) ಮೈಸೂರು,” ಸುಸ್ಥಿರ ಸಮರ್ಥನೀಯ ಅಭಿವೃಧ್ಧಿ ಪ್ಲಾಟ್ಫ಼ಾರಮ್’,’ಏಶಿಯಾ ಆಂಡ್ ಸೆವಿಯರ್ ರ್ಬೋರ್ಡ್ ಆಫ್ ಎಜುಕೇಶನ್ ಇನ್ ಇಂಡಿಯಾ’, ಈ ಮೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 2019ರ ಪೆಬ್ರುವರಿ 8 ಮತ್ತು 9ನೇ ದಿನಾಂಕಗಳಂದು ಆಯೋಜಿಸಲಾಗಿತ್ತು.
ಸಮರ್ಥನೀಯ ಅಭಿವೃಧ್ಧಿಯನ್ನು ಸಮರ್ಥವನ್ನಾಗಿರಿಸಲು’ ಒಂದರೊಳಗೊಂದನ್ನು ಅಡಕಿಸಿಡುವ’ ಮಾದರಿಯನ್ನು ರಚಿಸುವುದು ಈಎಸ್ಡಿಜಿಯ ಸೂಕ್ತಿಯಾಗಿರುತ್ತದೆ.
ಈ ಸಮ್ಮೇಳನದ ಆರಂಭವು ಕಾರ್ಯಾಗಾರವೊಂದರಿಂದ ಮೊದಲ್ಗೊಂಡಿತು. ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಗುಂಪು ಚಟುವಟಿಕೆಗಳ ಮೂಲಕ ರಚಿಸಿದ್ದ ಸೃಜನಶೀಲ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿತು. ಈ ಚಟುವಟಿಕೆಯ ನಂತರ, ಸರ್ವಸದಸ್ಯ ಅಧಿವೇಶನಗಳು ಮತ್ತು ಆಚಾರ್ಯ ತರಗತಿಗಳು ಪ್ರಭಾವಯುತ ಭಾಷಣಕಾರರಾದ, ಅರುಣ್ ಸುಬ್ರಮಣ್ಯಮ್, ಹಿರಿಯಪತ್ರಕರ್ತ; ರಾಬರ್ಟ್ ಸ್ಟೀಲ್, ಸುಸ್ಥಿರ ಸಮರ್ಥನೀಯ ಅಭಿವೃಧ್ಧಿ ಪ್ಲಾಟ್ಫ಼ಾರಮ್’ನ ಸದಸ್ಯ; ಜಹಾನ್ಜ಼ೇಬ್ಅಖ್ತರ್( ಐಆರ್ಎಸ್) ಪ್ರಿನ್ಸಿಪಲ್ ಕಮಿಶನರ್ ಅಪ್ ಇಂಕಾಮ್ ಟಾಕ್ಸ್ ಪಾಂಡಿಚೇರಿ; ಇಪ್ಶಿತಾ ಚತುರ್ವೇದಿ, ಸಮರ್ಥನೀಯ ಅಭಿವೃಧ್ಧಿಗೆ ಮುಡುಪಾಗಿಸಿಕೊಂಡಿರುವ ಮೊದಲ ಕಾನೂನು ಸಂಸ್ಥೆ ’ಸಿ & ಸಿ’ ಅಡ್ವೈಸರ್ಸ್’ ಇದರ ಸಹ-ಸ್ಥಾಪಕರು; ಪತ್ರಕರ್ತರು, ಪ್ರಕೃತಿ ತತ್ವವಾದಿ, ಮತ್ತು ಮಾನವ ಸಂಪನ್ಮೂಲ ತರಬೇತುಗಾರರು, ದೀಪಾಲನ್, ನೈಸರ್ಗಿಕವಾದಿ ; ಪವಿತ್ರ ಮೋಹನ್ ರಾಜ್, ಮೊದಲನೆ ಹಂತದ ಸ್ಟಾರ್ಟ್ಟ್-ಅಪ್’ ಸಂಸ್ಥೆಯಾದ ’ಇನಿಶಿಯೇಟಿವ್’ ನ ಸ್ಥಾಪಕರು; ಈ ಮುಂತಾದವರು ತಮ್ಮ ಸಕ್ರಿಯ ತೊಡಗುವಿಕೆಯೊಂದಿಗೆ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಾ ಸಭಿಕರಲ್ಲಿ ಅರಿವು ಮೂಡಿಸಿದರು.
ಫೆಬ್ರುವರಿ 9ರಂದು ಸಮ್ಮೇಳನವು ಸಮಾರೋಪಉತ್ಸವ ಆಚರಣೆಯೊಂದಿಗೆ ಮುಕ್ತಾಯಗೊಂಡಿತು. ಈ ಸಮಾರೋಪ ಸಭೆಯಲ್ಲಿ, ಫಾದರ್. ಲೆಸ್ಲಿ ಮೊರಾಸ್ ರವರು,, ಎಪಿಸ್ಕೋಪಲ್ ವಿಕಾರ್ ಫಾದರ್. ಬರ್ನಾರ್ಡ್ ಪ್ರಕಾಶ್ ಬಾರ್ನಿಸ್
, ಡಾ.ರೂತ್ ಶಾಂತಕುಮಾರಿ, ಹಾಗೂ ಇತರ ಸಂಪನ್ಮೂಲ ವ್ಯಕ್ತಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ತಂಡಗಳ ಸದಸ್ಯರುಗಳು 2 ದಿನಗಳ ಸಮ್ಮೇಳನದ ಬಗ್ಗೆ ತಮ್ಮ ಅನಿಸಿಕೆಗಳನ್ನು ಮುಂದಿಟ್ಟರು. ಮೈಸೂರಿನ ’ಪಬ್ಲಿಕ್ ಪಾಲಿಸಿ’ಅಭ್ಯರ್ಥಿ, ಖುಶಿ ಅವರು ಮುಂಬರುವ ’ವಿಟೂ/We too ಚಳವಳಿಯ ಕುರಿತು ದನಿ ಎತ್ತಿದರು.
ಫಾದರ್. ಲೆಸ್ಲಿ ಮೊರಾಸ್ ರವರು,ಸಮ್ಮೇಳನದ ಮುಕ್ತಾಯ ಭಾಷಣ ಮಾಡಿದರು. ತಮಿಳುನಾಡಿನ ತಿರುಚ್ಚಿ ನಗರದಿಂದ ಬಂದ ಕಿಶೋರ್ ಮತ್ತು ವೇಲನ್ ಇವರಿಬ್ಬರಿಗೂ ಅವರು ಮಾಡಿದ್ದ ಭಿತ್ತಿ ಪತ್ರವನ್ನು ಗುರುತಿಸಿ ಮೆಚ್ಚುಗೆಯ ಸಂಕೇತವಾಗಿ ಪ್ರಶಸ್ತಿ ನೀಡಲಾಯಿತು. ಡಾ.ರೂತ್ ಶಾಂತಕುಮಾರಿಯವರು ವಂದನಾರ್ಪಣೆ ಮಾಡಿದರು.
ಯುವಶಕ್ತಿಯಲ್ಲಿ ನಂಬಿಕೆ, ವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು ಮತ್ತು ಕೈಗೊಂಡಿದ್ದನ್ನು ಯಶಸ್ವಿಗೊಳಿಸ ಬಹುದು’ ಎಂಬ ಆಶಾ ಭಾವನೆಯೊಂದಿಗೆ ಸಮ್ಮೇಳನವು ಕೊನೆಗೊಂಡಿತು.
ಸೈಂಟ್ ಫಿಲೋಮಿನಾಸ್ ಕಾಲೇಜು ಸಿ ಐ ಪಿ ಇ ಟಿ-ಸಿ ಎಸ್ ಟಿ ಎಸ್ಒಂದಿಗೆ ಎಮ್ ಒ ಯು (ಮೆಮೊರ್ಯಾಂಡಮ್ ಆಫ್ ಅಂಡರ್ ಸ್ಟ್ಯಾಂಡಿಂಗ್) ಸಹಿ.
ಸೈಂಟ್ ಫಿಲೋಮಿನಾಸ್ ಕಾಲೇಜು ಮತ್ತು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಪ್ರಾಸೆಸ್ಸಿಂಗ್ ಅಂಡ್ ಎಂಜಿನಿಯರಿಂಗ್ ಟೆಕ್ನಾಲಜಿ (ಸಿ ಐ ಪಿ ಇ ಟಿ) CIPET ಸೆಂಟರ್ ಫಾರ್ ಸ್ಕಿಲ್ಲಿಂಗ್ ಅಂಡ್ ಟೆಕ್ನಿಕಲ್ ಸಪೋರ್ಟ್(ಸಿ ಎಸ್ ಟಿ ಎಸ್‍ಅSಖಿS),ಮೈಸೂರು, ಈ ಸಂಸ್ಥೆಗಳ ನಡುವೆ, ಅವರ ಸಹಯೋಗಿ ಯೋಜನೆಗಳ / ಚಟುವಟಿಕೆಗಳ ವರ್ಧನೆಗೆ ವಿದ್ವತ್ಪೂರ್ಣ ವಿಚಾರಗಳ ವಿನಿಮಯಕ್ಕೆ ಒಪ್ಪಂದ ಪತ್ರಕ್ಕೆ(MoU) ಗೆ 2018 ರ ಅಕ್ಟೋಬರ್ 18ರಂದು ಅಧಿಕೃತವಾಗಿ ಸಹಿ ಹಾಕಲಾಗಿದೆ. ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಆಶ್ರಯದಡಿಯಲ್ಲಿ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ.
ಈ ಒಪ್ಪಂದ ಪತ್ರದ ಮತ್ತೊಂದು ಉದ್ದೇಶವೇನೆಂದರೆ, ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಎರಡು ಸಂಸ್ಥೆಗಳ ನಡುವೆ ಶೈಕ್ಷಣಿಕ, ತರಬೇತಿ ಮತ್ತು ತಾಂತ್ರಿಕ ಸಹಕಾರದಲ್ಲಿ ಸಾಮಾನ್ಯ ಅಥವಾ ಸಹಯೋಗವುಳ್ಳ ಕಾರ್ಯಪೂರಕ ಸಂಬಂಧವನ್ನು ಗುರುತಿಸುವುದಾಗಿರುತ್ತದೆ. ಸೈಂಟ್ ಫಿಲೋಮಿನಾಸ್ ಕಾಲೇಜು ಮತ್ತು ಸಿ ಐ ಪಿ ಇ ಟಿ, ಇವೆರೆಡೂ ಸಂಸ್ಥೆಗಳು, ರಸಾಯನ ಶಾಸ್ತ್ರ ಶಿಕ್ಷಕ ಸಿಬ್ಬಂದಿಯವರಿಗೆ ವೃತ್ತಿಪರ ಅಭಿವೃಧ್ಧಿ ಕಾರ್ಯಕ್ರಮಗಳು, ಯೋಜನೆ ಕಾರ್ಯಗಳು, ರಸಾಯನ ಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ಕಾರ್ಖಾನೆ ಸ್ಥಳದಲ್ಲೇ ತರಬೇತಿ, ಶೈಕ್ಷಣಿಕ ಪಠ್ಯಕ್ರಮದ ಅಭಿವೃಧ್ಧಿ, ಹಾಗೂ ವಿದ್ಯಾರ್ಥಿಗಳಿಗೆ ’ಪ್ಲಾಸ್ಟಿಕ್ ಪ್ರಾಸೆಸ್ಸಿಂಗ್ ಅಂಡ್ ಮೌಳ್ಡಿಂಗ್ ಟೆಕ್ನಾಲಜಿ’ ಈ ವಿಷಯಗಳಲ್ಲಿ ಉನ್ನತ ಶೀಕ್ಷಣ ಪಡೆಯಲು ಶಿಫಾರಸ್ಸು ಪತ್ರ ನೀಡುವುದು, ಈ ಮುಂತಾದ ಕಾರ್ಯಗಳನ್ನು ಜಂಟಿಯಾಗಿ ಕೈಗೊಳ್ಳಲು ಸಮ್ಮತಿಸಿರುತ್ತವೆ..
ಒಪ್ಪಂದ ಪತ್ರಕ್ಕೆ ಸಹಿ ಹಾಕಿ ಸಪ್ರಮಾಣಗೊಳಿಸುವ ಕಾರ್ಯಕ್ರಮವನ್ನು ಸೈಂಟ್ ಫಿಲೋಮಿನಾಸ್ ಕಾಲೇಜ್ ನ ಸಮ್ಮೇಳನ ಸಭಾಂಗಣದಲ್ಲಿ ಶಿಕ್ಷಕ ಸಿಬ್ಬಂದಿಯ ಉಪಸ್ಠಿತಿಯಲ್ಲಿ ನಡೆಸಲಾಯಿತು. ಈ ಒಪ್ಪಂದ ಪತ್ರಕ್ಕೆ ಸಿಐಪಿಎಟಿ-ಸಿ ಎಸ್ ಟಿ ಎಸ್ ಯಿಂದ ಆರ್.ಟಿ.ನಗರಹಳ್ಳಿ, ನಿರ್ದೇಶಕರು ಮತ್ತು ಸುಮನ್, ಆಡಿಳಿತಾಧಿಕಾರಿ, ಮತ್ತು ಕಾಲೇಜಿನ ಕಡೆಯಿಂದ ಪ್ರಾಂಶುಪಾಲರಾದ ಡಾ.ಟಿ.ರೂತ್ಶಾಂತಕುಮಾರಿ ಮತ್ತು ರೆವೆರೆಂಡ್.ಡಾ. ಬರ್ನಾರ್ಡ್ ಪ್ರಕಾಶ್ ಬಾರ್ನಿಸ್ , ಕಾಲೇಜಿನ ರೆಕ್ಟರ್ / ನಿರ್ವಹಣಕಾರರು, ಈ ನಾಲ್ವರೂ ಸಹಿ ಹಾಕಿರುತ್ತರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ರೂತ್ ಶಾಂತಕುಮಾರಿಯವರು, ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದು ಎರಡೂ ಸಂಸ್ಥೆಗಳಿಗೆ ಒಂದು ಮುಹೂರ್ತ ವಾಗಿದೆ ಎಂದು ಹೇಳುತ್ತಾ, ಇಂತಹ ಪಾಲುಗಾರಿಕೆಗಳು ಸಂಸ್ಥೆಗಳಿಗೆ ಸ್ವಾವಲಂಬನೆಯ ವ್ಯಾಪಕ ಗುರಿಗಳನ್ನು ಸಾಧಿಸಲು ಅನುವು ಮಾಡುವುದೆಂದು ಹೇಳಿದರು. ಕಾಲೇಜಿನ ಸಿಬ್ಬಂದಿವರ್ಗದವರನ್ನು ಉದ್ದೇಶಿಸಿ, ಈ ಒಪ್ಪಂದ ಪತ್ರದಿಂದ ಪ್ರೇರೇಪಿತರಾಗಿ ಇತರ ಹೆಸರಾಂತ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಶ್ರಮಿಸಬೇಕೆಂದು ಕರೆ ನೀಡಿದರು.
ಆರ್.ಟಿ.ನಗರಹಳ್ಳಿ ಸಿಐಪಿಎಟಿ-ಸಿಎಸ್ಟಿಎಸ್ ಇದರ ನಿರ್ದೇಶಕರು, ಅವರ ಸಂಸ್ಥೆಯನ್ನು ಬಗ್ಗೆ ಪರಿಚಯಿಸಿದರು. ವಿದ್ಯಾರ್ಥಿಗಳು ಇಂಟರ್ನ್ ಗಿರಿ, ಮತ್ತು ಯೋಜನಾಕಾರ್ಯಗಳ ರೂಪದಲ್ಲಿ ಕೌಶಲ ತರಬೇತಿ ಪಡೆಯಲು ಅವರನ್ನು ಪ್ರೇರೇಪಿಸಬೇಕೆಂದು ಬೋಧನಾ ಸಿಬ್ಬಂದಿಯವರಲ್ಲಿ ಮನವಿ ಮಾಡಿಕೊಂಡರು.
ಡಾ.ರವಿ .ಡಿ.ಸಲ್ಡಾನ್ಹ, ರಸಾಯನ ಶಾಸ್ತ್ರದ ಅಸಿಸ್ಟೆಂಟ್ ಪ್ರೊಫೆಸರ್, ಸೈಂಟ್.ಲೋಮಿನಾಸ್ ಕಾಲೇಜ್(ಸ್ವಾಯತ್ತ), ಸ್ವಾಗತ ಕೋರಿದರು. ಶ್ರೀ. ರೊನಾಲ್ಡ್ ಪ್ರಕಾಶ್ ಕುಟಿನ್ಹಾ ಅವರು ವಂದನಾರ್ಪಣೆ ಸಲ್ಲಿಸಿದರು.
———————————————————————–
ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ಸಮರ್ಥನೀಯ ಅಭಿವೃಧ್ಧಿ ಗುರಿಗಳನ್ನು ಮುಂತರಲು ’ಜ್ಞಾನಪಾಲುಗಾರಿಕೆ” ಪ್ರಯುಕ್ತ 2ನೇ ಅಂತರ್ರಾಷ್ಟ್ರೀಯ ಸಮ್ಮೇಳನ.
“ಸಾಧುವೆನ್ನಬಹುದಾದ ಜೀವನ ಶೈಲಿಗಳತ್ತ ಮತ್ತು ಅಂತರ್ವಿಷ್ಟ ಸಮಾಜದತ್ತ’
2019ರ ಫ಼ೆಬ್ರುವರಿ 8, 9 ನೇ ದಿನಾಂಕಗಳಂದು ಸೈಂಟ್. ಫಿಲೋಮಿನಾಸ್ ಕಾಲೇಜು,ಮೈಸೂರು ಹಾಗೂ ಕ್ಸೇವಿಯರ್ ಬೋರ್ಡ್ ಆಫ಼್ ಹೈಯರ್ ಎಜುಕೇಶನ್, ಈ ಎರಡೂ ಸಂಸ್ಥೆಗಳ ಪಾಲುಗಾರಿಕೆಯಲ್ಲಿ.
ಉನ್ನತ ಶಿಕ್ಷಣ ಸಂಸ್ಥೆಗಳ ಸಾಮರ್ಥ್ಯವನ್ನು ವರ್ಧಿಸುವುದು ಸಮ್ಮೇಳನದ ಉದ್ದೇಶವಾಗಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮಸಾಮರ್ಥ್ಯ, ಕೌಶಲ, ದೋರಣೆಗಳನ್ನು ವೃಧ್ಧಿಗೊಳಿಸಿಕೊಳ್ಳುವತ್ತ ಅವರನ್ನು ಅಭಿಮುಖವಾಗಿಸಲು ಪ್ರತಿಯೊಂದು ಕ್ಷೇತ್ರದ ಆಯಾ ವಿಷಯಗಳ ತಜ್ಞರಿಂದ ಆಚಾರ್ಯ ತರಗತಿಗಳನ್ನು ನಡೆಸಿಕೊಡಲಾಗುವುದು. ಈ ಆಚಾರ್ಯ ತರಗತಿಗಳಲ್ಲಿ ಸಮರ್ಥನೀಯ ಭವಿಷ್ಯಕ್ಕಾಗಿ ಅಂತರ್ಗತ ಸಮಾಜಗಳನ್ನು ಕಟ್ಟಲು, ಉದ್ಯೋಗಗಳನ್ನು ಸೃಷ್ಟಿಸಲು ಶಿಕ್ಷಣದ ಹಲವಾರು ಆಯಾಮಗಳನ್ನು ಸಂಯೋಜಿಸಲಾಗಿರುತ್ತದೆ. ಈ ಸಮ್ಮೇಳನದ ಕೆಲವು ಸೂಚಕ ವಿಷಯಗಳು ಇಂತಿವೆ – ಹವಾಮಾನ ಬದಲಾವಣೆ; ಹವಾಮಾನ ಬದಲಾವಣೆ ಕಾರ್ಯಗಳ ಮೇಲೆ ಅವಲಂಬಿಸಿರುವ ಆರ್ಥಿಕ ವರ್ತುಲಗಳು; ಅಂತರ್ಗತ ಸಮಾಜಗಳ ನಿರ್ಮಾಣ; ವಿಪತ್ತಿನಿಂದಾಗುವ ಹಾನಿಗಳ ಕಡಿತ; ಹವಾಮಾನ ಬದಲಾವಣೆ ಮತ್ತು ಚೇತರಿಕೆ; ವಿಪತ್ತು ಅಪಾಯ ವಿಮೆ; ಕ್ಷೇತ್ರಾವರಣಗಳನ್ನು ಹಸಿರುಗೊಳಿಸುವುದು;
ನವೀಕರಿಸಬಹುದಾದ ಶಕ್ತಿ; ಸಮರ್ಥನೀಯ ಮತ್ತು ಅಂತರ್ಗತ ನಗರಗಳಿಗೆ ವಿದ್ಯುಚ್ಛಕ್ತಿ ವಾಹಕ ಬಲೆಗಳಿಲ್ಲದ(’ಆಫ಼್ ಗ್ರಿಡ್) ಪರಿಹಾರಗಳು; ಸಮರ್ಥನೀಯ ಅಭಿವೃಧ್ಧಿಗಾಗಿ ದತ್ತಾಂಶವಿಶ್ಲೇಷಕ; ವಿನ್ಯಾಸ ಮತ್ತು ವ್ಯವಸ್ಥೆಗಳ ಪರ್ಯಾಲೋಚನೆ; ಸಮರ್ಥನೀಯ ಅಭಿವೃಧ್ಧಿಗಾಗಿ ಕೌಶಲ ಮತ್ತು ವೃತ್ತಿಪರ ಶಿಕ್ಷಣಕ್ಕೆ ಅವಕಾಶಗಳು; ಸಮಗ್ರ ಆರೋಗ್ಯದತ್ತ; ಬೌದ್ದಿಕ ಆಸ್ತಿ ನಿಯಮಗಳ ಗ್ರಹಿಕೆ ಮತ್ತು ಕಾರ್ಯ.

ಸೈಂಟ್ ಫಿಲೋಮಿನಾಸ್ ಕಾಲೇಜ್ (ಸ್ವಾಯತ್ತ), ಮೈಸೂರು. ಈ ಸಂಸ್ಥೆಗೆ ರೂಸ ಅನುದಾನ.
ಮಾನವಸಂಪನ್ಮೂಲಅಭಿವೃಧ್ಧಿಮಂತ್ರಾಲಯವು’ರಾಷ್ಟ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ್’ (ಆರ್ಯುಎಸ್ಎ / ರೂಸ) ಯೋಜನೆಯಅಡಿಯಲ್ಲಿಅಂಶ8, ಇದನ್ನುನನುಸರಿಸಿ ಅಪೇಕ್ಷಿಸಲ್ಪಟ್ಟ ಗುರಿ, ’ಉನ್ನತ ಶಿಕ್ಷಣದಲ್ಲಿ ಶೈಕ್ಷಣಿಕ ಉತ್ಕೃಷ್ಟತೆ’ ಸಾಧಿಸಿದಕಾರಣ 5ಕೋಟಿ ರೂಪಾಯಿಗಳ ಅನುದಾನ ನೀಡಲು ಸೈಂಟ್ ಫಿಲೋಮಿನಾಸ್ ಕಾಲೇಜ್, ಮೈಸೂರು. ಇದನ್ನು, ಆಯ್ಕೆಮಾಡಿರುತ್ತದೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯು (ಕೆ ಹೆಚ್ ಇ) ಕೊಲೆಜಿಯೇಟ್ ಶಿಕ್ಷಣ ವಿಭಾಗದ ಮೂಲಕ ಹೊರಡಿಸಿದ ಹಾಗೂ ಎಮ್ ಹೆಚ್ ಆರ್ ಡಿ(ರೂಸ) ಇದರ ಜಾಲತಾಣದಲ್ಲಿ ಮಂಡಿಸಿರುವ ಸುತ್ತೋಲೆಯಲ್ಲಿ, 2018ರ ಮೇ ತಿಂಗಳಲ್ಲಿ ನಡೆದ ’ದ ಮಿನಟ್ಸ್ ಆಫ್ ಪ್ರಾಜೆಕ್ಟ್ ಅಪ್ರೂವಲ್ ಮಂಡಳಿಯ ಸಮಾಲೋಚನಾ ಸಭೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಲಿಯ[ಕೆ ಎಸ್ ಹೆಚ್ ಎ] ಟಿಪ್ಪಣಿಯ ಪ್ರಕಾರ, ಎಮ್ ಎಚ್ ಆರ್ ಡಿ ಯಿಂದ ನೀಡಲ್ಪಡುವ ಅನುದಾನವು ’ಗುಣಮಟ್ಟ ವರ್ಧನೆ ಮತ್ತು ಉತ್ಕೃಷ್ಟತೆ’ ಸಾಧಿಸುವ ಏಕೈಕ ಕಾರಣಕ್ಕೆ ರೂಸ 8, ಈ ಅಂಶದ ಅಡಿಯಲ್ಲಿ ಆಯ್ಕೆಗೊಂಡಿರುವ ಸ್ವಾಯತ್ತ ಕಾಲೇಜ್ ಗಳಿಗೆ ಬಿಡುಗಡೆ ಮಾಡುವಂತೆ ಸೈಂಟ್.ಫಿಲೋಮಿನಾಸ್ಕಾಲೇಜಿಗೆಬಿಡುಗಡೆಯಾಗಿರುತ್ತದೆ. ನ್ಯಾಕ್ ಸಿ ಜಿ ಪಿ ಎ 3.51 ನಷ್ಟು ಮತ್ತು ಅದಕ್ಕೂ ಮೇಲ್ಪಟ್ಟು ಅಂಶ ಹೊಂದಿರುವ ಮತ್ತು ಯು ಜಿ ಸಿ ಯ ಸ್ವಯಮಾಧಿಕಾರ ನಿಯಮಗಳ ಅಡಿಯಲ್ಲಿ ಕಾಲೇಜುಗಳಿಗೆ ಬೋಧನೆಯ ಗುಣಮಟ್ಟ ವರ್ಧನೆಗೆ ಮತ್ತು ಸಂಶೋಧನೆಗೆ ಬೆಂಬಲ ಒದಗಿಸಲಾಗುತ್ತದೆ.
ಈ ಅನುದಾನವು ಕಾಲೇಜಿನ ಮೂಲಸೌಕರ್ಯ ಸಂಪನ್ಮೂಲಗಳಿಗೆ ಹೊಸ ಆಯಾಮವನ್ನು ಒಸಗಿಸುವುದು. ಇದರಿಂದ ಉನ್ನತ ಶಿಕ್ಷಣಕ್ಕೆ ಗುಣಮಟ್ಟ ಮತ್ತು ಒಳ್ಳೆಯ ಛಾಪನ್ನೂ ಒದಗಿಸಲು ಸಹಾಯ ಮಾಡುತ್ತದೆ. ಈ ಅನುದಾನವು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು, ನವೀಕರಣಗೊಳಿಸಲು ಮತ್ತು ಸುಧಾರಣೆಗೊಳಿಸಲು, ಹೊಸ ಉಪಕರಣಗಳನ್ನು ಖರೀದಿಸಲು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಮಟ್ಟದಲ್ಲಿ ಉಪಯೋಗಿಸಲ್ಪಡುವುದು.
ಗುಣಮಟ್ಟ ವರ್ಧನೆ ಮತ್ತು ಉತ್ಕೃಷ್ಟತೆ ಇವೆರೆಡನ್ನೂ ಗುರಿಯಾಗಿಟ್ಟುಕೊಂಡು ಎಮ್ ಹೆಚ್ ಆರ್ ಡಿ ಹಾಗೂ ಕೆ ಎಸ್ ಹೆಚ್ ಇ – ವಿಧಿಸಿರುವ ಮಾದರಿಗಳನ್ನನುಸರಿಸಿ ಅನುಮೋದನೆಯಾಗಿರುವ ಅನುದಾನವನ್ನು ಬಳಕೆ ಮಾಡಲು ಸಾಂಸ್ಥಿಕ ಅಭಿವೃಧ್ಧಿ ಯೋಜನೆ(ಐಡಿಪಿ), ಭೌತಿಕ ಮತ್ತು ಹಣಹೂಡುವಿಕೆ, ಮತ್ತು (5 ರಿಂದ 10 ವರುಷಗಳ) ಉದ್ದೇಶಿತ ಕಾರ್ಯತಂತ್ರ ಯೋಜನೆಯೊಂದನ್ನು ತಯಾರಿಸಬೇಕಿರುತ್ತದೆ.
ಹೊಸ ತರಗತಿಗಳ, ಶೌಚಾಲಯಗಳ, ಗಣಕ ಯಂತ್ರ ಪ್ರಯೋಗಾಲಯಗಳ ನಿರ್ಮಾಣ; ಪ್ರಯೋಗಾಲಯಗಳ, ಕ್ರೀಡಾ ಸೌಲಭ್ಯಗಳ, ವ್ಯಾಸಂಗ ಮತ್ತು ಆಡಳಿತ ಕಟ್ಟಡಗಳ, ವಿದ್ಯಾರ್ಥಿನಿಲಯಗಳ ಆಧುನೀಕರಣ ಮತ್ತು ಸಬಲೀಕರಣ ಮಾಡಿ ಈ ಎಲ್ಲದರ ನವೀಕರಣಕ್ಕೆ; ಜ್ಞಾನ ಸಂಪನ್ಮೂಲಗಳ ಸುಲಭ್ಯತೆ ಮತ್ತು ಗ್ರಂಥಾಲಯಗಳ ಸಬಲೀಕರಣಕ್ಕೆ; ಹೊಸ ಆಸನೋಪಕರಣಗಳನ್ನು ಮತ್ತು ನೆಲೆವಸ್ತುಗಳನ್ನು ಖರೀದಿಸಲು; ಈ ಎಲ್ಲಾ ಅವಶ್ಯಕ ಕ್ಷೇತ್ರಗಳಿಗೆ ಅನುದಾನವನ್ನು ಬಳಸಲಾಗುತ್ತದೆ
———————————————————————————-
ಹವಾಮಾನ ಬದಲಾವಣೆ ಕುರಿತು 3 ದಿನಗಳ ಅಂತರ್ ರಾಷ್ಟ್ರೀಯ ಸಮ್ಮೇಳನ.

ಹವಾಮಾನ ಬದಲಾವಣೆಯಿಂದಾಗಿರುವ ಪರಿಣಾಮಗಳು ಮಹತ್ತರ ಹಾಗೂ ನೈಜವಾದ ಸತ್ಯ. ಇದರಿಂದುಂಟಾಗುತ್ತಿರುವ ಕಟುವೇದನೆಯನ್ನು ಹಲವಾರು ರೂಪಗಳಲ್ಲಿ ಈಗಿನ ಮಾನವ ತಲೆಮಾರು ಅನುಭವಿಸುತ್ತಿದೆ. ಹವಾಮಾನ ಬದಲಾವಣೆಯು ಅತ್ಯಂತ ಗಮನ ಸೆಳೆದಿರುವ ಜಾಗತಿಕ ಮತ್ತು ದೇಶೀಯ ವಿದ್ಯಮಾನವಾಗಿರುತ್ತದೆ. ಇದರ ಪರಿಣಾಮವು ಬಹುಮುಖಿಯಾಗಿದ್ದು ನಮ್ಮ ಗ್ರಹದ ಮೇಲಿರುವ ಬಹುತೇಕ ಜೀವಿಗಳ ಎಲ್ಲಾ ಅಂಶಗಳನ್ನು ಸ್ಪರ್ಶಿಸುತ್ತದೆ. ಬದಲಾವಣೆಯು ಜೀವರಾಶಿಗಳ ವಿಕಸನಕ್ಕೆ ಅನಿವಾರ್ಯವಾದರೂ, ಪ್ರಸ್ತುತ ಹವಾಮಾನ ಬದಲಾವಣೆಯು ತೀವ್ರ ಗತಿಯದ್ದಾಗಿದ್ದು, ಅಷ್ಟೇ ಅಲ್ಲದೆ, ಅದು ಹೆಚ್ಚಾಗಿ ಮಾನವಜನ್ಯವಾಗಿದ್ದು ನಮ್ಮ ಭೂಮಿಗೆ ಮತ್ತು ಅದರ ನಿವಾಸಿಗಳಿಗೆ ದೊಡ್ಡ ಕೇಡನ್ನು ಒಡ್ಡಿದೆ.
ಪ್ರಸ್ತುತ ಸನ್ನಿವೇಶದ ಗಂಭೀರತೆಯನ್ನು ಗ್ರಹಿಸುತ್ತಾ, ನಮ್ಮ ಕಾಲೇಜಿನ ವಿವಿಧ ವ್ಯಾಸಂಗ ವಿಭಾಗಗಳು, ಪರಿಸರ ವಿಜ್ಞಾನ ಮತ್ತು ಸಾರ್ವಜನಿಕ ಕ್ರಿಯಾವಾದ ವಿಚಾರ ಕ್ಷೇತ್ರಗಳ ಕೆಲ ಸಲಹೆಗಾರರೊಂದಿಗೆ ಮಾಡಿದ ಉದ್ದೇಶಪೂರ್ವಕ ಚರ್ಚೆಗಳ ನಂತರ ಕಾಲೇಜು ಹವಾಮಾನ ಬದಲಾವಣೆ ಕುರಿತು 3 ದಿನಗಳ ಅಂತರ್ ರಾಷ್ಟ್ರೀಯ ಸಮ್ಮೇಳನವನ್ನು 2015ರ ಏಪ್ರಿಲ್ ತಿಂಗಳ 9ನೇ ದಿನಾಂಕದಿಂದ 11ನೇ ದಿನಾಂಕದವರೆಗೆ ಯಶಸ್ವಿಯಾಗಿ ಸಂಘಟಿಸಿರುತ್ತದೆ.
ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಅನುಭವಗಳನ್ನು ಹಂಚಿಕೊಂಡು ಅವನ್ನು ನಿಭಾಯಿಸುವ ಕಾರ್ಯ ವಿಧಾನಗಳನ್ನು ವ್ಯವಸ್ಥಿತವಾಗಿ ನಿರೂಪಿಸಲು ಈ ಸಮ್ಮೇಳನವು ಒಂದು ಅವಕಾಶ ಎಂಬ ಕಲ್ಪನೆಯೊಂದಿಗೆ ಸಮ್ಮೇಳನವನ್ನು ಸಂಘಟಿಸಲಾಗಿತ್ತು. ಸ್ಥಳೀಯ ಮಟ್ಟದಲ್ಲಿ ಭಾಗವಹಿಸುವಿಕೆಯನ್ನು ಸಚೇತನಗೊಳಿಸಲೆಂದು ಸಮ್ಮೇಳನಕ್ಕೆ ಪೂರ್ವಭಾವಿಯಾಗಿ, ಪ್ರಬಂಧ ಸ್ಫರ್ಧೆ, ಭಿತ್ತಿಪತ್ರ ಸ್ಫರ್ಧೆ, ಘೋಷಣೆ ಬರವಣಿಗೆ ಸ್ಫರ್ಧೆ, ರಸಪ್ರಶ್ನೆ ಸ್ಫರ್ಧೆ, ಮಾದರಿ ತಯಾರಿಕೆ ಸ್ಫರ್ಧೆ, ಈ ಎಲ್ಲಾ ಚಟುವಟಿಕೆಗಳನ್ನು ಸಾಮಾನ್ಯ ವಿಷಯ ಪಠ್ಯಕ್ರಮಗಳ ಮತ್ತು ವೃತ್ತಿಪರ ಪಠ್ಯಕ್ರಮಗಳ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು.
—————————————————————-
ಟೆಡ್ ಎಕ್ಸ್ಎಸ್ ಪಿ ಸಿ – ಸೈಂಟ್,ಫಿಲೋಮಿನಾಸ್ಕಾಲೇಜ್, ಮೈಸೂರು.,
ವಿಶ್ವವಿಖ್ಯಾತ ‘ಟೆಡ್ ಎಕ್ಸ್’ ಕಾರ್ಯಕ್ರಮವನ್ನು ಸೈಂಟ್,ಫಿಲೋಮಿನಾಸ್ಕಾಲೇಜ್ಆಯೋಜಿಸಿರುತ್ತದೆ.
ಸೈಂಟ್ ಫಿಲೋಮಿನಾಸ್ ಕಾಲೇಜ್, ಮೈಸೂರು.,ಟೆಡ್ ಎಕ್ಸ್ಎಸ್ ಪಿ ಸಿ, ಇದು ಕಾಲೇಜಿನ ಸಭಾಂಗಣದಲ್ಲಿ 2018 ರ ಏಪ್ರಿಲ್ ತಿಂಗಳ 29ನೇ ದಿನಾಂಕದಂದು ಸ್ವತಂತ್ರವಾಗಿ ಆಯೋಜಿಸಿದ ಕಾರ್ಯಕ್ರಮವಾಗಿರುತ್ತದೆ. ಈ ಕಾರ್ಯಕ್ರಮವನ್ನು ಮೈಸೂರಿನ ಮಹಾರಾಜರಾದ ಶ್ರೀಮನ್ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉದ್ಘಾಟಿಸಿದರು. ಡಾ. ಥಾಮಸ್ ಅಂತೋಣಿ ವಾಳಪಲ್ಲಿ, ಬಿಶಪ್ ಎಮೆರಿಟಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೆವರೆಂಡ್. ಶ್ರೇಷ್ಠ ಗುರು ಲೆಸ್ಲಿ ಮೊರಾಸ್ ಎಪಿಸ್ಕೋಪಲ್ ವಿಕಾರ್ ಎಮ್ ಡಿ ಇ ಎಸ್ , ಡಾ.ಟಿ. ರೂತ್ ಶಾಂತಕುಮಾರಿ, ಕಾಲೇಜಿನ ಪ್ರಾಂಶುಪಾಲರು ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀಮನ್ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ಮೈಸೂರಿನ ಶ್ರೀಮಂತ ಪರಂಪರೆಯನ್ನು ಸಮರ್ಥನೀಯವಾಗಿಸಲು ಈ ಕಾರ್ಯಕ್ರಮವು ಎಷ್ಟು ಮುಖ್ಯವೆಂದು ಹೇಳುತ್ತಾ, ಇದೇ ರೀತಿಯ ಚರ್ಚೆಗಳು ಮೈಸೂರಿನ ಆಸ್ಥಾನಗಳಲ್ಲಿ ನಡೆಯುತ್ತಿದ್ದವೆಂದು ಇತಿಹಾಸದಿಂದ ಕೆಲವು ನಿದರ್ಶನಗಳನ್ನು ಉದಹರಿಸಿ ಹೇಳಿದರು.
ಹವಾಮಾನ ಬದಲಾವಣೆ, ಆರೋಗ್ಯ ಮತ್ತು ಜೀವನಶೈಲಿ, ಕಲೆ, ಮನೋರಂಜನೆ, ಅಂತರ್ ಧರ್ಮ ಸಾಮರಸ್ಯ ಈ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಪರಿಣತೆಯನ್ನು ಹೊಂದಿರುವಂತಹ 16 ಭಾಷಣಕಾರರು ಸಮರ್ಥನೀಯ ಸಮಾಜದ ಅಭಿವೃಧ್ಧಿಯ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಟಾಸ್ಕ್ ಎಜುಕೇಶನ್ ಚ್ಯಾರಿಟಬಲ್ ವೆಲ್ಫ಼ೇರ್ ಟ್ರಸ್ಟ್, ಭಾರತ್ ಇಂಟರ್ ನ್ಯಾಶನಲ್ ಟೂರ್ಸ್ ಅಂಡ್ ಟ್ರಾವೆಲ್ಸ್, ಫೋರಮ್ ಸೆಂಟ್ರಲ್ ಮಾಲ್, ಕಾರ್ನಿಶ್ ಕೆಫೆ, 21 ಡಿಗ್ರೀಸ್, ಟೆಕ್ರೆಫ್ ಸೊಲ್ಯುಶನ್ಸ್ ಪ್ರೈವೆಟ್ ಲಿಮಿಟೆಡ್ ಮತ್ತು ಹೊನ್ನಸಿರಿ ನಿಸ್ಸಾನ್, ಈ ಮೊದಲಾದ ಸಂಸ್ಥೆಗಳು ಈ ಟೆಡ್ ಎಕ್ಸ್ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.
ಈ ಕಾರ್ಯಕ್ರಮದ ಸಂಯೋಜಕರ ಮತ್ತು ಸಹ-ಸಂಯೋಜಕರ ವಂದನಾರ್ಪಣೆಯೊಂದಿಗೆ ಈ ಟೆಡ್ ಎಕ್ಸ್ಎಸ್ ಪಿ ಸಿ ಕಾರ್ಯಕ್ರಮವು ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಗಿಡಗಳ ಸಸಿಗಳನ್ನು ಕೊಡುಗೆಯಾಗಿ ನೀಡಲಾಯಿತು.
———————————————————————-
ಶಿಕ್ಷಕ ವರ್ಗದವರಿಗೆ ಬೋಧನೆ ಮತ್ತು ಕಲಿಕೆ. ಈ ವಿಷಯ ಕುರಿತು 2 ದಿನಗಳ ಶಿಕ್ಷಕವರ್ಗ ಅಭಿವೃಧ್ಧಿ ಕಾರ್ಯಕ್ರಮ (ಎಫ್ ಡಿ ಪಿ)
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಸ್ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವೆಲಪ್ಮೆಂಟ್(ಎಸ್ ಡಿ ಐ ಎಮ್ ಡಿ) ಮತ್ತು ಸೈಂಟ್,ಫಿಲೋಮಿನಾಸ್ಕಾಲೇಜ್, ಮೈಸೂರು., ಕಾಲೇಜಿನ ಶಿಕ್ಷಕರಿಗೆ 2 ದಿನಗಳ ’ಬೋಧನೆ ಮತ್ತು ಕಲಿಕೆ’ ಈ ವಿಷಯದಲ್ಲಿ ಶಿಕ್ಷಕವರ್ಗ ಅಭಿವೃಧ್ಧಿ ಕಾರ್ಯಕ್ರಮವನ್ನು 2019ರ ಮಾರ್ಚ್ ತಿಂಗಳ 21 ಮತ್ತು 22ನೇ ದಿನಾಂಕಗಳಂದು ಎಸ್ ಡಿ ಒ ಐ ಎಮ್ ಡಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿತ್ತು. ’ಬೋಧನೆ ಮತ್ತು ಕಲಿಕೆ’ (ಎಫ್ ಡಿ ಪಿ), ಈ ಕಾರ್ಯಕ್ರಮದಲ್ಲಿ, ಪಠ್ಯಕ್ರಮದ ನೀಡಿಕೆಯಲ್ಲಿ ಹಾಗೂ ಪ್ರವಚನ ವೈಖರಿಯಲ್ಲಿ ಆಗಿರುವ ಪ್ರಗತಿಪರ ವಿಚಾರಗಳನ್ನು ಮತ್ತು ’ಬೋಧನೆ ಮತ್ತು ಕಲಿಕೆ’ ಪ್ರಕ್ರಿಯೆಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದನ್ನು ಪರಿಚಯಿಸುವುದರ ಬಗ್ಗೆ ಗಮನವನ್ನು ಕೇಂದ್ರೀಕರಿಸಲಾಗಿತ್ತು.

ಡಾ.ಜಗದೀಶ್, ಪ್ರೊಫೆಸರ್, ಎಸ್ ಡಿ ಎಮ್ ಐ ಎಮ್ ಡಿ, ಅವರು ಕಾರ್ಯಕ್ರಮದ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಸ್ವಾಗತಿಸಿ, ಕಾರ್ಯಕ್ರಮದ ಪಕ್ಷಿ ನೋಟವನ್ನು ಪ್ರಸ್ತುತಪಡಿಸಿದರು.ರೆವೆರೆಂಡ್.ಫಾದರ್.ಡ.ಬರ್ನಾರ್ಡ್ಪ್ರಕಾಶ್ಬರ್ನಿಸ್,ರೆಕ್ಟ್ಟರ್, ಸೈಂಟ್ ಫಿಲೋಮಿನಾಸ್ ಕಾಲೇಜ್ ಸಂಸ್ಥೆಗಳು, ಡಾ.ಎನ್.ಆರ್.ಪರಶುರಾಮನ್, ನಿರ್ದೇಶಕರು, ಎಸ್ ಡಿ ಎಮ್ ಐ ಎಮ್ ಡಿ; ಡಾ.ಗಾಯತ್ರಿ, ಉಪನಿರ್ದೇಶಕರು, ಎಸ್ ಡಿ ಎಮ್ ಐ ಎಮ್ ಡಿ; ಮತ್ತು ಡಾ.ಟಿ.ರೂತ್ ಶಾಂತಕುಮಾರಿ, ಪ್ರಾಂಶುಪಾಲರು, ಸೈಂಟ್ ಫಿಲೋಮಿನಾಸ್ ಕಾಲೇಜ್ ಸಂಸ್ಥೆಗಳು, ಈ ಎಲ್ಲಾ ಗಣ್ಯ ವ್ಯಕ್ತಿಗಳೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಜಾಲತಾಣಗಳಿಂದ ಯಥೇಷ್ಟ ಮಾಹಿತಿ ಲಭ್ಯವಿರುವುದರಿಂದ, ಶಿಕ್ಷಕರ ಪಾತ್ರದಲ್ಲಿ ಬದಲಾವಣೆ ಉಂಟಾಗಿ, ಅವರು ವಿದ್ಯಾರ್ಥಿಗಳಿಗೆ ಸುಗಮಕಾರರಾಗಿ, ಮಾರ್ಗದರ್ಶಕರಾಗಿ, ಸ್ನೇಹಿತರಾಗಿ ಮತ್ತು ತತ್ವ ಜ್ಞಾನಿಗಳಾಗಿರುತ್ತಾರೆ. ಈಗ ತಾಂತ್ರಿಕತೆಯ ಅಳವಡಿಕೆಯ ಬಗ್ಗೆ, ಇತ್ತಿಚಿನ ಹೊಸ ಹೊಸ ಬೆಳವಣಿಗೆಗಳ ಬಗ್ಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವತ್ತ ಶಿಕ್ಷಕರ ಪಾತ್ರಗಳು ರೂಪಾಂತರಗೊಳ್ಳಬೇಕಿರುತ್ತದೆ, ಔದ್ಯೋಗಿಕ ಕ್ಷೇತ್ರಗಳಲ್ಲಿ ಬದಲಾಗುತ್ತಿರುವ ಬೇಡಿಕೆಗಳಿಗೆ ಪ್ರತಿಕ್ರಿಯಾಶೀಲರಾಗಿರಬೇಕಿರುತ್ತದೆ, ಯಾವುದೇ ಶಿಕ್ಷಣ ಸಂಸ್ಥೆಯ ಪ್ರಮುಖ ಭಾಗೀದಾರರಾದ ವಿದ್ಯಾರ್ಥಿ ಸಮುದಾಯದ ಶೈಕ್ಷಣಿಕ ಅವಶ್ಯಕತೆಗಳ ಕುರಿತು ಸಕ್ರಿಯಶೀಲರಾಗಿರಬೇಕಿರುತ್ತದೆ, ಎಂದು ವ್ಯಕ್ತಪಡಿಸಿದರು.
ಡಾ.ಎನ್.ಆರ್.ಪರಶುರಾಮನ್,ಅವರು ಸಭಿಕರನ್ನುದ್ದೇಶಿಸಿ ಮಾತನಾಡುವಾಗ, ಸೈಂಟ್ ಫಿಲೋಮಿನಾಸ್ ಕಾಲೇಜ್ ನ ಆಂತರಿಕ ಗುಣಮಟ್ಟ ಅಳವಡಿಕೆಯ ಕೋಶ (ಐ ಕ್ಯು ಎ ಸಿ) ವು ಶಿಕ್ಷಕರ ನೆರವಿಗಾಗಿ ಶಿಕ್ಷಕ ವರ್ಗ ಅಭಿವೃಧ್ಧಿ ಕಾರ್ಯವನ್ನು ನೀಡುವುದರಲ್ಲಿ ಮಾಡುತ್ತಿರುವ ಶ್ರಮವನ್ನು ಪ್ರಶಂಸಿಸಿದರು. ಅಂತೆಯೇ ಮುಂದುವರಿದು, ಬೋಧನಾ ಸಮುದಾಯದ ಸಾಮರ್ಥ್ಯ ದಕ್ಷತೆ ಮತ್ತು ವಿಶ್ವಾಸವನ್ನು ಅವರಲ್ಲಿ ನೆಲೆಗೊಳಿಸಲು ಈ ರೀತಿಯ ಕಾರ್ಯಕ್ರಮಗಳು ನಿಯತಕಾಲಿಕವಾಗಿ ಸಂಯೋಜಿಸಬೇಕೆಂದು ವಿವರಿಸಿದರು.
ಈ ಸಂದರ್ಭಲ್ಲಿ ಮಾತನಾಡಿದ ರೆವೆರೆಂಡ್. ಫಾದರ್.ಡಾ. ಬರ್ನಾರ್ಡ್ ಪ್ರಕಾಶ್ ಬಾರ್ನಿಸ್ ಅವರು, ಗುಣಮಟ್ಟ ಶಿಕ್ಷಣ ನೀಡುವುದರಲ್ಲಿ ಅಡ್ಡಿ ಬರುವ ಅಡಚಣೆಗಳನ್ನು ತೊಡೆದು ಹಾಕಲು ಶೈಕ್ಷಣಿಕ ತಾಂತ್ರಿಕತೆಯು ನೆರವಾಗುವುದು ಎಂದು ಅಭಿಪ್ರಾಯ ಪಟ್ಟರು. ಡಾ.ಗಾಯತ್ರಿ ಯವರು ಕಾರ್ಯಕ್ರಮವನ್ನು ಸಂಘಟಿಸಿದ ಎರಡೂ ಸಂಸ್ಥೆಗಳ ಶ್ರಮವನ್ನು ಪ್ರಶಂಸಿಸಿದರು. ಎಸ್ ಡಿ ಎಮ್ ಐ ಎಮ್ ಡಿ; ಸಂಸ್ಥೆಯ ಇನ್ನಿತರ ಸಂಪನ್ಮೂಲ ವ್ಯಕ್ತಿಗಳಾದ, ಡಾ. ಸುನಿಲ್. ಎಮ್.ವಿ, ಗ್ರಂಥಪಾಲಕರು, ಪ್ರೊಫೆಸರ್.ಮಿನ್ಹಜ್, ಶಿಕ್ಷಕವರ್ಗ-ವ್ಯವಸ್ಥೆಗಳು; ಡಾ.ವಿನಯ್, ಸ್ಥಾಪಕ ಮತ್ತು ಸಿ ಇ ಒ. ಪೈರೂಬಿ ಮತ್ತು ಸೈಂಟ್ ಫಿಲೋಮಿನಾಸ್ ಕಾಲೇಜ್ ನ ಸಂಯೋಜಕರಾದ ಶ್ರೀ. ರೊನಾಲ್ಡ್ ಪ್ರಕಾಶ್ ಕುಟಿನ್ಹಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಭಾಗವಹಿಸಿದವರಿಗೆ ಪ್ರಮಾಣಪತ್ರಗಳನ್ನು ವಿತರಿಸುವ ಮತ್ತು ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು2019ರ ಮಾರ್ಚ್ 22ನೇ ದಿನಾಂಕದಂದು ನಡೆಯಿತು. ಪ್ರೊಫೆಸರ್. ಅಗ್ನಿಸ್ಡಿ’ಸೌಜ಼ಾ, ಮುಖ್ಯಸ್ಥೆ ವಿಜ್ಞಾನವಿಭಾಗ, ಸೈಂಟ್ ಫಿಲೋಮಿನಾಸ್ ಕಾಲೇಜ್, ಮೈಸೂರು. ಇವರು ಸಮಾರೋಪ ಭಾಷಣವನ್ನು ಮಾಡಿ ಪ್ರಮಾಣ ಪತ್ರಗಳನ್ನು ನೀಡಿದರು. ನಂತರದಲ್ಲಿ, ಭಾಗವಹಿಸಿದವರು ಕಾರ್ಯ ಕ್ರಮದ ಬಗ್ಗೆ ಮಾಹಿತಿಯನ್ನು ನೀಡುತ್ತಾ ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದರು.